ಚಂದನವನದಲ್ಲಿ ತೆರೆ ಮೇಲೆ ಬರಲು ಬೈಟೂ ಲವ್ ಸಿನಿಮಾ ಈಗಾಗಲೇ ಸಜ್ಜಾಗಿದ್ದು, ಈ ಬ್ಯೂಟಿಫುಲ್ ಲವ್ ಸ್ಟೋರಿ ನೋಡಲು ಸಿನಿ ಪ್ರೇಕ್ಷಕರು ರೆಡಿಯಾಗಿದ್ದಾರೆ. ಇದೀಗ ಈ ಬೈಟೂ ಲವ್ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ.
ಮೊದಲೇ ಈ ಸಿನಿಮಾದ ನಾಯಕ, ನಾಯಕಿ ಕ್ಯೂಟ್ ಕಪಲ್ಸ್ ಅಂತ ಗಾಂಧೀನಗರ ಮಾತಾಡಿಕೊಳ್ಳುತ್ತಿದೆ. ಹೇಗೂ ಇವರಿಬ್ಬರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚು, ಇದೀಗ ಬೈಟೂಲವ್ ಸಿನಿಮಾದಲ್ಲೂ ಇಬ್ಬರೂ ಜೋಡಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದು ಪ್ರೇಮಿಗಳಿಗೆ ಖುಷಿ ತಂದಿದೆ.
ಪಕ್ಕಾ ಲವ್ ಸ್ಟೋರಿ
ಈ ಟೈಟಲ್ ಸಾಂಗ್ ನಲ್ಲಿ ಧನ್ವೀರ್, ಶ್ರೀಲೀಲಾ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದು, ಇದೊಂದು ಪಕ್ಕ ಲವ್ ಸ್ಟೋರಿ. ‘ಬಜಾರ್’ ಸಿನಿಮಾದ ಮೂಲಕ ರಗಡ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ಧನ್ವೀರ್ ಗೌಡಗೆ ಜೊತೆಯಾಗಿ ಕಿಸ್ ಸಿನಿಮಾ ಮೂಲಕ ಪಡ್ಡೆ ಹುಡುಗರ ಮನಸ್ಸು ಕದ್ದ ಚೆಲುವೆ ಶ್ರೀಲೀಲಾ ಕಲರ್ ಫುಲ್ ಸಾಂಗ್ ಮೂಲಕ ಮೋಡಿ ಮಾಡ್ತಿದ್ದಾರೆ.
‘ಬೈಟು ಲವ್’ ಚಿತ್ರವನ್ನು ಕೆವಿಎನ್ ಬ್ಯಾನರ್ ನಲ್ಲಿ ನಿಶಾ ವೆಂಕಟ್ ಹಾಗೂ ಸುಪ್ರೀತ್ ನಿರ್ಮಿಸುತ್ತಿದ್ದು, ಹರಿ ಸಂತೋಷ್ ಆಕ್ಷನ್ ಕಟ್ ಹೇಳಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣವಿದ್ದು,ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಯೋಗಾನಂದ್ ಸಂಭಾಷಣೆ ಬರೆದಿದ್ದಾರೆ. ತೆರೆಮೇಲೆ ಬರಲು ‘ಬೈಟು ಲವ್’ ಸಿನಿಮಾ ಸಜ್ಜಾಗಿದೆ.






