• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಹೆಣ್ಣು ಸಂಕುಲದ ಘನತೆಯ ಬದುಕಿನ ಸಂಕಲ್ಪದೊಂದಿಗೆ…(ಭಾಗ-2)

Any Mind by Any Mind
January 16, 2024
in ಅಂಕಣ
0
2019-20ರಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ : AISHE ವರದಿ
Share on WhatsAppShare on FacebookShare on Telegram

– ರೂಪ ಹಾಸನ

ADVERTISEMENT

ಇದು ಕೂಡ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ನಮ್ಮ ಸಮಾಜಶಾಸ್ತçಜ್ಞರು ಹೇಳುತ್ತಿದ್ದಾರೆ. ಒಬ್ಬ ಹೆಣ್ಣನ್ನು ಕದ್ದೊಯ್ದು ಮದುವೆಯಾಗಿ, ಕುಟುಂಬದ ನಾಲ್ಕೈದು ಮಂದಿ ಪುರುಷರು ಅವಳನ್ನು ದೈಹಿಕವಾಗಿ ಬಳಸಿಕೊಳ್ಳುವಂತಹಾ ಪ್ರಕರಣಗಳು ಕೂಡ, ದೇಶದ ಹಲವು ಭಾಗಗಳಿಂದ ವರದಿ ಆಗುತ್ತಿದೆ.

ಹೆಣ್ಣು ಸಂಕುಲದ ನಾಶಕ್ಕೆ ಸಜ್ಜಾಗಿರುವಂತಹ ಈ ಹಿಂಸೆಯ ವಿಧ ವಿಧದ ಆಯಾಮಗಳನ್ನು ನೋಡುತ್ತಿದ್ದರೆ, ನಮ್ಮ ಸಮಾಜ ಎಂಥಹ ಅಮಾನುಷ ಹಂತವನ್ನು ಮುಟ್ಟಿಬಿಟ್ಟಿದೇ, ಇದನ್ನು ಎಲ್ಲಿಂದ ಸರಿಪಡಿಸುವುದೆಂದು ದಿಗ್ಭçಮೆಯಾಗುತ್ತದೆ. ಹೆಣ್ಣು ಸಂಕುಲವನ್ನು ನಾಶ ಮಾಡಲು ಹೊರಟಿರುವ ಈ ಕೃತ್ಯ- ಇಡೀ ಮನುಕುಲದ ನಾಶಕ್ಕೆ ಬರೆದ ಮುನ್ನುಡಿ ಎಂದು ಈ ಪುರುಷ ಪ್ರಧಾನ ಮೌಲ್ಯ ನಿರ್ದೇಶಿತ ಸಮಾಜಕ್ಕೆ ಅರ್ಥ ಮಾಡಿಸುವುದಾದರೂ ಹೇಗೆ? ಈ ಎಲ್ಲ ಕ್ರೌರ್ಯಗಳಿಗೂ ನಮ್ಮ ಸುತ್ತಲಿಂದಲೇ ಬಹಳಷ್ಟು ತರಹೇವಾರಿ ಭೀಕರ ಪ್ರಕರಣಗಳ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಆದರೆ ಇದೆಲ್ಲವನ್ನು ನಾವು ಬಿಡಿಬಿಡಿ ಪ್ರಕರಣವಾಗಿ ಮಾತ್ರ ನೋಡಬಾರದು. ಅಂತಹ ಪ್ರಕರಣದ ಬಗ್ಗೆ ಮಾತ್ರ ಧ್ವನಿ ಎತ್ತಿ, ಪ್ರತಿರೋಧವನ್ನು ಮಾಡಿದರೂ ಸಾಲದು.

ಈ ಎಲ್ಲ ಹೆಣ್ಣಿನ ಮೇಲಿನ ಕ್ರೂರ ದಾಳಿಗಳನ್ನು ಪುರುಷಾಳ್ವಿಕೆಯ, ಪುರುಷ ಕ್ರೌರ್ಯದ ಪ್ರಕ್ರಿಯೆಯಾಗಿ- ಅಂದರೆ ಇದೊಂದು ಪ್ರೋಸೆಸ್ ಆಗಿ ಹೇಗೆ ಬೆಳೆಯುತ್ತಾ ಬಂದಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ಸಮಸ್ಯೆಗಳನ್ನು ಬಹು ಆಯಾಮಗಳಲ್ಲಿ ಎದುರಿಸಲು ಮತ್ತು ಸಮಗ್ರವಾದ, ಸಮರೋಪಾದಿಯ ತಯಾರಿಯನ್ನು ತುರ್ತಾಗಿ ಮಾಡಿಕೊಳ್ಳಲು ನಮಗೆ ಸಾಧ್ಯವಾಗಬಹುದು. ಇಡಿಯಾಗಿ ಪುರುಷ ಪ್ರಧಾನ ಸಮಾಜವನ್ನು, ವ್ಯವಸ್ಥೆಯನ್ನು ಮಾನವೀಯ ನೆಲೆಯಲ್ಲಿ ಬದಲಾವಣೆಗೊಳಿಸಿ, ಅದನ್ನು ಸಂವಿಧಾನದ ಸಮಾನತೆಯ ಆಶಯದಿಂದ ಪುನರ್ ನಿರ್ಮಿಸಿ, ಹೆಣ್ಣು ಸಂಕುಲದ ಸಮಗ್ರ ಔನತ್ಯಕ್ಕೆ ಬೇಕಾದಂತಹ ದಾರಿಗಳನ್ನೀಗ ನಾವು ತುರ್ತಾಗಿ ಹುಡುಕಿಕೊಳ್ಳಲೇಬೇಕಿದೆ. ಈಗಾಗಲೇ ಬಹಳವೇ ತಡವಾಗಿದೆ. ಇದರ ಜೊತೆಗೆ ನಮ್ಮ ಮಹಿಳಾ ಹೋರಾಟ, ರಚನಾತ್ಮಕ ಕೆಲಸ ಮತ್ತು ಸಂಘಟನೆಯನ್ನು ನಗರ ಕೇಂದ್ರಿತವಾಗಿ ಮಾತ್ರ ಕಟ್ಟದೇ, ನಮ್ಮ ಗ್ರಾಮೀಣ ಹೆಣ್ಣುಮಕ್ಕಳ ಸಂಕಷ್ಟಗಳನ್ನು, ಸಮಸ್ಯೆಗಳನ್ನು ನಮ್ಮ ಕಾಳಜಿಯ ಭಾಗವಾಗಿ ಒಳಗೊಳ್ಳಲೇಬೇಕು. ಏಕೆಂದರೆ ಇವತ್ತಿಗೂ ಗ್ರಾಮೀಣಪ್ರದೇಶದ ಬಹಳಷ್ಟು ಹೆಣ್ಣುಮಕ್ಕಳು ಶಾಲೆಗಳಿಂದ ಹೊರಗಿದ್ದಾರೆ. ಉನ್ನತ ಶಿಕ್ಷಣ ಮತ್ತು ಆಧುನಿಕ ತರಬೇತಿ, ಕೌಶಲ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಇಂದು ಗೃಹೋದ್ಯಮ, ಕಿರು ಉದ್ಯಮಗಳೂ ಕೂಡ ಅಳಿವಿನ ಅಂಚನ್ನು ತಲುಪಿದ್ದು, ಮಹಿಳೆಯರಿಗೆ ಸರಿಯಾದ ಉದ್ಯೋಗಾವಕಾಶಗಳಿಲ್ಲದೇ, ಬದುಕಿನ ನಿರ್ವಹಣೆಯೇ ಸಾಕಷ್ಟು ದುಸ್ತರ ಆಗುತ್ತಿದೆ. ಇದರಿಂದ ಅವರು ದುಷ್ಟ ಜಾಲಗಳಿಗೆ ಬೀಳುವ ಪ್ರಮಾಣ ಹೆಚ್ಚುತ್ತಿದೆ. ಬಹಳಷ್ಟು ಹಳ್ಳಿಗಳಲ್ಲಿ ಇವತ್ತಿಗೂ ಕುಡಿಯುವಂತಹ/ಬಳಸುವAತಹ ನೀರಿನ ಸೌಲಭ್ಯ ಕೂಡ ಸ್ಥಳೀಯವಾಗಿ ಸಮರ್ಪಕವಾಗಿಲ್ಲ. ಹೀಗಾಗಿ ಅದರ ಸಂಗ್ರಹಣೆಗಾಗಿಯೇ ಗಂಟೆಗಟ್ಟಲೇ, ಮೈಲಿಗಟ್ಟಲೇ ನಡೆದು ನೀರನ್ನು ಸಂಪಾದಿಸುವುದರಲ್ಲೇ ಹೆಣ್ಣುಮಕ್ಕಳ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ. ಜೊತೆಗೆ ಕುಟುಂಬದ ಪುರುಷರ ಮದ್ಯಪಾನ ಚಟದಿಂದಾಗಿ ಊಹಿಸಲಾಗದಂತಹ ಶಾಶ್ವತವಾದ ಕ್ರೌರ್ಯವನ್ನವರು ಎದುರಿಸುತ್ತಿದ್ದಾರೆ. ಇದೂ ಕೂಡ ಹೆಣ್ಣುಮಕ್ಕಳು ಬಡತನದಲ್ಲೇ ಉಳಿಯುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಜೊತೆಗೆ ನಮ್ಮ ಬಹಳಷ್ಟು ಗ್ರಾಮೀಣ ಪ್ರದೇಶದ ಮಹಿಳೆಯರು ಇಂದಿಗೂ ಶೌಚಕ್ಕೆ ಬಯಲನ್ನೇ ಅವಲಂಬಿಸಬೇಕಾದ ಅವಮಾನಕರ ಪರಿಸ್ಥಿತಿಯಲ್ಲಿರುವುದೂ, ಅದರಿಂದ ಅನೇಕ ಆರೋಗ್ಯ ಸಮಸ್ಯೆಗೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿರುವುದೂ ಗಮನಿಸಬೇಕಾದ ಮತ್ತೊಂದು ದಾರುಣ ಅಂಶವಾಗಿದೆ. ಇದಲ್ಲದೇ ಇವತ್ತಿಗೂ ಬಾಲ್ಯವಿವಾಹ ಅತ್ಯಂತ ಸಹಜವಾಗಿ ಗ್ರಾಮೀಣಪ್ರದೇಶಗಳಲ್ಲಿ ನಡೆಯುತ್ತಿದೆ. ಜೊತೆ ಜೊತೆಗೆ ಅಪೌಷ್ಠಿಕತೆ, ರಕ್ತಹೀನತೆ, ಅದರಿಂದ ತಾಯಿ-ಮಗುವಿನ ಆರೋಗ್ಯ ಸಂಕಷ್ಟ, ಸಾವು… ಇಂತಹವೆಲ್ಲ ಸಮಸ್ಯೆಗಳಿಂದಾಗಿ ಹಳ್ಳಿಗಾಡಿನ ಹೆಣ್ಣುಮಕ್ಕಳು ನಗರಪ್ರದೇಶದವರಿಗಿಂತ ಶತಮಾನಗಳ ಹಿಂದೆಯೇ ಉಳಿದುಬಿಟ್ಟಿರುವುದು ಕ್ರೂರ ವಾಸ್ತವ. ಇದರ ಜೊತೆಗೆ ತಳ ಜಾತಿ/ಸಮುದಾಯ/ವರ್ಗದ ಹೆಣ್ಣುಮಕ್ಕಳ ಕಟು ಮತ್ತು ತೀವ್ರ ತೆರನಾದ ಸಂಕಷ್ಟ ಹಾಗೂ ಸಮಸ್ಯೆಗಳನ್ನೂ ನಾವು ಹೆಚ್ಚಿನ ಪ್ರಾಮುಖ್ಯತೆ ನೀಡಿ ಪರಿಹರಿಸಬೇಕಾದ ಸವಾಲುಗಳ ಕಡೆ ಕೂಡ ತಕ್ಷಣವೇ ಗಮನಹರಿಸಲೇಬೇಕಿದೆ.

ಮೊದಲಿಗೆ, ಈ ಪುರುಷಾಳ್ವಿಕೆಯ ಸಮಾಜದಲ್ಲಿ ಹೆಣ್ಣನ್ನು ಗುಲಾಮಳಾಗಿರಿಸಿ ಹೇಗೆಲ್ಲಾ ಬಳಸಿಕೊಳ್ಳಲಾಗುತ್ತಿದೆ ಎಂದು ಕೂಡ ನಾವಿಂದು ಸೂಕ್ಷö್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ನಮಗೆ ಬಿಡುಗಡೆಯ ದಾರಿಗಳು ಹೊಳೆಯಲು ಸಾಧ್ಯ. ಯಾವುದೇ ಜಾತಿ/ಮತಗಳನ್ನು ಸ್ಥಾಪಿಸದಂತಹ ಹೆಣ್ಣು, ಪುರುಷ ನಿರ್ಮಿತ ಜಾತಿ/ಮತಗಳ ಅಭಿವೃದ್ಧಿಗೆ ಸಹಕರಿಸುತ್ತಾ ಸಂಪ್ರದಾಯ, ಕಟ್ಟುಪಾಡು, ಕಟ್ಟಲೆಗಳ ಸಂಕೋಲೆಯೊಳಗೆ ಸಿಲುಕಿ, ತನಗೇ ಅರಿವಿಲ್ಲದೇ ಅನಾದಿಯಿಂದ ಇವುಗಳ ವಾಹಕಳಾಗಿ, ಬಳಕೆಯಾಗುತ್ತಿರುವುದು ವಿಪರ್ಯಾಸ. ಹೆಣ್ಣನ್ನು ಸಂಸ್ಕೃತಿ ರಕ್ಷಕಳು ಎಂದು ವೈಭವೀಕರಿಸುವ ನಮ್ಮ ಈ ಪುರುಷ ಪ್ರಾಬಲ್ಯದ ಸಮಾಜ, ಹೆಣ್ಣು ಸಂಸ್ಕೃತಿ ನಿರ್ಮಾಪಕಳಾಗದಂತೆ ಕಡು ಎಚ್ಚರದಿಂದ ಕಾಯುತ್ತಿರುವುದು ಏನನ್ನು ಸೂಚಿಸುತ್ತದೆ? ಹೆಣ್ಣಿನ ನಾಯಕತ್ವ ಗುಣವನ್ನು ಸಾಧ್ಯವಾದಷ್ಟೂ ಮುರುಟಿಸಿ, ತನಗೆ ಬೇಕಾದ ಹಾಗೆ ಪಳಗಿಸಿ, ಗುಲಾಮಳಾಗಿ ದುಡಿಮೆಗೆ ಹಚ್ಚಿರುವುದನ್ನು ಮತ್ತೊಂದು ಆಯಾಮದಲ್ಲಿ ಕಾಣುತ್ತೇವೆ. ಇದಕ್ಕೆ ಉದಾಹರಣೆಯಾಗಿ- ಇವತ್ತಿಗೂ ಮಹಿಳೆಯರು ದೊಡ್ಡ ಮಟ್ಟದಲ್ಲಿ ಶ್ರಮಿಕರಾಗಿ ಸೇವೆ ಸಲ್ಲಿಸುತ್ತಿರುವುದು ಗೃಹಿಣಿಯರಾಗಿ, ಹೊಲಗಳಲ್ಲಿ ಹಾಗೂ ವಿವಿಧ ಕಾರ್ಖಾನೆಗಳಲ್ಲಿ, ಕಟ್ಟಡ, ಕೂಲಿ ಕಾರ್ಮಿಕರಾಗಿ, ಆಶಾ/ಅಂಗನವಾಡಿ/ಬಿಸಿಯೂಟ/ಪೌರಕಾರ್ಮಿಕ ಕಾರ್ಯಕರ್ತೆಯರಾಗಿ, ಗಾರ್ಮೆಂಟ್ಸ್ ನೌಕರರಾಗಿ, ಶಿಕ್ಷಕಿಯರಾಗಿ, ಶುಶ್ರೂಕರಾಗಿ, ಗುಮಾಸ್ತರಾಗಿ ಹೀಗೆ ಅನೇಕ ವಿಧದಲ್ಲಿ ಇಂದು ಅತ್ಯಂತ ಕಡಿಮೆ ವೇತನ ಹಾಗೂ ಗೌರವಧನದ ಹೆಸರಿನ ಅಗೌರವವೆನಿಸುವ ಪ್ರಮಾಣದ ಆದಾಯಕ್ಕೆ ಶ್ರಮದಾಯಕವಾದ ದುಡಿಮೆಯಲ್ಲಿ ಬಹುದೊಡ್ಡ ಸಂಖ್ಯೆಯ ಹೆಣ್ಣುಮಕ್ಕಳು ತೊಡಗಿದ್ದಾರೆ. ಇದೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಿಗದಿತ ವೇತನವಿಲ್ಲದ, ಹೊರಗುತ್ತಿಗೆ ಹಾಗೂ ಜೀತದ ರೂಪದಲ್ಲೇ ಇರುವಂತಹ ಕೆಲಸಗಳು ಎನ್ನುವುದನ್ನು ಮರೆಯಬಾರದು. ಹೆಣ್ಣುಮಕ್ಕಳ ಈ ಅಗಾಧ ಶ್ರಮದಾಯಕ ದುಡಿಮೆ ಇಲ್ಲದೇ ದೇಶದ ಪ್ರಗತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಈ ದರ್ಜೆ ಹಾಗೂ ಹಂತದಲ್ಲಿ ಮಾತ್ರ ನಮ್ಮ ಬಹು ಸಂಖ್ಯಾತ ಹೆಣ್ಣುಮಕ್ಕಳಿದ್ದರೆ ಸಾಕೆ? ಮತ್ತೊಂದು ಹಂತದಲ್ಲಿ ಹೆಣ್ಣುಮಕ್ಕಳು ಈ ಬಂಡವಾಳಶಾಹಿ ಜಗತ್ತಿನ ಕಪಿಮುಷ್ಠಿಗೆ ಸಿಕ್ಕು ಕಮಾಡಿಟಿಗಳಾಗಿ, ಅಂದರೆ, ಸರಕಾಗಿ ಬಳಕೆಯಾಗುತ್ತಿದ್ದಾರೆ. ಜಗತ್ತಿನ ಮಾರುಕಟ್ಟೆಯ ಬಹುದೊಡ್ಡ ಖರೀದಿದಾರರು ನಮ್ಮ ಮಹಿಳೆಯರು ಎನ್ನುವುದು ಒಂದು ವಾಸ್ತವ.

ಆದರೆ, ಇದರ ಜೊತೆಗೆ ಜಾಗತೀಕರಣದ ನಂತರದಲ್ಲಿ, ಹೆಣ್ಣುಮಕ್ಕಳೇ ಸ್ವತಃ ವಿವಿಧ ರೀತಿಯ ಲೈಂಗಿಕ ಸರಕಾಗಿ ಕೂಡ ಈ ವ್ಯಾಪಾರಿ ಜಗತ್ತಿನಲ್ಲಿ ಬಳಕೆಯಾಗುತ್ತಿರುವುದು ದುರದೃಷ್ಟದ ಇನ್ನೊಂದು ಮುಖ. ನಮ್ಮ ದೇಶದ ಲಕ್ಷಾಂತರ ಹೆಣ್ಣುಮಕ್ಕಳನ್ನು ಈಗಾಗಲೇ ಕಳ್ಳಸಾಗಣಿಕೆ, ಮಾರಾಟದ ಮೂಲಕ ವೇಶ್ಯಾವಾಟಿಕೆಗೆ ಬಲವಂತದಿAದ ನೂಕಿರುವುದು, ಪ್ರತಿ ಕ್ಷಣ ನೂಕುತ್ತಿರುವುದು ಒಂದು ಕಡೆಯಾದರೆ, ‘ನನ್ನ ದೇಹ ನನ್ನ ಹಕ್ಕು’ ಎನ್ನುವ ಕೆಲ ಎನ್‌ಜಿಓ[ಸ್ವಯಂಸೇವಾ ಸಂಸ್ಥೆ]ಗಳ ಪ್ರಚೋದನೆಯ ಮೂಲಕ, ‘ಲೈಂಗಿಕ ಕಾರ್ಯಕರ್ತೆಯರು’ ಎನ್ನುವಂತಹ ಒಂದು ಸಮುದಾಯವೇ ಸೃಷ್ಟಿಯಾಗಿ ಬಿಟ್ಟಿರುವುದು ಮತ್ತೊಂದು ದುರಂತ. ಹೆಣ್ಣಿನ ದೇಹ ವ್ಯಾಪಾರ ತಡೆಯಿಲ್ಲದಂತೆ ಮುಂದುವರಿಯಲು, ವೇಶ್ಯಾವಾಟಿಕೆಯನ್ನು ಸ್ವತಃ ಹೆಣ್ಣುಮಕ್ಕಳೇ ಇಚ್ಛೆಪಟ್ಟು ಆರಿಸಿಕೊಳ್ಳುವಂತೆ- ಈ ಬಂಡವಾಳಶಾಹಿ ವ್ಯವಸ್ಥೆ, ಹೆಣ್ಣು ಮನಸ್ಸುಗಳನ್ನು ಕೂಡ ಪಳಗಿಸುತ್ತಿರುವಂತಹ ವಿಪರ್ಯಾಸವನ್ನೂ ಅಸಹಾಯಕರಾಗಿ ನೋಡಬೇಕಾಗಿದೆ. ಹಾಗೇ ಮತ್ತೊಂದು ಕಡೆ ಹೆಣ್ಣನ್ನು ದೇಹ ಕೇಂದ್ರಿತವಾಗಿ ಪ್ರಚುರ ಪಡಿಸುತ್ತಿರುವ ಸಮೂಹ ಮಾಧ್ಯಮಗಳು, ಹೆಣ್ಣನ್ನು ಭೋಗ ಸಂಸ್ಕೃತಿಯ ವಾಹಕಳಾಗಿ ಅತ್ಯಂತ ವಿಕೃತವಾಗಿ, ಕೀಳಾಗಿ ಪ್ರತಿಷ್ಠಾಪಿಸುತ್ತಿರುವಂತಹ ದುರಂತಕ್ಕೂ ನಾವು ಅನಿವಾರ್ಯ ಸಾಕ್ಷಿಗಳಾಗಿದ್ದೇವೆ. ನಮ್ಮ ಮುಂದಿರುವಂತಹ ಹೆಣ್ಣು ಸಂಕುಲದ ಈ ಎಲ್ಲ ಬಹುಮುಖಿ ಸಮಸ್ಯೆಗಳಿಗೆ ಮೂಲಮಟ್ಟದಲ್ಲಿ ಪರಿಹಾರವನ್ನು ಕಂಡುಕೊಳ್ಳಲು, ಬಹು ಆಯಾಮಗಳಲ್ಲಿ ನಾವು ಯೋಚಿಸಿ ಹೆಜ್ಜೆಗಳನ್ನು ಇಡಬೇಕಿದೆ. ಮೊದಲನೆಯದಾಗಿ ಹೆಣ್ಣುಮಕ್ಕಳು ಕೇವಲ ಓಟ್ ಬ್ಯಾಂಕ್‌ಗಳಾಗಿ ಅಲ್ಲ- ಎಲ್ಲ ಹಂತಗಳಲ್ಲೂ ಅರ್ಧದಷ್ಟು ರಾಜಕೀಯ ನಾಯಕತ್ವವನ್ನು ಪ್ರತಿಷ್ಠಾಪಿಸುವ ದಿಕ್ಕಿನಲ್ಲಿ ಒಗ್ಗೂಡಿ ಪ್ರಯತ್ನಿಸಬೇಕು.

ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಅರ್ಧದಷ್ಟು ತೊಡಗುವಂತಾಗುವುದಷ್ಟೇ ಅಲ್ಲ, ಸಮರ್ಪಕವಾಗಿ ಸಂವಿಧಾನದ ಸಮಾನತೆಯ ಆಶಯ ಅನುಷ್ಠಾನ ಆಗುವ ಹಾಗೆ ಮಾಡುವಂತಹ ಸವಾಲನ್ನು ಕೂಡ ಪ್ರಥಮ ಜವಾಬ್ದಾರಿಯಾಗಿ ನಾವು ಸ್ವೀಕರಿಸಬೇಕು. ಎರಡನೆಯದಾಗಿ ಹೆಣ್ಣಿನ ಮೇಲಿನ ಎಲ್ಲ ಬಗೆಯ ಹಿಂಸೆ, ಕ್ರೌರ್ಯಕ್ಕೆ ತಡೆಯೊಡ್ಡಲು ಬೇಕಾದ ರಚನಾತ್ಮಕ, ಸಂಘಟನಾತ್ಮಕ, ವಿಕೇಂದ್ರೀಕೃತ ಕಾರ್ಯ ಯೋಜನೆಗಳನ್ನು ಚರ್ಚಿಸಿ, ಆಮೂಲಾಗ್ರವಾಗಿ ಸಿದ್ಧಪಡಿಸಿಕೊಳ್ಳಬೇಕು. ಜೊತೆಗೆ, ಹೆಣ್ಣು ಸಂಕುಲ ಇಲ್ಲಿ ನೆಮ್ಮದಿಯಾಗಿ, ಘನತೆ, ಗೌರವದಿಂದ ಬದುಕಲಿಕ್ಕೆ ಏನೆಲ್ಲ ಬೇಕು? ಎನ್ನುವುದರ ಕುರಿತು, ಸರ್ಕಾರದ ಎದುರಿಗೆ ಸಮಸ್ಯೆಗಳ ಪರಿಹಾರಕ್ಕೆ ಸಶಕ್ತವಾದ ಬೇಡಿಕೆಯನ್ನು ಸರಿಯಾದ ಸಮಯಗಳಲ್ಲಿ ಇಡುವಂತಹ ಕಾರ್ಯಯೋಜನೆಯನ್ನು ಸಿದ್ಧಗೊಳಿಸಬೇಕು. ಜೊತೆಗೆ ಇದನ್ನು ಆಗು ಮಾಡಲು ಸರ್ಕಾರದ ಪ್ರತಿಹಂತದ ಅನುಷ್ಠಾನದಲ್ಲಿ ಜವಾಬ್ದಾರಿಯುತ ಹೆಣ್ಣುಮಕ್ಕಳು ಸೇರ್ಪಡೆಯಾಗಲು ಬೇಕಾದಂತಹ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಉದಾಹರಣೆಗೆ ರಾಜ್ಯ ಹಾಗೂ ಕೇಂದ್ರ ಬಜೆಟ್ ಮಂಡನೆಯ ಸಮಯದಲ್ಲಿ ಮಹಿಳಾ ಅವಶ್ಯಕತೆಯ ಹಕ್ಕೊತ್ತಾಯಗಳು ಕಡ್ಡಾಯವಾಗಿ ಸರ್ಕಾರ ಹಾಗೂ ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರಬೇಕು. ಮೂರನೆಯದಾಗಿ ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ದಮನಿಸುವ ಮನಸ್ಥಿತಿಯನ್ನು ಮೂಲಮಟ್ಟದಲ್ಲಿ ಬದಲಾಯಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಕುರಿತು ಸಮಗ್ರವಾಗಿ ಯೋಚಿಸಿ ಪರಿಹಾರಗಳನ್ನು ವಿಕೇಂದ್ರೀಕೃತ ನೆಲೆಯಲ್ಲಿ ಅನುಷ್ಠಾನಕ್ಕೆ ತರಬೇಕು. ಕೊನೆಯದಾಗಿ ಸ್ವತಃ ಹೆಣ್ಣುಮಕ್ಕಳು ನಾವು, ನಮ್ಮ ಕೀಳರಿಮೆಗೆ ಕಾರಣಗಳೇನು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ- ನಮ್ಮ ದೌರ್ಬಲ್ಯ, ಸಣ್ಣತನಗಳನ್ನು ಮೆಟ್ಟಿ ನಿಂತು, ವೈಯಕ್ತಿಕತೆಯನ್ನ ಮೀರಿ, ಒಟ್ಟು ಮಹಿಳಾ ಸಂಕುಲ ಸಂಘಟಿತವಾಗಿ, ಸಶಕ್ತವಾದ ಹೆಜ್ಜೆಗಳನ್ನೂರಿ ಸಮಾಜದಲ್ಲಿ ನೆಲೆ ನಿಲ್ಲುವಂತಾಗುವ ದಾರಿಗಳನ್ನು ಕಂಡುಕೊಳ್ಳಬೇಕು.

ಇದಕ್ಕಾಗಿ ಯುವಜನಾಂಗವನ್ನೂ ಒಳಗೊಂಡು, ಅವಿರತ ಚಿಂತನಮAಥನಗಳು ನಡೆಯಬೇಕು. ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ -ಯಾವುದನ್ನೂ ಗುಲಾಮಗಿರಿಗೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕವಂತಾಗಲು ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ, ಸಹೋದರಿತ್ವದ ಆಶಯದ ಜೊತೆಗೆ, ಒಗ್ಗೂಡಿ ಕಂಡುಕೊಳ್ಳುವAತಾಗಬೇಕು. ಈ ಆಶಯ ಕೇವಲ ಮಾತಾಗಿ ಉಳಿಯದೇ ಕೃತಿಯ ರೂಪದಲ್ಲಿ ಕಾರ್ಯಗತವಾಗುವೆಡೆಗೆ ನಮ್ಮ ಹೆಜ್ಜೆಗಳು ಸಾಗಬೇಕಿದೆ. ಇದಕ್ಕಾಗಿ ತಕ್ಷಣದ ಒಂದು ಪ್ರಸ್ತಾವನೆ- ಹೆಣ್ಣುಸಂಕುಲದ ಮೇಲೆ ಮಿತಿಮೀರಿ ಹೋಗುತ್ತಿರುವಂತಹ ಕ್ರೌರ್ಯ, ಹಿಂಸೆ, ದೌರ್ಜನ್ಯವನ್ನು ಖಂಡಿಸಿ ಎಲ್ಲಾ ಮಹಿಳಾ, ಸಮಾನಮನಸ್ಕ, ಪ್ರಗತಿಪರ ಸಂಘಟನೆಗಳು, ಪಕ್ಷಾತೀತವಾಗಿ ಒಗ್ಗೂಡಿ, ಇದೇ ಮಾರ್ಚ್ ೮ರ ಈ ಬಾರಿಯ ಮಹಿಳಾ ದಿನಾಚರಣೆಯನ್ನು ದೇಶಾದ್ಯಂತ, ಹಳ್ಳಿಹಳ್ಳಿಗಳಲ್ಲೂ “ಕರಾಳ ಮಹಿಳಾ ದಿನಾಚರಣೆ”ಯಾಗಿ ಆಚರಿಸುವ ಮೂಲಕ ಸರ್ಕಾರಕ್ಕೆ, ವ್ಯವಸ್ಥೆಗೆ, ಪುರುಷಾಳ್ವಿಕೆಯ ಸಮಾಜಕ್ಕೆ ಹೆಣ್ಣುಸಂಕುಲದ ಪ್ರತಿರೋಧವನ್ನು ಸಶಕ್ತವಾಗಿ ಮುಟ್ಟಿಸುವಂತಾಗಬೇಕು.

Previous Post

ಗೌರಿ ಹತ್ಯೆ ಆರೋಪಿಗೆ ಸುಪ್ರೀಂ ನೋಟಿಸ್ ಜಾರಿ

Next Post

ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

Related Posts

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
0

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರುವ ಬೆಡಗಿ ಎಂದೇ ಹೇಳಬಹುದು. ಇದೀಗ...

Read moreDetails

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

July 2, 2025
Next Post
ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

Please login to join discussion

Recent News

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada