
ಶ್ರೀನಿವಾಸ್‌ಪ್ರಸಾದ್ ನಿಧನಕ್ಕೆ ಸಿಎಂ ಸಿದ್ಧರಾಮಯ್ಯ ಕಂಬನಿ
ಬೆಂಗಳೂರು :- ದಕ್ಷಿಣದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ್‌ಪ್ರಸಾದ್ ನಿಧನ ಬಹಳ ನೋವು ತರಿಸಿದೆ. ದಕ್ಷಿಣದ ದಲಿತ ಸೂರ್ಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ವಿ. ಶ್ರೀನಿವಾಸ್‌ಪ್ರಸಾದ್ ರ ನಿಧನ ವಿಚಾರ ಬಹಳ ನೋವುಂಟು ಮಾಡಿದೆ. ನಾನೇ ಖುದ್ದು ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದು ಸಿಎಂಗೆ ತಿಳಿಸಿದ್ದು, ಇಂದು ಸಂಜೆ ಸಿಎಂ ಸಿದ್ಧರಾಮಯ್ಯ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.