ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ (ukraine russia conflict) ಮುಂದುವರೆದಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗತೊಡಗಿದೆ. ರೊಮೇನಿಯನ್ ಮತ್ತು ಪೋಲೆಂಡ್ ಗಡಿಯಲ್ಲಿ ನಿಯೋಜಿಸಲಾದ ಸೈನಿಕರು ಭಾರತೀಯ ವಿದ್ಯಾರ್ಥಿಗಳಿಗೆ (Indian students) ಕಿರುಕುಳ ನೀಡಿ ಹಲ್ಲೆ (harassed, beaten) ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು, ಯುದ್ದಪೀಡಿದ ಉಕ್ರೇನ್- ಪೋಲೆಂಡ್ ಗಡಿ ಪ್ರದೇಶದಲ್ಲಿ (Poland-Ukraine border) ನಿಯೋಜಿಸಲಾದ ಸೈನಿಕರಿಂದ ಭಾರತೀಯ ವಿದ್ಯಾರ್ಥಿಗಳಿಗೆ ಕಿರುಕುಳ ಮತ್ತು ಹಲ್ಲೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತುತ್ತು ಅನ್ನ, ನೀರು ಇಲ್ಲದೇ ಹಪಹಪಿಸುತ್ತಿರುವ ನಮಗೆ ಸುರಕ್ಷಿತವಾಗಿ ತೆರಳಲು ಸರಿಯಾದ ಮಾರ್ಗವನ್ನು ಸೂಚಿಸುತಿಲ್ಲ ಬದಲಿಗೆ ನಮ್ಮನ್ನು ಒತ್ತೆಯಾಳುಗಳಂತೆ ನೋಡುತಿದ್ದಾರೆ ಎಂದು ದೂರಿದ್ದಾರೆ.
ರಾತ್ರಿ ಚಿತ್ರೀಕರಿಸಿದ ವೀಡಿಯೊವೊಂದರಲ್ಲಿ, ವಿದ್ಯಾರ್ಥಿಯೊಬ್ಬ ತನ್ನ ಸೂಟ್‌ಕೇಸ್ ಅನ್ನು ಅವನ ಹಿಂದೆ ವೀಲಿಂಗ್ ಮಾಡುತ್ತಿರುವಾಗ ಸಮವಸ್ತ್ರದಲ್ಲಿರುವ ಗಾರ್ಡ್ ಅವರಿಗೆ ಒದೆಯುತ್ತಾನೆ. ವಿದ್ಯಾರ್ಥಿ ಭಾರತೀಯನೇ ಎಂಬುದು ಸ್ಪಷ್ಟವಾಗಿಲ್ಲವಾದರೂ ಪೋಲೆಂಡ್-ಉಕ್ರೇನ್ ಗಡಿಯಲ್ಲಿ ಹಲವಾರು ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅವರು ಭಾರತೀಯ ವಿದ್ಯಾರ್ಥಿಗಳಿಗೆ ರಾಡ್‌ಗಳಿಂದ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದಾರೆ. ಮಹಿಳಾ ವಿದ್ಯಾರ್ಥಿಗಳ ಕೂದಲನ್ನು ಎಳೆದಾಡಿ ಕಿರುಕುಳ ನೀಡುತಿದ್ದಾರೆ. ಕೆಲವು ಮಹಿಳಾ ವಿದ್ಯಾರ್ಥಿಗಳಿಗೆ ಫ್ಯಾಕ್ಚರ್ ಆಗಿದೆ ಮತ್ತು ಗಾಯಗಳಿಗೆ ಒಳಗಾಗಿದ್ದಾರೆ”. ನಮ್ಮನ್ನು ಪೋಲೆಂಡ್‌ಗೆ ಹೋಗಲು ಬಿಡುತ್ತಿಲ್ಲ. ಎಂದು ಭಾರತೀಯ ವಿದ್ಯಾರ್ಥಿನಿ ಮಾನ್ಸಿ ಚೌಧರಿ (Mansi Chaudhary) ಉಕ್ರೇನ್‌ನಲ್ಲಿ ತನ್ನ ಕಾರಿನಿಂದ NDTV ಗೆ ತಿಳಿಸಿದರು.
“ಭಾರತೀಯ ರಾಯಭಾರಿ ಕಚೇರಿಯ ರಾಜತಾಂತ್ರಿಕರು ನಮಗೆ ಆಹಾರ ಮತ್ತು ಆಶ್ರಯ ಸಹಾಯ ಮಾಡುತ್ತಿದ್ದಾರೆ. ಗಡಿ ಕಾವಲುಗಾರರು ನಮ್ಮನ್ನು ದಾಟಲು ಬಿಡುತ್ತಿಲ್ಲ. ಯಾರಾದರೂ ದಾಟಲು ಪ್ರಯತ್ನಿಸಿದರೆ, ಅವರು ರಾಡ್‌ಗಳಿಂದ ಹೊಡೆದ ಹಲ್ಲೆ ಮಾಡುತಿದ್ದಾರೆ. ನಿನ್ನೆ ಕೂಡ ಅವರು ಗುಂಡು ಹಾರಿಸಿದ್ದಾರೆ” ಎಂದು ಮಾನ್ಸಿ ಚೌಧರಿ ಹೇಳಿದ್ದಾರೆ. ಚೌಧರಿ ಅವರು ಸತತ ಮೂರು ದಿನಗಳ ನಂತರ ಉಕ್ರೇನ್-ಪೋಲೆಂಡ್ ಗಡಿಯಿಂದ ವಾಪಸ್ ಹಿಂದಿರುಗುತ್ತಿದ್ದಾರೆ.

ಸುಮಿ ನ್ಯಾಷನಲ್ ಯೂನಿವರ್ಸಿಟಿಯ (Sumy National University) ನರವಿಜ್ಞಾನದ ವಿದ್ಯಾರ್ಥಿಯಾಗಿರುವ ದೀಕ್ಷಾ ಪಾಂಡೆ (Deeksha Pandey) ಅವರು ಪರಿಸ್ಥಿತಿಯ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ್ದು, ಗಡಿ ಭಾಗದ ಜನರು ತೊಂದರೆಗೀಡಾಗಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ, ಹೆಣ್ಣುಮಕ್ಕಳನ್ನು ಕೂದಲಿನಿಂದ ಎಳೆದು ಹಿಂಸಿಸುತ್ತಿದ್ದಾರೆ, ಈ ಆಕ್ರಮಣಕ್ಕೆ ಕಾರಣವೇನು ಎಂದು ನನಗೆ ತಿಳಿದಿಲ್ಲ, ”ಎಂದು ಅವರು ಹೇಳಿದರು.
ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಬಗ್ಗೆಯೂ ಕಿಡಿಕಾರಿದ ದೀಕ್ಷಾ ಪಾಂಡೆ, “ಕೈವ್‌ನಿಂದ ಆಯಾ ಪಶ್ಚಿಮ ನಗರಗಳಿಗೆ ಕೆಲವು ರೈಲು ವೇಳಾಪಟ್ಟಿಗಳಿವೆ, ಪ್ರಯಾಣಿಸಲು ಸೂಕ್ತವಾದ ಪರಿಸ್ಥಿತಿ ಇದೆ ಎಂದು ಭಾರತೀಯ ರಾಯಭಾರ ಕಚೇರಿಯ ಸಲಹೆಗಾರರು ಹೇಳುತ್ತಾರೆ. ಈ ಸಲಹೆಗಳು ನಿಜಕ್ಕೂ ತುಂಬಾ ಅಪಾಯಕಾರಿ. ನಮಗಿಲ್ಲಿ ದಿನಸಿ ವಸ್ತುಗಳನ್ನೇ ತರಲು ಸಾಧ್ಯವಾಗುತ್ತಿಲ್ಲ ಆದರೆ ನಗರದಿಂದ ನಗರಕ್ಕೆ ಹೇಗೆ ಪ್ರಯಾಣಿಸಲು ಸಾಧ್ಯ? ನಮ್ಮ ಜೀವನಕ್ಕೆ ಪ್ರಾಮುಖ್ಯತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾವು ಏನು ಮಾಡಬೇಕು. ನಾವು ಇಲ್ಲಿ ಯಾರನ್ನು ನಂಬಬೇಕು ಎಂಬುದು ಅರ್ಥವಾಗುತ್ತಿಲ್ಲ. ನಮಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಲು ಇಲ್ಲಿ ಯಾರೂ ಇಲ್ಲ ಎಂದು ಹೇಳಿದರು.
ಉಕ್ರೇ ನ್ ಯುದ್ಧ ಹಿನ್ನೆಲೆಯಲ್ಲಿ ಹಲವು ವಿಶ್ವ ವಿದ್ಯಾ ನಿಲಯಗಳಲ್ಲಿ, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಮತ್ತು ಇನ್ನಿತರೆ ವಿದ್ಯಾಭ್ಯಾಸದಲ್ಲಿ ತೊಡಗಿರುವ ಸಾವಿರಾರು ಭಾರತೀಯ ವಿದ್ಯಾ ರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಬರಲು ಹರಸಾಸಹಮಾಡುತ್ತಿದ್ದು , ಪೋಲಂಡ್ ಗಡಿಯಲ್ಲಿ ಅತಂತ್ರರಾಗಿದ್ದಾರೆ.
ಉಕ್ರೇನ್ನಿಂದ ಬರುವ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ವೀಸಾ ನಿರ್ಬಂಧಗಳಿಲ್ಲದೆ ಪ್ರವೇಶಿಸಲು ಪೋಲೆಂಡ್ ಅನುಮತಿ
ಉಕ್ರೇನ್ನಿಂದ (Ukraine) ದೇಶವಾಸಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಭಾರತದ ವಿನಂತಿಯನ್ನು ಸ್ವೀಕರಿಸಿರುವ ಪೋಲೆಂಡ್ (Poland) ಈಗ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ವೀಸಾ ನಿರ್ಬಂಧಗಳಿಲ್ಲದೆ ಯುದ್ಧಪೀಡಿತ ರಾಷ್ಟ್ರದಿಂದ ಪ್ರವೇಶಿಸಲು ಅವಕಾಶ ನೀಡುತ್ತದೆ.
ಭಾರತೀಯ ರಾಯಭಾರ ಕಚೇರಿ ಭಾನುವಾರ ಮಾರ್ಗಸೂಚಿ ಹೊರಡಿಸಿ, ಭಾರತೀಯ ಪ್ರಜೆಗಳು ಸಂಘರ್ಷ ವಲಯಗಳಿಂದ ದೂರ ಹೋಗುವಂತೆ ಸೂಚಿಸಿದೆ. ಪೋಲೆಂಡ್, ರೊಮೇನಿಯಾ ಮತ್ತು ಹಂಗೇರಿ ಗಡಿಯಲ್ಲಿ ಚೆಕ್ಪಾಯಿಂಟ್ಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಗಡಿ ಚೆಕ್‌ಪೋಸ್ಟ್‌ಗಳಿಗೆ ಹೊರಡುವಂತೆ ಸೂಚಿಸಿದೆ.