ಸಾಮಾಜಿಕ ಜಾಲತಾಣಗಳ ಮೂಲಕ ಸಖತ್ ಫೇಮಸ್ ಆಗಿರುವ Big Boss ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಕಾರನ್ನು ತೆಗೆಯಲು ಹೋಗಿ ಪಿಲ್ಲರ್ ಗೆ ಕಾರು ಗುದ್ದಿಸಿದ್ದಾರೆ.
![](https://pratidhvani.com/wp-content/uploads/2024/02/hq720-jpg.webp)
ಬ್ರೇಕ್ ತುಳಿಯಲು ಹೋಗಿ ಎಕ್ಸಿಲೇಟರ್ ತುಳಿದದ್ದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಮಾಹಿತಿಗಳ ಪ್ರಕಾರ ಸೋನು ಇತ್ತೀಚೆಗಷ್ಟೇ ಕಾರು ಕಲಿಯಲು ಆರಂಭಿಸಿದ್ದಾರಂತೆ. ಹಾಗಾಗಿ ಎಕ್ಸಿಲೇಟರ್ ಮತ್ತು ಬ್ರೇಕ್ ನಡುವಿನ ಗೊಂದಲದಿಂದಾಗಿ ಅಪಾರ್ಟ್ ಮೆಂಟ್ ನ ಪಿಲ್ಲರ್ ಗೆ ಕಾರು ಗುದ್ದಿಸಿದ್ದಾರೆ. ಕೈಗೆ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಏಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
![](https://pratidhvani.com/wp-content/uploads/2024/02/news18-bl-zb-103-1024x768.webp)
#Sonusrinivasgowda #Caraccident #Banglore #hospital