ವಿಧಾನಸಭೆ ಸ್ಪೀಕರ್ ಪೀಠದ ಮುಂದೆ ಬಂದು ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ಸದನದಿಂದ ಸಸ್ಪೆಂಡ್ ಮಾಡಲಾಗಿದೆ. ಕಾನೂನು ಸಚಿವರು ಕ್ರಮಕ್ಕೆ ಪ್ರಸ್ತಾವನೆ ಮಾಡಿದ ಬಳಿಕ ಸ್ಪೀಕರ್ಗೆ ಅಗೌರವ ತೋರಿಸಿದ 18 ಮಂದಿ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯು.ಟಿ ಖಾದರ್ ಆದೇಶ ಮಾಡಿದ್ದಾರೆ.

ಬಿಜೆಪಿ, ಜೆಡಿಎಸ್ ಶಾಸಕರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಈ ಸದನದ ಪಾವಿತ್ರ್ಯತೆ ಕಾಪಾಡಬೇಕು. ನೀವು ಯು.ಟಿ.ಖಾದರ್ಗೆ ಅಪಮಾನ ಮಾಡಿ. ಆದರೆ ಈ ಪೀಠಕ್ಕೆ ಅಪಮಾನ ನಾವು ಸಹಿಸಲ್ಲ. ಸ್ಪೀಕರ್ ಪೀಠದ ಮೇಲೆ ಕಾಗದ ಎಸೆದಿದ್ದಾರೆ. ಇದನ್ನ ಯಾರೂ ಸಹಿಸುವುದಿಲ್ಲ. ಇದು ಪೀಠಕ್ಕೆ ತೋರಿದ ಅಗೌರವ. ಚನ್ನಬಸಪ್ಪ, ಶರಣು ಸಲಗಾರ್, ಸಿ.ಕೆ.ರಾಮಮೂರ್ತಿ, ಮುನಿರತ್ನ, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಅಶ್ವಥ್ ನಾರಾಯಣ್, ಯಶಪಾಲ್ ಸುವರ್ಣ, ದೊಡ್ಡನಗೌಡ ಪಾಟೀಲ್ ಅಗೌರವ ತೋರಿದ್ದಾರೆ ಎಂದಿದ್ದಾರೆ.

ಈ ವೇಳೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ಸದನಕ್ಕೆ ಅವಮಾನ ಆಗುವಂತೆ ನಡೆದುಕೊಳ್ಳಬಾರದು. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆ. ಈ 18 ಜನರನ್ನ ಸದನಕ್ಕೆ ಬಾರದಂತೆ ಮಾಡಿ, ಅಮಾನತು ಮಾಡಿ ಎಂದಿದ್ದಾರೆ. ಕಾನೂನು ಸಚಿವ ಹೆಚ್.ಕೆ.ಪಾಟೀಲ್ (H K Patil) ಮನವಿ ಮೇರೆಗೆ ಆರು ತಿಂಗಳವರೆಗೆ ಇವರರ್ಯಾರು ಸದನಕ್ಕೆ ಬರುವಂತಿಲ್ಲ ಎಂದು ಶಾಸಕರನ್ನ ಅಮಾನತು ಮಾಡಿ ಸ್ಪೀಕರ್ ಆದೇಶ ಮಾಡಿದ್ದಾರೆ.

1- ದೊಡ್ಡಣ್ಣ ಗೌಡ ಪಾಟೀಲ್ (Doddanna Gowda Patil)
2- ಸಿ ಕೆ ರಾಮಮೂರ್ತಿ (CK Ramamurthy)
3- ಅಶ್ವತ್ಥ ನಾರಾಯಣ (Ashwath Narayan)
4- ಎಸ್.ಆರ್ ವಿಶ್ವನಾಥ್ (S R Vishwanath)
5 – ಬೈರತಿ ಬಸವರಾಜ (Byrathi Basavaraj)
6- ಎಂ ಆರ್ ಪಾಟೀಲ್ (M R Patil)
7- ಚನ್ನಬಸಪ್ಪ (Channabasappa)
8- ಬಿ ಸುರೇಶ್ ಗೌಡ (B Suresh Gowda)
9- ಉಮನಾಥ್ ಕೋಟ್ಯಾನ್ (Umanath Kotyan)
10- ಶರಣು ಸಲಗಾರ್ (Sharanu Salagar)
11- ಶೈಲೇಂದ್ರ ಬೆಲ್ದಾಳೆ (Shylendra Beldale)
12- ಯಶಪಾಲ್ ಸುವರ್ಣ (Yashpal Suvarna)
13- ಹರೀಶ್ ಬಿಪಿ (Harish BP)
14- ಡಾ. ಭರತ್ ಶೆಟ್ಟಿ (Dr. Bharath Shetty)
15- ಮುನಿರತ್ನ (Munirathna)
16- ಬಸವರಾಜ ಮತ್ತಿಮೋಡ್ (Basavaraja Mattimod)
17 – ಧೀರಜ್ ಮುನಿರಾಜು (Dheeraj Muniraj)
18- ಡಾ ಚಂದ್ರು ಲಮಾಣಿ (Dr. Chandru Lamani)