• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

KV Prabhakar: ವಿಶೇಷ ಚೇತನರು ಬುದ್ದನ ಮಕ್ಕಳು: ಕೆ.ವಿ.ಪ್ರಭಾಕರ್

ಪ್ರತಿಧ್ವನಿ by ಪ್ರತಿಧ್ವನಿ
August 22, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಹುಟ್ಟುತ್ತಲೇ ಮನುಷ್ಯ ಜಗತ್ತಿನ‌ ಸಣ್ಣತನಗಳಿಂದ ಮುಕ್ತರಾದವರು: ಕೆ.ವಿ.ಪ್ರಭಾಕರ್

ADVERTISEMENT


ಭಿನ್ನ, ವಿಭಿನ್ನ ಸಾಧ್ಯತೆಗಳ ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ‌ ಸಣ್ಣತನಗಳಿಂದ ಮುಕ್ತರಾದವರು. ಹೀಗಾಗಿ ಇವರೆಲ್ಲರೂ
ಬುದ್ದನ ಮಕ್ಕಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬಣ್ಣಿಸಿದರು.

ಬಾಲಭವನದಲ್ಲಿ ನಡೆದ “ವಿಶೇಷ ಚೇತನ ಮಕ್ಕಳ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಿನ್ನ ಚೇತನರನ್ನು ಸಮಾಜದ ಅಸಹಜ ರೂಢಿಗತ ಕಣ್ಣುಗಳಿಂದ ನೋಡುವುದಕ್ಕಿಂತ ಮನುಷ್ಯ ಸಹಜ ಒಳಗಣ್ಣುಗಳಿಂದ ಗಮನಿಸಬೇಕಿದೆ.

ಈ ಮಕ್ಕಳು ಜೀವನ ಪರ್ಯಂತ ಮಕ್ಕಳಾಗೇ ಇರುತ್ತಾರೆ. ಅಂದರೆ ಮಗುವಿನ ಸಹಜ ನಿಷ್ಕಲ್ಮಷ ಸ್ವಭಾವ ಜೀವನವಿಡೀ ಇರುತ್ತದೆ.

*ಈ ಮಕ್ಕಳು ಸುಳ್ಳು ಹೇಳುವುದಿಲ್ಲ.
*ಈ ಮಕ್ಕಳು ವಂಚಕರಾಗುವುದಿಲ್ಲ.
*ಈ ಮಕ್ಕಳು ಕಳ್ಳರು, ಕೊಲೆಗಾರರಾಗುವುದಿಲ್ಲ.
*ಈ ಮಕ್ಕಳು ಹೊಟ್ಟೆಕಿಚ್ಚು ಪಡುವುದಿಲ್ಲ.
*ಈ ಮಕ್ಕಳು ದುರಾಸೆ ಪಡುವುದಿಲ್ಲ.
*ಈ ಮಕ್ಕಳು ಜಾತಿವಾದಿಗಳಾಗುವುದಿಲ್ಲ.
*ಈ ಮಕ್ಕಳು ಕೋಮುವಾದಿಗಳಾಗುವುದಿಲ್ಲ.

ಹೀಗಾಗಿ ಇವರೆಲ್ಲರೂ ಹುಟ್ಟುತ್ತಲೇ ಉಳಿದ ಮನುಷ್ಯ ಜಗತ್ತು ಆಚರಿಸುವ ಸಣ್ಣತನಗಳಿಂದ ಮುಕ್ತವಾಗಿ ತೊಳೆದ ನೀತಿನಂಥಾ ವ್ಯಕ್ತಿಗಳಾಗುತ್ತಾರೆ.

ಬುದ್ದ ಜೀವಮಾನವಿಡೀ ಮನುಷ್ಯ ಜಗತ್ತನ್ನು ಸಣ್ಣತನಗಳಿಂದ ಮುಕ್ತಿಗೊಳಿಸಲು ಶ್ರಮಿಸಿದ್ದರು. ಅದಕ್ಕೇ ಇವರೆಲ್ಲರೂ ಬುದ್ದನ ಮಕ್ಕಳು. ಹೀಗಾಗಿ ನನಗೆ ಈ ಮಕ್ಕಳ ಬಗ್ಗೆ ಮಾತನಾಡುವುದು ಏನೂ ಇಲ್ಲ.

ಆದರೆ, ಪೋಷಕರ ಜೊತೆ ನನ್ನ ಕೆಲವೊಂದು ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಇಲ್ಲಿ ಸಂಕಟ ಪಡುತ್ತಿರುವವರು ಮಕ್ಕಳಲ್ಲ. ಮಕ್ಕಳು ತಮ್ಮ ಪಾಡಿಗೆ ತಾವು ಖುಷಿಯಾಗಿದ್ದಾರೆ. ಆದರೆ, ಮಕ್ಕಳ ಬಗ್ಗೆ ಸಂಕಟ ಪಡುತ್ತಾ ಪೋಷಕರು ದುಃಖ ಪಡುತ್ತಿದ್ದಾರೆ. ಈ ದುಃಖಕ್ಕೆ ಮೂಲ ಕಾರಣ ಹೋಲಿಕೆ.

ಇತರೆ ಮಕ್ಕಳಂತೆ ನಮ್ಮ ಮಕ್ಕಳಿಲ್ಲ ಎನ್ನುವ ಹೋಲಿಕೆ. ಈ ಹೋಲಿಕೆಗೆ ಕೊನೆ ಇಲ್ಲ. ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳನ್ನು ಇತರೆ ಮಕ್ಕಳ ಜೊತೆ ಹೋಲಿಕೆ ಮಾಡುವ ಮಾನಸಿಕ ಸಮಸ್ಯೆ ಇದೆ. ಸಮಾಜದ ರೂಡಿಗತ ಅಭಿಪ್ರಾಯಗಳು ಹೋಲಿಕೆಗೆ ಕಾರಣ. ಹೋಲಿಕೆಗೆ ಬ್ರೇಕ್ ಹಾಕಿದರೆ, ಸಂಕಟಕ್ಕೂ ಬ್ರೇಕ್ ಬೀಳುತ್ತದೆ.

ಹೋಲಿಕೆಯಿಂದ, ಪೋಷಕರು ನರಳಿ, ಇದನ್ನು ನೋಡಿ ಮಕ್ಕಳೂ ನರಳುತ್ತಾರೆ.

ಹೋಲಿಕೆಯಿಂದ ಮೊದಲು ಪೋಷಕರು ಖುಷಿಯಾಗಿರುವ ಸ್ವತಂತ್ರ ಕಳೆದುಕೊಳ್ಳುತ್ತಾರೆ. ಬಳಿಕ , ಮಕ್ಕಳ ಖುಷಿಯ ಸ್ವತಂತ್ರ ಕಿತ್ತುಕೊಳ್ಳುತ್ತಾರೆ ಎಂದರು.

ಭಿನ್ನ ಚೈತನ್ಯದ ಮಕ್ಕಳಿಗೆ ವಿಶೇಷ ಅರ್ಹತೆ ಮತ್ತು ತರಬೇತಿ ಇರುವ ಶಿಕ್ಷಕರು ಬೇಕು ಎನ್ನುವುದೇನೋ ಸರಿ. ಆದರೆ ಸ್ವಾತಂತ್ರ್ಯ ದಿನಾಚರಣೆ, ಸಾಂಸ್ಕೃತಿಕ‌ ಸಡಗರದಂತಹ ಈ ಕಾರ್ಯಕ್ರಮ ಪ್ರತ್ಯೇಕವಾಗಿ ನಡೆಸಬೇಕಿಲ್ಲ. ಉಳಿದ ಮಕ್ಕಳ ಜೊತೆಗೇ, ಉಳಿದ ಪೋಷಕರ ಜೊತೆಗೇ ಆಚರಿಸುವುದು ಅರ್ಥಪೂರ್ಣ ಎಂದುಕೊಳ್ಳುತ್ತೇನೆ.

ಆಗಸ್ಟ್ 15 ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ದೃಷ್ಟಿಹೀನ ಮಕ್ಕಳ ತಂಡವೂ ಉಳಿದ ಮಕ್ಕಳ ತಂಡದಷ್ಟೇ ಯಶಸ್ವಿಯಾಗಿ ಭಾಗವಹಿಸಿತ್ತು.

ದೇಶಕ್ಕೆ ಒಲಂಪಿಕ್ ನಲ್ಲಿ, ಕ್ರೀಡೆಗಳಲ್ಲಿ ಅತಿ ಹೆಚ್ಚು ಪದಕ ತರುತ್ತಿರುವುದು ಭಿನ್ನ ಚೈತನ್ಯದ ಪಟುಗಳೇ ಎನ್ನುವುದನ್ನು ಮರೆಯಬಾರದು.

ಹೀಗಾಗಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಮುಂದಿನ ಜನವರಿ 26 ಮತ್ತು ಆಗಸ್ಟ್ 15 ರಂದು ವಿಶೇಷ ಚೇತನ‌ ಮಕ್ಕಳ ತಂಡವೂ ಮಾಣಿಕ್ ಷಾ ಪರೇಡ್ ಮೈದಾನದಲ್ಲೇ ಉಳಿದ ಮಕ್ಕಳ ಜೊತೆ ಪ್ರದರ್ಶನ ನೀಡುವಂತಾಗಲಿ ಎಂದು ಬಯಸುತ್ತೇನೆ ಎಂದರು.

ಬಾಲಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ನಟರಾಜ್ ಹಾಗೂ 18 not out ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥರಾದ ಬಸವರಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

300 ಕ್ಕೂ ಹೆಚ್ಚು ಭಿನ್ನ, ವಿಭಿನ್ನ ಚೈತನ್ಯದ ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Tags: cm ಮಾಧ್ಯಮ ಸಲಹೆಗಾರ kv prabhakard r prabhakar raojayamala prabhakark e prabhakark e prabhakar in ycpk e prabhakar joins ycpke prabhakarKV Prabhakarkv prabhakar​​​kv prabhakar bytekv prabhakar media advisor contact numberkv prabhakar newskv prabhakar on journalistkv prabhakar presskv prabhakar specchmedia advisor kv prabhakarmlc prabhakarParakala PrabhakarPrabhakarsenior journalist kv prabhakartiger prabhakartiger prabhakar lifetiger prabhakar wife
Previous Post

ಬೀದಿ ನಾಯಿ ಪ್ರಕರಣ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Next Post

DK Shivakumar: ಬಿಜೆಪಿ-ಆರ್ ಎಸ್ ಎಸ್ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ..!!

Related Posts

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; ಮಧು ಬಂಗಾರಪ್ಪ ಆಪ್ತರ ವಿರುದ್ಧ ₹25 ಲಕ್ಷ ಲಂಚದ ಆರೋಪ !
Top Story

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; ಮಧು ಬಂಗಾರಪ್ಪ ಆಪ್ತರ ವಿರುದ್ಧ ₹25 ಲಕ್ಷ ಲಂಚದ ಆರೋಪ !

by ಪ್ರತಿಧ್ವನಿ
September 23, 2026
0

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದ್ದ ಆಂತರಿಕ ಅಸಮಾಧಾನ ಇದೀಗ ಬಹಿರಂಗವಾಗಿದೆ. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (SBUDA) ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಜಿಲ್ಲಾ ಉಸ್ತುವಾರಿ...

Read moreDetails
ಅಟ್ಟಿಕಾ ಗೋಲ್ಡ್ ಕಂಪನಿಗೆ ED ಶಾಕ್; 19ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

ಅಟ್ಟಿಕಾ ಗೋಲ್ಡ್ ಕಂಪನಿಗೆ ED ಶಾಕ್; 19ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

September 23, 2026
ದರ್ಶನ್‌ ವಿರುದ್ಧದ ಪ್ರಕರಣದಲ್ಲಿ ಪ್ರದೋಷ್‌ ಸಾಕ್ಷಿ; ಹೈಕೋರ್ಟ್‌ನಲ್ಲಿ ನಡೆದ ವಾದವೇನು?

ದರ್ಶನ್‌ ವಿರುದ್ಧದ ಪ್ರಕರಣದಲ್ಲಿ ಪ್ರದೋಷ್‌ ಸಾಕ್ಷಿ; ಹೈಕೋರ್ಟ್‌ನಲ್ಲಿ ನಡೆದ ವಾದವೇನು?

September 23, 2026
ಇಂಡಿ ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆ

ಇಂಡಿ ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆ

September 23, 2026
ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ

ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ

September 23, 2026
Next Post

DK Shivakumar: ಬಿಜೆಪಿ-ಆರ್ ಎಸ್ ಎಸ್ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada