ಇಷ್ಟು ವರ್ಷಗಳ ಕಾಲ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ನಿಂತಿದ್ದ ನ್ಯಾಯ ದೇವತೆಯ ರೂಪ ಈಗ ಬದಲಾಗಿದೆ. ಇನ್ಮುಂದೆ ದೇಶದಲ್ಲಿ ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿ ಇರಲ್ಲ. ನ್ಯಾಯದೇವತೆಯ ಕಣ್ಣಿನ ಬಟ್ಟೆ ತೆಗೆಯಲಾಗಿದೆ.
ಇದೀದ ಹೊಸ ಸ್ವರೂಪದಲ್ಲಿ ನ್ಯಾಯದೇವತೆ ದರ್ಶನವಾಗಿದೆ. ನ್ಯಾಯದೇವತೆಯ ಕೈಯಲ್ಲಿ ಖಡ್ಗದ ಬದಲು ಭಾರತದ ಸಂವಿಧಾನ ನೀಡಿ ಕಣ್ಣಿನ ಪಟ್ಟಿಯನ್ನ ತೆಗೆದುಹಾಕಲಾಗಿದೆ.
ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ಅವರ ಸೂಚನೆ ಮೇರೆಗೆ, ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣಗೊಳಿಸಲಾಗಿದೆ.