ಚನ್ನಪಟ್ಟಣದಲ್ಲಿ (Channapattana) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ (Cp Yogeshwar) ಗೆಲ್ಲಲು ಬಿಜೆಪಿ, ಜೆಡಿಎಸ್‌ನವರು (BJP & jds) ಸಹಕಾರ ನೀಡಿದ್ದಾರೆ ಅಂತ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ (ST somashekar) ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ರಾಜ್ಯದ ಕೇಂದ್ರ ಸಚಿವರೊಬ್ಬರು ಸಿ.ಪಿ ಯೋಗೇಶ್ವರ್‌ಗೆ ನೀನು ಕಾಂಗ್ರೆಸ್‌ನಲ್ಲಿ ನಿಂತು ಗೆದ್ದು ಬಾ ಅಂತ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದರು ಎಂದಿದ್ದಾರೆ. ಹೀಗಾಗಿ ಬಿಜೆಪಿ, ಜೆಡಿಎಸ್‌ನ ಬಹುತೇಕರು ಯೋಗೇಶ್ವರ್ ಗೆಲುವಿಗಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಬಿಜೆಪಿ ನಾಯಕರೇ ಸಿ.ಪಿ ಯೋಗೇಶ್ವರ್ ಗೆಲುವಿನ ಬಗ್ಗೆ ಮಾತಾಡ್ತಿದ್ದರು. ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಿರುದ್ಧ ಯಾರಿಗೂ ಯಾವುದೇ ಸಿಟ್ಟು ಇರಲಿಲ್ಲ. ಆದರೆ ಕೇಂದ್ರ ಸಚಿವರ ವಿರುದ್ಧ ಎರಡೂ ಪಕ್ಷಗಳ ನಾಯಕರಿಗೆ ಸಿಟ್ಟಿತ್ತು. ಹಾಗಾಗಿ ನಿಖಿಲ್ ರನ್ನ ಸೋಲಿಸಿದರು ಎಂಬ ಸ್ಪೋಟಕ ಹೇಳಿಕೆಯನ್ನ ನೀಡಿ ಮೈತ್ರಿಯಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.