ಶ್ರೀನಗರ ಕಿಟ್ಟಿ ನಟನೆಯ ‘ಗೌಳಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕಿಟ್ಟಿ ಅವರ ಗೆಟಪ್ ಕ್ಯೂರಿಯಾಸಿಟಿ ಹುಟ್ಟಿಸಿದೆ.
ಆ್ಯಕ್ಷನ್, ಥ್ರಿಲ್ಲರ್ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ಶ್ರೀನಗರ ಕಿಟ್ಟಿ ತುಂಬಾ ಡಿಫೆರೆಂಟ್ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆ ಸಂಗೀತದಿಂದಲೂ ಈ ಟೀಸರ್ ಈಗ ಎಲ್ಲರ ಗಮನ ಸೆಳೆದಿದೆ. ಸೂರಾ ಎಸ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಶ್ರೀನಗರ ಕಿಟ್ಟಿಗೆ ಜತೆಯಾಗಿ ರಂಗಾಯಣ ರಘು ಅದ್ಭುತವಾಗಿ ನಟಿಸಿದ್ದು, ಉತ್ತರ ಕರ್ನಾಟಕ ಬೈಗುಳಗಳ ಝಲಕ್ ಇಲ್ಲಿದೆ.
ಚಿತ್ರದ ಟೀಸರ್ ನಲ್ಲಿ ಮಾಸ್ ದೃಶ್ಯಗಳ ಜೊತೆ ಕುಟುಂಬವೊಂದರ ಕಥೆ ಇದೆ ಎನ್ನುವುದು ಟೀಸರ್ ನೋಡುತ್ತಲೇ ತಿಳಿಯುತ್ತದೆ. ಪಕ್ಕಾ ಫ್ಯಾಮಿಲಿ ಮ್ಯಾನ್ ರೂಪದಲ್ಲಿ ಶ್ರೀನಗರ ಕಿಟ್ಟಿ ತಮ್ಮ ಕುಟುಂಬದೊಂದಿಗಿರುವ ತುಣುಕೊಂದೂ ಟೀಸರ್ನಲ್ಲಿದ್ದು, ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿಸಿದೆ.
ಚಿತ್ರದಲ್ಲಿ ನಾಯಕಿಯಾಗಿ ಪಾವನಾ ನಟಿಸುತ್ತಿದ್ದು, ಯಶ್ ಶೆಟ್ಟಿ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್ ಗೌಡ ಅವರ ಕ್ಯಾಮೆರಾ ಕೈಚಳಕವಿದೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದು, ರಘು ಸಿಂಗಮ್ ನಿರ್ಮಾಪಕರಾಗಿದ್ದಾರೆ.