ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್ (K.L.Rahul) ಮಂಗಳವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ (Kollur Mookambika Temple) ಭೇಟಿ ನೀಡಿದ್ದಾರೆ

ಕೊಲ್ಲೂರು ಮೂಕಾಂಬಿಕೆ ದೇಗುಲ ಸೇರಿ ವಿವಿಧೆಡೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮುಂದಿನ ವಾರ ತವರಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ದೇವರ ಮೊರೆ ಹೋಗಿದ್ದಾರೆ. ಕೊಲ್ಲೂರು ಮೂಕಾಂಬಿಕೆ , ಸೌತ್ ಅಡಕ ಗಣಪತಿ ದೇಗುಲದಲ್ಲಿ ಪೂಜೆ ನೆರವೇರಿಸಿ ಧನ್ಯರಾಗಿದ್ದಾರೆ.

ಕೆ.ಎಲ್.ರಾಹುಲ್ ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಹಾಗೂ ಸೌತ್ ಆಫ್ರಿಕಾ ಸಿರೀಸ್ ನಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಆಗಿಂದ್ದಾಗೆ ದೇಗುಲಗಳಿಗೆ ಭೇಟಿ ಕೊಡುವ ರಾಹುಲ್ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಈ ಹಿಂದೆ ಕಳಪೆ ಫಾರ್ಮ್ ನಿಂದ ಕಂಗೆಟ್ಟಿದ್ದ ರಾಹುಲ್, ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ನಂತರದ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಕಳೆದ ವರ್ಷವಷ್ಟೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳನ್ನ ಪ್ರೀತಿಸಿ ವಿವಾಹವಾಗಿದ್ದರು.
ವಿಶ್ವಕಪ್ ಟೂರ್ನಿ ನಂತರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿ ಸರಣಿ ಗೆದ್ದುಕೊಟ್ಟಿದ್ದರು. ಅದಾದ ಬಳಿಕ ಈಗ ಆಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅಲಭ್ಯರಾಗಿದ್ದಾರೆ. ಸದ್ಯ ಕೆ.ಎಲ್.ರಾಹುಲ್ ವಿಶ್ರಾಂತಿಯಲ್ಲಿದ್ದಾರೆ.