ಪ್ರಸಿದ್ದ ಧಾರ್ಮಿಕ ಸ್ಥಳವಾದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ವಿವಾದವು ದೇಶಾದ್ಯಂತ ತೀವ್ರ ಚರ್ಚೆಯನ್ನ ಹುಟ್ಟುಹಾಕಿರುವ ಬೆನ್ನಲ್ಲೇ ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ್ಣದಲ್ಲಿರುವ ಜಾಮೀಯಾ ಮಸೀದಿ ವಿವಾದದ ಕೇಂದ್ರ ಬಿಂದುವಾಗುವ ಸಾಧ್ಯತೆಯಿದೆ.
ಹಿಂದೂ ಕಾರ್ಯಕರ್ತರು ಶ್ರೀರಂಗಪಟ್ಟಣ್ಣವನ್ನು ಕರ್ನಾಟಕದ ಅಯೋಧ್ಯೆ ಎಂದು ಕರೆಯುತ್ತಾರೆ. ಆಡಳಿರೂಢ ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ತನ್ನ ನೆಲೆಯನ್ನ ವಿಸ್ತಿರಿಸಲು ಯೋಜಿಸಿರುವ ಸಮಯದಲ್ಲಿ ರಾಜ್ಯ ರಾಜಕೀಯದಲ್ಲಿ ಹೆಚ್ಚು ಪರಿಣಾಮ ಬಿರುವ ಸಾಧ್ಯತೆಯಿದೆ.
ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆ ಸದ್ಯ ಜೆಡಿಎಸ್ನ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಮಸೀದಿ ವಿಚಾರವನ್ನ ಕೆದಕುವ ಮೂಲಕ ಭದ್ರಕೋಟೆಯನ್ನ ಬೇಧಿಸಲು ಬಿಜೆಪಿ ಮುಂದಾಗಿದೆ ಎಂದು ತಿಳಿದು ಬಂದಿದೆ.
ಜ್ಞಾನವಾಪಿ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಜಾಮೀಯಾ ಮಸೀದಿ ಆಡಳಿತ ಮಂಡಳಿ ಸದಸ್ಯರು ಜಿಲ್ಲಾಡಳಿತಕ್ಕೆ ಭದ್ರತೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ.

ಈ ಕುರಿತು ಮಾತನಾಡಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಜಾಮೀಯಾ ಮಸೀದಿ ಇದ್ದ ಜಾಗದಲ್ಲಿ ಹನುಮಾನ್ ದೇವಸ್ಥಾನವಿತ್ತು ಮಸೀದಿಗೆ ಹೋಗಲು ದಾರಿ ಮಾಡಿಕೊಡುವ ಸಲುವಾಗಿ ಮಂದಿರವನ್ನು ಕೆಡವಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು, ಮಸೀದಿಯ ಒಳಗೆ ಹೊಯಸಳರ ಲಾಂಚನವನ್ನು ಮಸೀದಿಯ ಒಳಭಾಗದಲ್ಲಿ ಕಾಣಬಹುದು. ಬರುವ ಹುನಮ ಜಯಂತಿಯ ದಿನದಂದು ಅಭಿಯಾನವನ್ನ ಶುರು ಮಾಡಲಾಗುವುದು. ಮೈಸೂರು ಅರಸರ ಆಡಳಿತಕ್ಕು ಮುನ್ನ ದೇವಸ್ಥಾನವನ್ನ ನಿರ್ಮಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
ಟಿಪ್ಪು ಸುಲ್ತಾನ್ ಆಡಳಿತವಿದ್ದ ಸಮಯದಲ್ಲಿ ಮಂದಿರವನ್ನು ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ ಇದನ್ನು ಸಾಬೀತುಪಡಿಸಲು ನಮ್ಮ ಬಳಿ ಸೂಕ್ತ ಸಾಕ್ಷ್ಯಧಾರಗಳಿವೆ 1784ರಲ್ಲಿ ದೇವಸ್ಥಾನವನ್ನು ಕೆಡವಲಾಗಿತ್ತು ಎಂದು ಹೇಳಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ಮಂದಿರದ ವಿಚಾರವಾಗಿ ಋಷಿಕುಮಾರ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಟ್ಟು ಕಳುಹಿಸಿದ್ದರು.