ಮಂಗಳೂರು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಂಡಕ್ಕೆ ಬಿದ್ದ ಘಟನೆ ಮಂಗಳೂರಿನ ಗುರುಪುರದಲ್ಲಿ ನಡೆದಿದೆ. ಅತೀ ವೇಗವಾಗಿ ಕಾರು ಚಲಾಯಿಸಿದ್ದು ಗುರುಪುರದಲ್ಲಿ ಕಾರು ಹೊಂಡಕ್ಕೆ ಬಿದ್ದಿದೆ ಕಾರು ಚಾಲಕನನ್ನು ಬಂಟ್ವಾಳದ ಕೈಕಂಬ ಜೋಡುಮಾರ್ಗ ನಿವಾಸಿ ಮಹಮ್ಮದ್ ಎಂದು ಗುರುತಿಸಲಾಗಿದೆ.

ಇನ್ನು ಕಾರು ಹೊಂಡಕ್ಕಿಳಿದರೂ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಅತೀ ವೇಗದ ಚಾಲನೆ ಮಾಡಿದ ಮಹಮ್ಮದ್ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಬಜ್ಪೆ ಠಾಣಾ ಪೊಲೀಸರಿಂದ ಮಹಮ್ಮದ್ ಗೆ ಮೂರು ಸಾವಿರ ದಂಡ ವಿಧಿಸಲಾಗಿದೆ. ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಪ್ರಕರಣ ದಾಖಲಾಗಿದೆ.












