ರೀಲ್ಸ್ ಸ್ಟಾರ್ (reels star) ಸೋನು ಶ್ರೀನಿವಾಸ್ ಗೌಡ (sonu srinivas gowda) 2 ದಿನದ ಅರೆಸ್ಟ್ ಆಗಿದ್ದಾರೆ. 8 ವರ್ಷದ ಬಾಲಕಿಯನ್ನ ದತ್ತು ಪಡೆದಿದ್ದ ಕೇಸ್ನಲ್ಲಿ ರೀಲ್ಸ್ ಸ್ಟಾರ್ ಸೋನುಗೌಳನ್ನ ಬ್ಯಾಡರಹಳ್ಳಿ ಠಾಣೆ ಪೋಲಿಸರು ಬಂಧಿಸಿದ್ದಾರೆ.ಮಗು ದತ್ತು (adaption) ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ಈಗಾಗಲೇ ಮಗುವನ್ನ ಕರೆ ತಂದು ಸೋನು ಶ್ರೀನಿವಾಸ ಗೌಡ ತನ್ನ ಜೊತೆ ಇಟ್ಟುಕೊಂಡಿದ್ದು, ಈ ಸಂಬಂಧ ಮಗುವಿನ ತಂದೆ-ತಾಯಿಗೂ ನೊಟೀಸ್ (Legal notice) ನೀಡಿದ್ದ ಪೊಲೀಸರು ತನಿಖೆ ಮುಂದುವರೆಸಿದ್ದರು.
![](https://pratidhvani.com/wp-content/uploads/2024/03/IMG_6173-1.jpeg)
ಈ ಪ್ರಕರಣದಲ್ಲಿ ಸ್ಥಳ ಮಹಜರು ಮಾಡಲು ಪೊಲೀಸರು ಸೋನು ಶ್ರೀನಿವಾಸ್ ಗೌಡರನ್ನ ರಾಯಚೂರಿನ ಕಾಚಾಪುರ ಎಂಬ ಗ್ರಾಮಕ್ಕೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಸ್ಥಳೀಯರು ರೊಚ್ಚಿಗೆದಿದ್ದು ಅವನು ಶ್ರೀನಿವಾಸ್ ಗೌಡ ಇದ್ದ ಪೊಲೀಸ್ ವಾಹನವನ್ನೇ ಜನ ಅಟ್ಟಾಡಿಸಿಕೊಂಡು ಬಂದಿದ್ದಾರೆ. ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
![](https://pratidhvani.com/wp-content/uploads/2024/03/IMG_6172-1.jpeg)
ಒಂದುವೇಳೆ ಮಗುವಿನ ತಂದೆ ತಾಯಿ ಹಣಕ್ಕಾಗಿ ಮಗುವನ್ನು ದತ್ತು ಕೊಟ್ಟಿದ್ದಾರೆ ಎಂದು ಕಂಡುಬಂದರೆ ಸೋನು ಶ್ರೀನುವಾಸ್ ಗೌಡಗೆ ಈ ಪ್ರಕರಣದಲ್ಲಿ ಮತ್ತಷ್ಟು ದೊಡ್ಡ ಸಂಕಷ್ಟ ಎದುರಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಈ ಸ್ಥಳ ಮಹಜರು ಪ್ರಕ್ರಿಯೆ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.