ದಾವಣಗೆರೆ ಜಿಲ್ಲೆ ಚನ್ನಗಿರಿ ಪೊಲೀಸ್ ಸ್ಟೇಷನ್ ಧ್ವಂಸ ಪ್ರಕರಣದ ಬಗ್ಗೆ ಶಾಸಕ ಶಿವಗಂಗಾ ಬಸವರಾಜ್, ಇಂತಹ ಗಲಭೆಗಳು ಸಹಜ ಪ್ರಕ್ರಿಯೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಚನ್ನಗಿರಿ ಕಾಂಗ್ರೆಸ್ ಶಾಸಕರಾಗಿರುವ ಶಿವಗಂಗಾ ಬಸವರಾಜ್ ಗಲಭೆ ಬಗ್ಗೆ ಉಡಾಫೆ ಉತ್ತರ ನೀಡಿದ್ದಾರೆ.

ಚನ್ನಗಿರಿ ಪೊಲೀಸ್ ಠಾಣೆ ಧ್ವಂಸಕ್ಕೆ ಯತ್ನ ನಡೆದಿರುವ ಪ್ರಕರಣದ ಬಗ್ಗೆ ಮಾತನಾಡುತ್ತ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಆಮಡಿದ್ದಾರೆ. ಉದ್ದೇಶ ಪೂರ್ವಕವಾಗಿ ಗಲಭೆ ಮಾಡಿಲ್ಲ, ಸಾವು ಆಗಿರೋರು ನಮ್ಮವರದ್ದೇ, ಗಲಾಟೆ ಮಾಡಿದವರೂ ನಮ್ಮವರೇ ಆಗಿದ್ದಾರೆ ಎಂದಿದ್ದಾರೆ ಕಾಂಗ್ರೆಸ್ ಶಾಸಕ.

ಸಾವು ಸಂಭವಿಸಿರೋದ್ರಿಂದ ಉದ್ರೇಕಗೊಂಡು ಗಲಾಟೆ ಮಾಡಿದ್ದಾರೆ ಅಷ್ಟೆ. ಗಲಾಟೆಯಲ್ಲಿ ಯಾವುದೇ ಸಾವು ನೋವು ಆಗಿಲ್ಲ.. ಯಾವ ಕೆಟ್ಟ ಉದ್ದೇಶವೂ ಇಲ್ಲ, ನೋವಿದ್ದಾಗ ಉದ್ರೇಕಗೊಂಡಿದ್ದಾರೆ.. ಕಾನೂನು ಸುವ್ಯವಸ್ಥೆಯನ್ನ ಗೃಹ ಸಚಿವ ಪರಮೇಶ್ವರ್ ಚೆನ್ನಾಗಿ ನಿರ್ವಹಣೆ ಮಾಡ್ತಿದ್ದಾರೆ ಎಂದಿದ್ದಾರೆ.

ಉದ್ರೇಕಗೊಂಡಾಗ ಸಣ್ಣಪುಟ್ಟ ವ್ಯತ್ಯಾಸ ಆಗುತ್ತವೆ ಎನ್ನುವ ಮೂಲಕ ಶಾಸಕ ಶಿವಗಂಗಾ ಬಸವರಾಜ್ ಸಮರ್ಥನೆಗೆ ಯತ್ನ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕೆಜಿ ಹಳ್ಳಿ, ಡಿಜೆ ಹಳ್ಳಿ ತರ ಆಗಿಲ್ಲ, ಎಲ್ಲರೂ ಚೆನ್ನಾಗಿ ಇದ್ದಾರೆ. ಲಾಕಪ್ ಡೆತ್ ಆಗಿದ್ಯಾ ಅಥವಾ ಸಹಜ ಸಾವ..? ಎಂಬುದು ತನಿಖೆಯಿಂದ ಗೊತ್ತಾಗಲಿದೆ ಅಂತಾನೂ ತಿಳಿಸಿದ್ದಾರೆ..