
ಸೇಂಟ್ ಜಾನ್ಸ್ ಸಂಸ್ಥೆಯ ಗೋಲ್ಡನ್ ಜುಬಿಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ. ಕೇವಲ ವ್ಯಾಪಾರಿ ಮನೋಭಾವ ಹೊಂದದೆ, ಜನಸಾಮಾನ್ಯರ ಆರೋಗ್ಯದ ಕುರಿತು ಕಾಳಜಿ ಹೊಂದಿದ ಸಂಸ್ಥೆ ಇದು. ಸರ್ಕಾರ ಉಚಿತವಾಗಿ ಚಿಕಿತ್ಸೆ ಮತ್ತು ಔಷಧ ನೀಡುತ್ತದೆ. ಇನ್ನೊಂದೆಡೆ ಅತಿಯಾದ ವ್ಯಾಪಾರೀಕಣದ ಉದ್ದೇಶದಿಂದಲೇ ನಡೆಯುವ ಸಂಸ್ಥೆಗಳು ಇವೆ.

ಇವೆರಡರ ಮಧ್ಯೆ ತನ್ನತನ ಉಳಿಸಿಕೊಂಡು ಸೇಂಟ್ ಜಾನ್ಸ್ ಸಂಸ್ಥೆ ಸಮಾಜದ ಆರೋಗ್ಯಕ್ಕೆ ಕೊಡುಗೆ ನೀಡುತ್ತಿದೆ. ಸಾವಿರಾರು ವೈದ್ಯರುಗಳನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಈ ಸಂಸ್ಥೆ ಇನ್ನೂ ಬೆಳೆಯಬೇಕು. ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು. ಕಮರ್ಷಿಯಲ್ ಉದ್ದೇಶ ಇಲ್ಲದೇ ಇರುವುದರಿಂದ ಸೇಂಟ್ ಜಾನ್ಸ್ ಸಂಸ್ಥೆ ತನ್ನ ಶಾಖೆಯನ್ನು ರಾಜ್ಯ ಉಳಿದೆಡೆ ವಿಸ್ತರಿಸಲು ಮನಸ್ಸು ಮಾಡಿಲ್ಲ.

50 ವರ್ಷ ತುಂಬಿದ ಶುಭ ಸಂದರ್ಭದಲ್ಲಿಯಾದರೂ ವಿಸ್ತರಣೆ ಕುರಿತು ಯೋಚಿಸಲಿ. ಸರ್ಕಾರದಿಂದ ಎಲ್ಲ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಆಡಳಿತ ಮಂಡಳಿ ಸೇವೆಯನ್ನು ವಿಸ್ತರಿಸುವ ಕುರಿತು ಯೋಚನೆ ಮಾಡಲಿ ಎಂದು ಹೇಳಿದರು.









