ಇಂಧನ ಸಚಿವ ಕೆಜೆ ಜಾರ್ಜ್(KJ George) ಅವರ ನೇತೃತ್ವದಲ್ಲಿ ಕರ್ನಾಟಕ ಎಲೆಕ್ಟ್ರಿಕ್ ವಾಹನಗಳಿಗೆ (Electric vehicles) ಅತ್ಯಂತ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಒದಗಿಸಿದ್ದು, ಆ ಮೂಲಕ ದೇಶದಲ್ಲೇ ಹೆಚ್ಚು ಇವಿ ಚಾರ್ಜಿಂಗ್(Charging) ಕೇಂದ್ರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಅಗ್ರ ಸ್ಥಾನ ಪಡೆದಿದೆ.
![](https://pratidhvani.com/wp-content/uploads/2024/02/WhatsApp-Image-2024-02-15-at-18.41.55-1024x547.webp)
ಇತ್ತೀಚಿನ ಅಂಕಿಅಂಶಗಳ ಪ್ರಕಾರ, 5,059 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳೊಂದಿಗೆ, ಕರ್ನಾಟಕವು ಮಹಾರಾಷ್ಟ್ರ(Maharashtra) ಮತ್ತು ದೆಹಲಿ(Delhi)ಯನ್ನು ಹಿಂದಿಕ್ಕುವ ಮೂಲಕ ದೇಶದಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕವು 2017 ರಲ್ಲಿ ಎಲೆಕ್ಟ್ರಿಕ್ ವೆಹಿಕಲ್ (EV) ನೀತಿಯನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಗಿದ್ದು ಈಗ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ಗಳನ್ನು ಹೊಂದಿರುವ ಮಹತ್ತರ ಹೆಗ್ಗಳಿಕೆಗೂ ಪಾತ್ರವಾಗಿರುವುದು ಅತ್ಯಂತ ಸಂತಸದ ವಿಷಯ.
#EnergyMinister #KJGeorge #Karnataka #Electricvehicles #EVcharging