ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭೆಯ ಅಧ್ಯಕ್ಷರಾಗಿ ಎರಡು ವರ್ಷಗಳನ್ನು ಪೊರೈಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇ-ವಿಧಾನದ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
2014ರಲ್ಲಿ ಮೊಟ್ಟ ಮೊದಲ ಬಾರಿಗೆ ಹಿಮಾಚಲ ಪ್ರದೇಶ ಸರ್ಕಾರವು ಇ-ವಿಧಾನವನ್ನ ಅನುಷ್ಠಾನಗೊಳಿಸಿತ್ತು ಇದರಿಂದ ಕಾನೂನು ಮಾಡುವ ಪ್ರಕ್ರಿಯೆಯ ಯಾಂತ್ರೀಕರಣವನ್ನು ಸಕ್ರಿಯಗೊಳಿಸುತ್ತದೆ ಮತ್ತು ಅಧಿವೇಶನಗಳನ್ನು ಕಾಗದರಹಿತವಾಗಿಸುತ್ತದೆ ಇದರಿಂದ ನೂರಾರು ಮರಗಳನ್ನು ಮತ್ತು ಸಾರ್ವಜನಿಕರ ಹಣವು ಪೋಲಾಗುವುದನ್ನ ಉಳಿಸುತ್ತದೆ.
ಈ ಎರಡು ವರ್ಷಗಳಲ್ಲಿ ನಾನು ಮಾಡಲು ಬಯಸಿದ ಒಂದು ಕೆಲಸವೇನೆಂದರೆ ಅದು ಇ-ವಿಧಾನ ಜಾರಿಗೊಳಿಸುವುದು ಆದರೇ ಅದರ ಅನುಷ್ಠಾನ ವಿಳಂಬವಾಗುತ್ತಿರುವುದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಅವರು ಸರ್ಕಾವನ್ನು ದೊಷಿಸಿದ್ದಾರೆ.
ಶಾಸಕಾಂಗವು ಯಾವುದೇ ಆರ್ಥಿಕ ಅಧಿಕಾರವನ್ನು ಹೊಂದಿಲ್ಲ ಮತ್ತು ಈ ಹಿಂದಿನ ಎಲ್ಲಾ ಸಭಾಧ್ಯಕ್ಷರ ಪ್ರಯತ್ನಗಳ ಹೊರತಾಗಿಯೂ 2014ರಿಂದ ಸರ್ಕಾರವನ್ನ ಅವಲಂಬಿಸಬೇಕಾಗಿರುವ ಕಾರಣ ಇ-ವಿಧಾನ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಒಮ್ಮೆ ಇ-ವಿಧಾನವು ಕಾರ್ಯರೂಪಕ್ಕೆ ಬಂದರೆ ಶಾಸಕಾಂಗದ ಎಲ್ಲಾ ಪ್ರಮುಖ ಕಾರ್ಯಗಳನ್ನ,ವರದಿಗಳನ್ನ,ಬಿಲ್ ಗಳನ್ನು ಹಾಕುವ ಮೂಲಕ ಉತ್ತರಗಳನ್ನು ಉತ್ತರಿಸುತ್ತದೆ ವೆಬ್ ಮತ್ತು ಮೊಬೈಲ್ ಎರಡರಲ್ಲೂ ವಾಸ್ತವಿಕವಾಗಿ ವೀಕ್ಷಿಸಬಹುದು ಎಂದು ಕಾಗೇರಿ ಹೇಳಿದ್ದಾರೆ.
ಜಾಗತಿಕವಾಗಿ ಅಳವಡಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅಧಿಕಾರಿಗಳು ಆಡಳಿತದಲ್ಲಿ ಹೊಸ ಹೊಸ ಆವಿಷ್ಕಾರಗಳಿಗಾಗಿ ಆಕಾಂಕ್ಷಿಯಾಗಬೇಕು ಮತ್ತು ಸ್ಪಷ್ಟೀಕರಣ ಕೋರಿ ಕಡತಗಳನ್ನು ಹಿಂದಕ್ಕೆ ಕಳುಹಿಸುವ ಬ್ರಿಟಿಷ್ ಯುಗದ ದಿನಚರಿಯನ್ನು ತೊಡೆದುಹಾಕಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಗಂಬೀರವಾಗಿ ಪರಿಗಣಿಸುವಂತೆ ಈ ವೇಳೆ ಅವರು ಒತ್ತಾಯಿಸಿದ್ದಾರೆ.
ಕೇರಳ ಮತ್ತು ಹಿಮಾಚಲ ಪ್ರದೇಶದಂತಹ ಸಣ್ಣ ರಾಜ್ಯಗಳು ಇ-ವಿಧಾನವನ್ನು ಜಾರಿಗೆ ತಂದವು, ಆದರೆ ಕರ್ನಾಟಕ ರಾಜ್ಯದ ಬೆಂಗಳೂರು ನಗರವು ಜಾಗತಿಕವಾಗಿ ಐಟಿ-ಬಿಟಿ ನಗರ ಎಂದು ಖ್ಯಾತಗೊಂಡಿದ್ದರು ಇ-ವಿಧಾನ ಅನುಷ್ಠಾನ ವಿಳಂಬವಾಗುತ್ತಿರುವುದಕ್ಕೆ ಕಾಗೇರಿ ವಿಷಾದಿಸಿದ್ದಾರೆ.
ಕಾಗೇರಿರವರು 2019ರ ಜುಲೈ 31ರಂದು ವಿಧಾನಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಕಳೆದ ಎರಡು ವರ್ಷಗಳಲ್ಲಿ ಒಟ್ಟು ಐದು ಬಾರಿ 54 ದಿನಗಳು ಕಲಾಪ ನಡೆದಿದ್ದು ಒಟ್ಟು 98 ಮಸೂದೆಗಳನ್ನು ಮಂಡಿಸಲಾಯಿತು 96 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಅವರು ಅವರ ಸಾಧನೆಗಳ ವರದಿಯನ್ನು ಬಿಡುಗಡೆ ಮಾಡಿದ ನಂತರ ಹೇಳಿದ್ದಾರೆ.
ಸ್ಪೀಕರ್ ಅವರು ‘ಅತ್ಯುತ್ತಮ ಶಾಸಕ’ ಪ್ರಶಸ್ತಿಯನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ. ಮುಂದಿನ ಅಧಿವೇಶನದಲ್ಲಿ ಪ್ರಶಸ್ತಿಯನ್ನು ನೀಡಲು ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಮಾರ್ಗಸೂಚಿಗಳು ಸಿದ್ಧವಾಗಿವೆ ಎಂದು ಅವರು ಹೇಳಿದರು.
ಅಲ್ಲದೆ, ಕಾಗೇರಿ ಅವರು ಸದಸ್ಯರಾಗಿರುವ ಸಂವಿಧಾನದ 10 ನೇ ಅನುಸೂಚಿಯ (ಪಕ್ಷಾಂತರ ವಿರೋಧಿ ಕಾನೂನು) ಅಡಿಯಲ್ಲಿ ಅಧ್ಯಕ್ಷರ ಅಧಿಕಾರವನ್ನು ಪರಿಶೀಲಿಸುವ ಸಮಿತಿಯ ವರದಿಯು ಅಂತಿಮ ಹಂತದಲ್ಲಿದೆ ಮತ್ತು ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಲಾಗುವುದು ಎಂದು ಹೇಳಿದರು.