ನೀವೂ ಮನೆಯಲ್ಲಿ ಅಡುಗೆ ಕೆಲಸಕ್ಕೆ ಕೆಲಸಗಾರರನ್ನು ಇಡ್ಕೊಂಡಿದ್ದೀರಾ ? ಹಾಗಿದ್ರೆ ಹುಷಾರ್, ಅಡುಗೆಯಲ್ಲಿ ಮೂತ್ರ ಬೆರೆಸುವ ವಿಕೃತ ಮನಸ್ಸಿನ ಜನರಿದ್ದಾರೆ. ಉತ್ತರ ಪ್ರದೇಶದ (uttar pradesh) ಗಾಜಿಯಾಬಾದ್ನಲ್ಲಿ ಈ ರೀತಿಯ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಮನೆಯೊಂದರ ಮನೆ ಕೆಲಸದಾಕೆ ತಯಾರಿಸುತ್ತಿದ್ದ ಅಡುಗೆ ಸೇವಿಸಿದ ಪರಿಣಾಮ ಮನೆಯವರಿಗೆ ಹಲವು ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಏನಾಗ್ತಿದೆ ಅಂತಾ ತಿಳಿಯೋದಕ್ಕೆ ಅನುಮಾನಗೊಂಡ ಮನೆ ಮಾಲೀಕ ಅಡುಗೆ ಮನೆಯಲ್ಲಿ ಮೊಬೈಲ್ ಕ್ಯಾಮರಾ (Mobile camera) ಅಳವಡಿಸಿದ್ದರು.

ಈ ಕ್ಯಾಮೆರದಲ್ಲಿ ಸೆರೆ ಸಿಕ್ಕ ದೃಶ್ಯ ನೋಡಿ ಮನೆ ಮಾಲಿಕರು ಶಾಕ್ ಆಗಿದ್ದಾರೆ. ಮನೆ ಕೆಲಸದ ಮಹಿಳೆ ತಾನು ತಯಾರಿಸುತ್ತಿದ್ದ ಚಪಾತಿ ಹಿಟ್ಟಿಗೆ ಮೂತ್ರ ಬೆರೆಸಿರುವುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ಘಟನೆ ಸಂಬಂಧ ಆರೋಪಿ ರೀನಾಳನ್ನ (Reena) ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮನೆ ಮಾಲೀಕಿ ಬೈಯುತ್ತಿದ್ದಿದ್ರಿಂದ ಸಿಟ್ಟಿಗೆದ್ದು ಈ ರೀತಿ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ.






