ಮಂಗಳವಾರ ಕಾಂಗ್ರೆಸ್ ಹೆಸರೇಳದೆ ಬೆಲೆ ಏರಿಕೆ ಪ್ರತಿಭಟನೆಯನ್ನು ಟೀಕಿಸಿದ ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಟ ಮಂತ್ರ ಬಗ್ಗೆ ಮಾತನಾಡುವ ಮೂಲಕ ಪ್ರಧಾನಿ ಹುದ್ದೆಗಿರುವ ಗೌರವವನ್ನ ಕಳೆಯಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.
ನರೇಂದ್ರ ಮೋದಿಯವರಿಗೆ ರಾಷ್ಟ್ರದಲ್ಲಿನ ಬೆಲೆ ಏರಿಕೆ ಹಾಗೂ ನಿರುದ್ಯೋಗದ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದು ಬಯಸುತ್ತಿದೆ. ಆದರೆ ಈ ಜುಮ್ಲಾಜೀವಿಗೆ ಇದು ಕಾಣುತ್ತಿಲ್ಲವೇ ಎಂದು ಪ್ರಧಾನಿ ವಿರುದ್ದ ಹರಿಹಾಯ್ದಿದ್ದಾರೆ.
ಪ್ರಧಾನಿ ಮೋದಿಯವರೇ ನಿಮ್ಮ ಕರಾಳತನವನ್ನು ಮುಚ್ಚಿಕೊಳ್ಳಲು ಮಾಟ ಮಂತ್ರದಂತಹ ಮೂಢ ನಂಬಿಕೆಗಳ ಬಗ್ಗೆ ಮಾತನಾಡುವ ಮೂಲಕ ರಾಷ್ಟ್ರದ ಜನತೆಯ ಧಿಕ್ಕು ತಪ್ಪಿಸುವುದನ್ನು ನಿಲ್ಲಿಸಿ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಪ್ರಧಾನಿ ಹುದ್ದೆಗಿರುವ ಗೌರವವನ್ನ ನಿಲ್ಲಿಸಿ ಎಂದು ಕೆಂಡಕಾರಿದ್ದಾರೆ.