• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, November 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸ್ಟಿಂಗ್ ಆಪರೇಷನ್ ಕೇಸ್ : ಕುಮಾರಸ್ವಾಮಿ-ಪ್ರಿಯಾಂಕ್ ಖರ್ಗೆ ನಡುವೆ ನಿಲ್ಲದ ವಾಕ್ಸಮರ!

Shivakumar by Shivakumar
November 2, 2026
in Top Story, ಕರ್ನಾಟಕ, ರಾಜಕೀಯ
0
Sting Operation Case: War of words between Kumaraswamy and Priyank Kharge continues!
Share on WhatsAppShare on FacebookShare on Telegram

ಬೆಂಗಳೂರು :  ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಕಾರ್ಯಾಚರಣೆ (Sting operation) ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಹಾಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಡುವೆ ಮಾತಿನ ಸಮರ ತಾರಕಕ್ಕೇರಿದೆ. ರಿತೇಶ್ ಪಾಂಡೆಗೆ ಮೊಬೈಲ್ ತಲುಪಿಸಿದ್ದು ಯಾರು ಎಂಬ ವಿಚಾರವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ವ್ಯಕ್ತವಾಗಿವೆ.

ADVERTISEMENT

ಯಾವ ರಿತೇಶ್ ಪಾಂಡೆ ನನಗೇನು ಗೊತ್ತು: ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

ತಮ್ಮ ಮೇಲಿನ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ, ತಾವೇನಾದರೂ ಮಾಡುವುದಿದ್ದರೆ ಬಹಿರಂಗವಾಗಿಯೇ ಮಾಡುತ್ತೇನೆ, ಕದ್ದುಮುಚ್ಚಿ ಮಾಡುವ ಅಗತ್ಯ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯ ನಿವಾಸದ ಕ್ಯಾಂಪ್ ಆಫೀಸ್‌ಗೆ ನೂರಾರು ಜನರು ಕೆಲಸಗಳಿಗೆ ಬಂದು ಹೋಗುತ್ತಾರೆ. ಅಂತಹವರನ್ನೆಲ್ಲ ತಮಗೆ ಲಿಂಕ್ ಮಾಡುವುದು ಸರಿಯಲ್ಲ ಎಂದು ಹೇಳಿರುವ ಅವರು, ರಿತೇಶ್ ಪಾಂಡೆ ಮುಖವನ್ನೇ ತಾವೆಂದೂ ನೋಡಿಲ್ಲ ಎಂದಿದ್ದಾರೆ. ಸುಮ್ಮನೆ ಕಟ್ಟುಕತೆಗಳನ್ನು ಕಟ್ಟುವ ಬದಲು ಆ ಮೊಬೈಲ್ ಫೋನ್ ಯಾರು ಕೊಟ್ಟರು, ಯಾತಕ್ಕಾಗಿ ಬಳಸಿಕೊಂಡರು ಎಂಬುದರ ಬಗ್ಗೆ ಪೂರ್ಣ ತನಿಖೆ ನಡೆಸಲಿ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾರೆ. ಇದೇ ವೇಳೆ ತಮ್ಮ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಚಂದನ್ ಹಾಗೂ ಮೋಹನ್ ಗೌಡ ಅವರು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರೂ, ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಕೂರಿಸಿ ವಾಪಸ್ ಕಳಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಖರೀದಿ ವೇಳೆ ಯಾರಿದ್ದರು ಎಂಬುದು ತಾಂತ್ರಿಕ ತನಿಖೆಯಲ್ಲಿ ಹೊರಬರಲಿದೆ: ಪ್ರಿಯಾಂಕ್ ಖರ್ಗೆ ತಿರುಗೇಟು

ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಕೌಂಟರ್ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿ ಅವರೇ ನೇರವಾಗಿ ಸ್ಟಿಂಗ್ ಮಾಡಿದ್ದಾರೆ ಎಂದು ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಿತೇಶ್ ಪಾಂಡೆಗೆ ಮೊಬೈಲ್ ಕಳುಹಿಸಿದ್ದು ಯಾರು, ಮೊಬೈಲ್ ಖರೀದಿ ಮಾಡುವ ಸಂದರ್ಭದಲ್ಲಿ ಯಾರಿದ್ದರು ಮತ್ತು ಅದನ್ನು ಎಲ್ಲಿಗೆ ಕೊಂಡೊಯ್ಯಲಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದಿದ್ದಾರೆ. ದೆಹಲಿ ಮೂಲದ ವ್ಯಕ್ತಿಯೊಂದಿಗೆ ಇವರಿಗಿರುವ ಸಂಬಂಧವೇನು ಹಾಗೂ ಅವರ ಕಚೇರಿ ಅಥವಾ ಮನೆಗೆ ಆ ವ್ಯಕ್ತಿ ಬಂದು ಮೊಬೈಲ್ ಪಡೆದಿದ್ದೇಕೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದು ಪೂರ್ಣ ಪ್ರಮಾಣದ ತಾಂತ್ರಿಕ ತನಿಖೆಯಾಗಿದ್ದು, ಸೂಕ್ತ ಸಮಯದಲ್ಲಿ ನಿರಾಕರಿಸಲಾಗದ ಪುರಾವೆಗಳನ್ನು ಮುಂದಿಡಲಾಗುವುದು ಎಂದು ಹೇಳಿದ್ದಾರೆ.

ರೈಲ್ವೆಯಲ್ಲಿ ಆಫ್‌ಲೈನ್‌ ಟಿಕೆಟ್ ಖರೀದಿಸುವವರಿಗೂ ₹10 ಲಕ್ಷ ವಿಮೆ : ಈ ರೀತಿ ಪಾವತಿಸಿದರೆ ಮಾತ್ರ ಲಭ್ಯ!

Tags: h.d. kumaraswamyPriyank KhargeSting Operation
Previous Post

ರೈಲ್ವೆಯಲ್ಲಿ ಆಫ್‌ಲೈನ್‌ ಟಿಕೆಟ್ ಖರೀದಿಸುವವರಿಗೂ ₹10 ಲಕ್ಷ ವಿಮೆ : ಈ ರೀತಿ ಪಾವತಿಸಿದರೆ ಮಾತ್ರ ಲಭ್ಯ!

Next Post

ವೋಟರ್ ಐಡಿ ಕಳೆದುಹೋಗಿದೆಯೇ? ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಿ ಡಿಜಿಟಲ್ ಕಾರ್ಡ್

Related Posts

ಸರ್ಜಾ ಕುಟುಂಬದ ಮದುವೆಗೆ ಮೇಘನಾ ರಾಜ್ ಹೋಗದಿದ್ದುದೇಕೆ? ಕೊನೆಗೂ ಮೌನ ಮುರಿದ ನಟಿ!
ಕರ್ನಾಟಕ

ಸರ್ಜಾ ಕುಟುಂಬದ ಮದುವೆಗೆ ಮೇಘನಾ ರಾಜ್ ಹೋಗದಿದ್ದುದೇಕೆ? ಕೊನೆಗೂ ಮೌನ ಮುರಿದ ನಟಿ!

by Shivakumar
November 3, 2026
0

ಇತ್ತೀಚೆಗೆ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರ ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಅಕ್ಟೋಬರ್ 19ರಂದು...

Read moreDetails
Sting Operation: Siddaramaiah meets Rahul Gandhi, expresses displeasure

ಸ್ಟಿಂಗ್ ಆಪರೇಷನ್ : ರಾಹುಲ್ ಗಾಂಧಿ ಭೇಟಿಯಾಗಿ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ

November 3, 2026
Good news for the people of the state: Price of Nandini curd reduced by ₹2 per litre!

ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ : ನಂದಿನಿ ಮೊಸರಿನ ದರ ಲೀಟರ್‌ಗೆ 2 ರೂಪಾಯಿ ಕಡಿತ!

November 3, 2026
Australia's explosive batter Glenn Maxwell bids goodbye to international cricket!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಗುಡ್ ಬೈ!

November 3, 2026
ಬೆಂಗಳೂರಿನಲ್ಲಿ ನಕಲಿ ಜೀವರಕ್ಷಕ ಔಷಧಿಗಳ ಜಾಲ ಪತ್ತೆ! ಇಡಿ ದಾಳಿ

ಬೆಂಗಳೂರಿನಲ್ಲಿ ನಕಲಿ ಜೀವರಕ್ಷಕ ಔಷಧಿಗಳ ಜಾಲ ಪತ್ತೆ! ಇಡಿ ದಾಳಿ

November 3, 2026
Next Post
Lost your Voter ID? Download the digital card right on your mobile

ವೋಟರ್ ಐಡಿ ಕಳೆದುಹೋಗಿದೆಯೇ? ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಿ ಡಿಜಿಟಲ್ ಕಾರ್ಡ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada