ಮದ್ದೂರು ಪುರಸಭೆಯನ್ನು (Maddur municipal) ಮೇಲ್ದರ್ಜೆಗೆ ಏರಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದ ರೈತ ಸಂಘಟನೆಗಳ (Farmers association) ಕುರಿತು ಪ್ರತಿಕ್ರಿಯಿಸುವ ವೇಳೆ ನಾಲಿಗೆ ಹರಿಬಿಟ್ಟಿದ್ದ ಮದ್ದೂರು ಶಾಸಕ ಕದಲೂರು ಉದಯ್ (Kadaluru uday) ವಿರುದ್ಧ ಈಗ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಮದ್ದೂರು ಪುರಸಭೆಯನ್ನ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು, ರೈತರು ಸೇರಿದಂತೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಗೆ ಮುಂದಾಗಿದ್ದವು. ಈ ವೇಳೆ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕದಲೂರು ಉದಯ್, ಅಭಿವೃದ್ಧಿಗೆ ವಿರೋಧಿಸುವವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ.

ಹೀಗೆ ಅಭಿವೃದ್ಧಿಗೆ ಗೆ ವಿರೋಧ ಮಾಡುವವರ ಬಗ್ಗೆ ಏನು ಹೇಳೋಕಾಗುತ್ತೆ. ಕೆಲವು ರೋಲ್ ಕಾಲ್ ಗಿರಾಕಿಗಳು ಸಂಘ ಸಂಸ್ಥೆ ಕಟ್ಟಿಕೊಂಡು ಎಂಜಲು ಕಾಸಿಗೆ ನಿಂತಿವೆ. ಯಾರೋ ಕೊಟ್ಟ ಪ್ರಸಾದ ಈಸ್ಕೋಂಡು ಈ ತರ ಮಾಡ್ತಿದ್ದಾರೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಸದ್ಯ ಶಾಸಕರ ಹೇಳಿಕೆ ಖಂಡಿಸಿ ಮದ್ದೂರಿನಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.