ನಂಜನಗೂಡು ನಗರಸಭೆ ಕಚೇರಿಯಲ್ಲಿರುವ ಕುರ್ಚಿಗಳು ಗಬ್ಬೆದ್ದು ನಾರುತ್ತಿವೆ.ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಕುರ್ಚಿಗಳಲ್ಲಿ ಕೂರಲು ಅಸಹ್ಯ ಪಡುತ್ತಿದ್ದಾರೆ.ಹಲವು ವರ್ಷಗಳಿಂದಲೂ ಇದೇ ಕುರ್ಚಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನ ಅಣಕಿಸುವಂತ್ತಿದೆ.ಕಚೇರಿಯಲ್ಲಿ ಅಳವಡಿಸಿರುವ ಯಾವುದೇ ಕುರ್ಚಿಗಳು ಕುಳಿತುಕೊಳ್ಳಲು ಯೋಗ್ಯವಾಗಿಲ್ಲ.ಪ್ರತಿವರ್ಷ ಆಯವ್ಯಯದಲ್ಲಿ ಪೀಠೋಪಕರಣಗಳಿಗಾಗಿ ಲಕ್ಷಾಂತರ ರೂ ಮೀಸಲಿಡಲಾಗುತ್ತಿದೆ.
ಆದರೆ ಇದುವರೆಗೆ ಯಾವುದೇ ಪೀಠೋಪಕರಣಗಳು ಇಲ್ಲಿ ಬದಲಾಗಿಲ್ಲ.ಅಭಿವೃದ್ದಿಯ ಮಂತ್ರ ಪಟಿಸಿ ಹಣ ಮಂಜೂರು ಮಾಡಿದ್ದ ಮಾಜಿ ಶಾಸಕರಾಗಿರುವ ಹರ್ಷವರ್ಧನ್ ರವರು ಬಿಡುಗಡೆ ಮಾಡಿದ ಹಣ ಯಾರ ಪಾಲಾಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ..? ಪ್ರತಿ ಆಯವ್ಯಯದಲ್ಲಿ ಮೀಸಲಿಡುತ್ತಿರುವ ಹಣ ಏನಾಯ್ತು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಆಗಾಗ ಅಭಿವೃದ್ದಿ ಮಂತ್ರ ಪಠಿಸುತ್ತಿರುವ ಹಾಲಿ ಶಾಸಕ ದರ್ಶನ್ ನಗರಸಭಾ ಕಚೇರಿಗೆ ಮೊದಲ ಭೇಟಿ ಇತ್ತಾಗ ಕಂಡುಬಂದಿದ್ದೇ ಸ್ವಚ್ಛತೆ ಇಲ್ಲದ ಕುರ್ಚಿಗಳು,ನಾಮಫಲಕವಿಲ್ಲದ ಕಛೇರಿ ಕಂಡು ಗರಂ ಆಗಿದ್ದರು. ನೂತನ ಶಾಸಕರು ಕೂಡಲೇ ಕುರ್ಚಿಗಳನ್ನ ಬದಲಿಸುವಂತೆ ಹಾಗೂ ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸಬೇಕೆಂದು ಸೂಚನೆ ನೀಡಿ ತಿಂಗಳುಗಳು ಕಳೆದರೂ ಕುರ್ಚಿಗಳು ಯಥಾ ಸ್ಥಿತಿಯಲ್ಲಿವೆ.ಇನ್ನಾದರೂ ದರ್ಶನ್ ಧೃವನಾರಾಯಣ್ ಮತ್ತೊಮ್ಮೆ ಭೇಟಿ ನೀಡಿ ಜಡ್ಡು ಗಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸರ್ಜರಿ ಮಾಡಿ ನಗರಸಭಾ ಆಡಳಿತ ಕಾರ್ಯವೈಕರಿಯನ್ನು ಚುರುಕು ಗೊಳಿಸಬೇಕಿದೆ. ಸಧ್ಯ ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪಕ್ಕೆ ಇಂತಹ ಬೆಳವಣಿಗೆಗಳು ಪುಷ್ಠಿ ನೀಡುತ್ತಿವೆ.ಇನ್ನಾದ್ರೂ ಸ್ವಚ್ಛವಾಗಿರುವ ಕುರ್ಚಿಗಳು ಇಲ್ಲಿ ಕಂಡುಬರುವುದೇ…?