• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸುದೀಪ್ ಸಿನಿಮಾ, ರಿಯಾಲಿಟಿ ಶೋ ಪ್ರಸಾರ-ಮರುಪ್ರಸಾರಕ್ಕೆ ತಡೆ ನೀಡಿ : ವಕೀಲ ದೂರು

Any Mind by Any Mind
April 6, 2023
in Top Story, ಕ್ರೀಡೆ, ದೇಶ, ರಾಜಕೀಯ
0
ಸುದೀಪ್ ಸಿನಿಮಾ, ರಿಯಾಲಿಟಿ ಶೋ ಪ್ರಸಾರ-ಮರುಪ್ರಸಾರಕ್ಕೆ ತಡೆ ನೀಡಿ : ವಕೀಲ ದೂರು
Share on WhatsAppShare on FacebookShare on Telegram

ಶಿವಮೊಗ್ಗ: ಏ.೦6: ನೀತಿ ಸಂಹಿತೆ ಅಂಶಗಳನ್ನ ಆಧಾರವಾಗಿಟ್ಟುಕೊಂಡು ಕಿಚ್ಚ ಸುದೀಪ್ ಸಿನಿಮಾ, ಜಾಹೀರಾತು, ರಿಯಾಲಿಟಿ ಶೋ ಪ್ರಸಾರ ನಿಲ್ಲಿಸಲು ಶಿವಮೊಗ್ಗ ಖ್ಯಾತ ವಕೀಲ ಶ್ರೀಪಾಲ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅವರಿಗೆ ಸ್ಪಂದನೆ ಸಿಕ್ಕಿದ್ದು ಮುಖ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲು ಕೋರಲಾಗಿದ್ದು ವಕೀಲರ ದೂರು ಸುದೀಪ್ ಗೆ ಕಂಟಕಪ್ರಾಯವಾಗಲಿದೆ ಎನ್ನಲಾಗಿದೆ.

ADVERTISEMENT

ವಕೀಲ ಶ್ರೀಪಾಲ್ ಮಾತನಾಡಿ, ಮೇ 10ನೇ ತಾರೀಕು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೊದಲೇ ಸಾಕಷ್ಟು ಚುನಾವಣೆ ತಯಾರಿಗಳು ನಡೆದಿದೆ. ಬಹಳ ಮುಖ್ಯವಾಗಿ ನಟ ನಟಿಯರನ್ನು ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಯಾವುದೇ ಒಂದು ಪಕ್ಷ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಪ್ರಚಾರ ಮಾಡಬೇಕಾದರೆ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಪಾಲಿಸಬೇಕು. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಖ್ಯಾತ ನಟರಾದಂತಹ ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳಲ್ಲೂ ಕೂಡ ಈಗಾಗಲೇ ಪ್ರಸಾರವಾಗಿದೆ. ಜನರನ್ನ ತಲುಪಿದೆ‌.

ಅವರ ಕೋಟ್ಯಾಂತರ ಅಭಿಮಾನಿಗಳಿರುವುದರಿಂದ ಚುನಾವಣಾ ನೀತಿ ಸಮಿತಿಯು ಜಾರಿಯಲ್ಲಿರುವದರಿಂದ ಇದು ಚುನಾವಣಾ ಆಯೋಗ ನೀಡಿರುವಂತಹ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಅವರ ತೀರ್ಮಾನ ಅವರಿಗೆ ಬಿಟ್ಟಿದ್ದು, ವೈಯಕ್ತಿಕವಾದದ್ದು. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ ಅವರ ಚಲನಚಿತ್ರಗಳನ್ನ ಪ್ರಸಾರ ಮಾಡುವುದು ಚಿತ್ರಮಂದಿರಗಳಲ್ಲಿ ಅವರ ಸಿನಿಮಾ ಪ್ರಸಾರವಾಗುವುದು ಅಥವಾ ಟಿವಿಯಲ್ಲಿ ಅವರ ಹಳೆ ಸಿನಿಮಾಗಳನ್ನು ತೋರಿಸುವುದು ಅವರು ಈಗಾಗಲೇ ಮಾಡಿರುವ ರಿಯಾಲಿಟಿ ಶೋಗಳ ರೀ ಟೆಲಿಕಾಸ್ಟಿಂಗ್ ಮಾಡುವುದನ್ನು ನಿರ್ಬಂಧಿಸಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ. ಈ ದೂರನ್ನ ಪರಿಗಣಿಸಿ ನನಗೆ ಮರು ಇ-ಮೇಲ್ ಸಂದೇಶ ರವಾನೆ ಮಾಡಿದ್ದಾರೆ. ನನ್ನ ದೂರನ್ನು ಮುಖ್ಯ ಚುನಾವಣಾ ಅಧಿಕಾರಿಗೆ ಕಳುಹಿಸಲು ಕೂಡ ಸೂಚಿಸಿದ್ದಾರೆ. ಈಗಾಗಲೇ ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗೂ ಕೂಡ ನಾನು ನೀಡಿದ್ದೇನೆ. ಇದನ್ನ ನಾನು ಫಾಲೋ ಮಾಡುತ್ತೇನೆ. ಸಾಮಾನ್ಯ ಜನರಿಗೆ ಚುನಾವಣಾ ಸಮಿತಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗುತ್ತೋ ಅಷ್ಟೇ ಪರಿಣಾಮಕಾರಿಯಾಗಿ ನಟನಿಗೂ ಆಗಬೇಕು.

ಉದಾಹರಣೆ ಶಿವಮೊಗ್ಗದಲ್ಲಿ ಮಾಜಿ ಪಿಎಂಎಸ್ ಬಂಗಾರಪ್ಪ ಅವರ ಪ್ರತಿಮೆಯನ್ನು ಮುಚ್ಚಿದ್ದಾರೆ. ಜನರಿಗೆ ಅವರ ಮುಖ ಕಾಣಬಾರದು ನೀತಿ ಸಂಹಿತೆ ವಿರುದ್ಧವಾಗಿದೆ ಎಂದು ಕ್ರಮ ಕೈಗೊಳ್ಳಲಾಗಿದೆ. ಯಾಕೆಂದರೆ ಬಂಗಾರಪ್ಪನವರಿಗೂ ಕೂಡ ಅಭಿಮಾನಿಗಳಿದ್ದರೂ ಇಷ್ಟೇ ಪ್ರಮಾಣದ ಇದಕ್ಕೂ ಹೆಚ್ಚಿಗೆ ಅಭಿಮಾನಿಗಳನ್ನ ಸಂಪಾದಿಸಬಹುದಾದಂತಹ ಒಬ್ಬ ನಟ ಸುದೀಪ್ ಗೆ ಈ ನಿಯಮಗಳು ಯಾಕೆ ಜಾರಿಯಾಗಬಾರದು..? ಆತ ಈಗ ಒಂದು ಪಕ್ಷದ ಪರ ಪ್ರಚಾರಕ್ಕೆ ನಿಂತಿದ್ದಾರೆ ಹೆಚ್ಚು ಜಾಹಿರಾತುಗಳನ್ನು ಮಾಡಿದ್ದಾರೆ. ಇವುಗಳನ್ನೆಲ್ಲ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಪಾಲ್ ಹೇಳಿದರು. ಹಾಗೆ ತಮಗೆ ಬಂದ ಇ-ಮೇಲ್ ಸಂದೇಶವನ್ನು ತೋರಿಸಿ ತಾವು ತಾರ್ಕಿಕ ಅಂತ್ಯ ಕಾಣುವವರೆಗೆ ಇದನ್ನ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

Tags: BJPbjpkarnatakaBS YeddyurappacmbommaiCongress PartyElection CommissionkichhasudeepLawyer's complaintMuniratnaRAshokreality showSudeep's movieಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿ
Previous Post

ಚುನಾವಣೆ ಹೊಸ್ತಿಲಲ್ಲಿ ಕರಾವಳಿಯಲ್ಲಿ ಬಿಜೆಪಿ ಹೊಸ ಅಸ್ತ್ರ : ಪ್ರವೀಣ್​ ನೆಟ್ಟಾರು ನೂತನ ಗೃಹ ಪ್ರವೇಶಕ್ಕೆ ಡೇಟ್​ ಫಿಕ್ಸ್​

Next Post

ಹಯವದನರಾಯರ ಹಿಂದೂ ಧರ್ಮ ಪ್ರೇಮ

Related Posts

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
0

ಬೆಂಗಳೂರು: ನಗರದ ತಾಳಗುಣಿ ಸಮೀಪ ಜಲಮಂಡಳಿ (BWSSB) ನಡೆಸುತ್ತಿದ್ದ ಕಾಮಗಾರಿಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ ಪರಿಣಾಮ 14 ವರ್ಷದ ಬಾಲಕನೊಬ್ಬ ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ....

Read moreDetails
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

February 2, 2026
ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

February 2, 2026
CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

February 2, 2026
Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

February 2, 2026
Next Post
ಹಯವದನರಾಯರ ಹಿಂದೂ ಧರ್ಮ ಪ್ರೇಮ

ಹಯವದನರಾಯರ ಹಿಂದೂ ಧರ್ಮ ಪ್ರೇಮ

Please login to join discussion

Recent News

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌
Top Story

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

by ಪ್ರತಿಧ್ವನಿ
February 2, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

by ಪ್ರತಿಧ್ವನಿ
February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?
Top Story

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

by ಪ್ರತಿಧ್ವನಿ
February 2, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!