ದೆಹಲಿ ಸರ್ಕಾರದ ಸುಪರ್ದಿಯಲ್ಲಿರುವ ತ್ಯಾಗರಾಜ ಸ್ಟೇಡಿಯಂನಲ್ಲಿ ಕ್ರೀಡಾಪಟುಗಳು ಹಾಗು ತರಬೇತುದಾರರಿಗೆ ಸಂಜೆ 7 ಘಂಟೆಯೊಳಗೆ ತಮ್ಮ ಅಭ್ಯಾಸವನ್ನು ಮುಗಿಸಿಕೊಂಡು ಹೊರಡುವಂತೆ ಸೂಚಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಸಂಜೆ ಸುಮಾರು 7:30ರ ಸುಮಾರಿಗೆ ತಮ್ಮ ನಾಯಿ ಸ್ಟೇಡಿಯಂ ಒಳಗೆ ವಾಕಿಂಗ್ ಬರುವುದರಿಂದ ಕ್ರೀಡಾಂಗಣದ ಸಿಬ್ಬಂದಿ ಈ ರೀತಿ ಮಾಡುತ್ತಿದ್ದಾರೆ ಎಂದು ಕ್ರೀಡಾಪಟುಗಳು ಅರೋಪಿಸಿದ್ದಾರೆ.
ಪ್ರತಿನಿತ್ಯ ನಾವು ರಾತ್ರಿ ಸುಮಾರು 8:30ರವರೆಗು ಅಭ್ಯಾಸವನ್ನ ನಡೆಸಿ ಹೊರಡುತ್ತಿದ್ದೇವು ಆದರೆ, ಅಧಿಕಾರಿಯು ತನ್ನ ನಾಯಿಯ ಜೊತೆ ಬರಲು ಶುರು ಮಾಡಿದ ಸಮಯದಿಂದ ನಮ್ಮ ತರಬೇತಿ ಸಮಯ ಬದಲಾಗಿದೆ ಎಂದು ತರಬೇತುದಾರರೊಬ್ಬರು ದೂರಿದ್ದಾರೆ.

ಆದರೆ, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ಖಿರ್ವಾರ್ ಈ ವಿಚಾರವನ್ನ ಸಂಪೂರ್ಣವಾಗಿ ಅಲ್ಲಗೆಳೆದಿದ್ದು ಕಲೆವೊಮ್ಮೆ ನಾನು ನನ್ನ ಸಾಕು ಪ್ರಾಣಿಯೊಂದಿಗೆ ಅಲ್ಲಿಗೆ ಹೋಗುತ್ತೇನೆ ಹಾಗೆಂದ ಮಾತ್ರಕ್ಕೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಇದು ಹೇಗೆ ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ನನ್ನಿಂದ ಹಾಗು ನನ್ನ ಶ್ವಾನ ದಿಂದ ಯಾರಿಗಾದರು ಅಡ್ಡಿಯಾಗಿರುವುದು ಕಂಡು ಬಂದರೆ ನಾನು ಆ ಕ್ಷಣದಿಂದಲ್ಲೇ ಬರುವುದನ್ನು ನಿಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಮಿತ್ರರೊಬ್ಬರು ಸತತ ಏಳು ದಿನಗಳ ಕಾಲ ಕ್ರೀಡಾಂಗಣದಲ್ಲಿ ರಹಸ್ಯ ಕಾರ್ಯಚರಣೆ ನಡೆಸಿದ್ದು, ಪ್ರತಿನಿತ್ಯ ಸರಿಸುಮಾರು 6:30-7:00ರ ಸುಮಾರಿಗೆ ವಾಚ್ಮಾನ್ಗಳು ಅಲ್ಲಿರುವ ಜನರನ್ನು ಹೊರಗೆ ಕಳುಹಿಸಿದರೆ, 7:30ರ ಸುಮಾರಿಗೆ ಅಧಿಕಾರಿ ಬರುವುದನ್ನು ಖಚಿತಪಡಿಸಿದ್ದಾರೆ.
ನಂತರ ಖಿರ್ವಾರ್ ಕ್ರೀಡಾಂಗಣವನ್ನ ತಮ್ಮ ಸಾಕು ನಾಯಿಯೊಂದಿಗೆ ಪ್ರವೇಶಿಸುತ್ತಾರೆ ಮತ್ತು ಅದನ್ನು ಟ್ರ್ಯಾಕ್ ಹಾಗು ಫುಟ್ಬಾಲ್ ಮೈದಾನದ ಸುತ್ತ ತಿರುಗುತ್ತದೆ ಇದನ್ನು ಸೆಕ್ಯೂರಿಟಿ ಗಾರ್ಡ್ಗಳು ನೋಡಿಕೊಂಡು ಕಾಯುತ್ತಿದದ್ದು ಕಂಡು ಬಂದಿತ್ತು.
2010ರಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದ್ದು ಮುಖ್ಯವಾಗಿ ಅಥ್ಲೆಟಿಕ್ಸ್ ಹಾಗು ಫುಟ್ಬಾಲ್ ಆಟಗಾರರಿಗೆ ಹೆಚ್ಚು ಉಪಯುಕ್ತವಾಗಿದೆ.
ಈ ಕುರಿತು ಮಾತನಾಡಿರುವ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಚೌಧರಿ ಸಾಯಂಕಾಲ 4-6ರ ನಡುವೆ ಕ್ರೀಡಾಂಗಣ ತೆರೆದಿರುತ್ತದೆ ಬಿಸಿಲಿನ ಬೇಗೆ ಜಾಸ್ತಿಯಿರುವ ಕಾರಣ ಸಂಜೆ 7ರವರೆಗೆ ಸಮಯವಾಕಾಶವನ್ನ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಅಧಿಕೃತ ಆದೇಶ ಹೊರಡಿಸಿರುವ ಬಗ್ಗೆ ಯಾವುದೇ ಮಾಹಿತಿಯನ್ನ ಹಂವಿಕೊಳಲಿಲ್ಲ. ಸಂಜೆ 7 ನಂತರ ಯಾವುದೇ ಸರಾಕರಿ ಅಧಿಕಾರಿ ಕ್ರೀಡಾಂಗಣವನ್ನ ಬಳಸಿಕೊಳ್ಳುತ್ತಿರುವ ಬಗ್ಗೆ ನನ್ನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ನೀವು ಸರ್ಕಾರಿ ಕಚೇರಿಗಳಲ್ಲಿ ಸಮಯವನ್ನ ನೋಡಿರುತ್ತೀರಿ ಅದೇ ರೀತಿ ಇದು ಸಹ ದೆಹಲಿ ಸರ್ಕಾರದ ಅಡಿಯಲ್ಲಿ ಬರುವ ಕಾರಣ 7ರ ಸುಮಾರಿಗೆ ಮುಚ್ಚಲಾಗುತ್ತದೆ ನಾನು ಆ ನಂತರ ಹೊರಡುತ್ತೇನೆ ಎಂದು ಹೇಳಿದ್ದರು.
ಇನ್ನು ಕ್ರೀಡಾಪಟುಗಳ ಪೋಷಕರು ಈ ವಿಚಾರವಾಗಿ ಹೌಹಾರಿದ್ದು ಸರ್ಕಾರ ಹಾಗು ಅಧಿಕಾರಿಗಳ ನಡೆಗೆ ಶಾಪ ಹಾಕಿದ್ದಾರೆ. ಅಧಿಕಾರ ದುರುಪಯೋಗದಿಂದ ತಮ್ಮ ಮಕ್ಕಳು ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿಲ್ಲ ಎಂದು ಶಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕ್ರೀಡಾ ಸಂಕೀರ್ಣವನ್ನು ಅವಧಿಗೂ ಮೊದಲೇ ಮುಚ್ಚಲಾಗುತ್ತಿದೆ ಎಂಬ ದೂರುಗಳು ಸಾಮಾಜಿಕ ಜಾಲತಾಣ ಹಾಗು ಮಾಧ್ಯಮಗಳಲ್ಲಿ ಕಂಡು ಬಂದಿದೆ. ತಡರಾತ್ರಿವರೆಗೆ ಅಭ್ಯಾಸ ನಡೆಸಲು ಇಚ್ಚಿಸುವ ಕ್ರೀಡಾಪಟುಗಳಿಗೆ ರಾತ್ರಿ 10ರವರೆಗೆ ಕ್ರೀಡಾಂಗಣವನ್ನು ತೆರೆದಿರುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದಾರೆ. ಅದಾಗ್ಯೂ ಇನ್ನು ಮುಂದೆ ಇದೇ ರೀತಿ ದುರ್ವತನೆ ಕಂಡು ಬಂದರೆ ಅಂತಹ ಅಧಿಕಾರಿಯ ವಿರುದ್ದ ಕಠಿಣ ಕ್ರಮವನ್ನು ಜಾರಿ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.