
ಮಡಿಕೇರಿ:ಅತ್ತೆ ಹಾಗೂ ಸಂಬಂಧಿಕರೊಬ್ಬರ ಮೇಲೆ ಅಳಿಯ ಮಚ್ಚು ಬೀಸಿರುವ ಘಟನೆ ನಡೆದಿದೆ.

ಈ ಘಟನೆ ಜಿಲ್ಲೆಯ ನಾಪೋಕ್ಲು ಹತ್ತಿರದ ಅಯ್ಯಂಗೆರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಮಡಿಕೇರಿ ನಿವಾಸಿ ಹ್ಯಾರಿಸ್ ಎಂದು ಗುರುತಿಸಲಾಗಿದೆ. ಆರೋಪಿ ಅಯ್ಯಂಗೇರಿ ಗ್ರಾಮದಲ್ಲಿದ್ದ ಅತ್ತೆ ಮನೆಗೆ ತೆರಳಿ, ಮನೆಯ ಮುಂಭಾಗದ ಬಾಗಿಲಿನ ಚಿಲಕ ಹಾಕಿ, ಹಿಂಬದಿ ಬಾಗಿಲನ್ನು ಒಡೆದು ಒಳಗೆ ಹೋಗಿದ್ದಾನೆ.
ನಂತರ ಅತ್ತೆ ಸೇರಿದಂತೆ ಮತ್ತೋರ್ವ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಅಯ್ಯಂಗೇರಿಗೆ ಶುಕ್ರವಾರ ಮಧ್ಯರಾತ್ರಿ ಆಟೋದಲ್ಲಿ ತೆರಳಿದ್ದ ಹ್ಯಾರಿಸ್ ಕೃತ್ಯ ನಡೆಸಿ ಆಟೋದೊಂದಿಗೆ ಪರಾರಿಯಾಗಲು ಯತ್ನಿಸಿದಾಗ ಮಾಹಿತಿ ಹರಿತ 112 ಪೊಲೀಸರು ಹಾಗೂ ನಾಪೋಕ್ಲು ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ನಾಪೋಕ್ಲು ಬಳಿಯ ಹುದ್ದೂರು ಗ್ರಾಮದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಿಂದ ಆರೋಪಿಯ ಅತ್ತೆ ಐಸಮ್ಮ ಹಾಗೂ ಸಂಬಂಧಿ ಕದೀಜ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಹಿಳೆಯರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಈ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.