ಕಾಗ್ರೆಸ್ ನಲ್ಲಿ ಪವರ್ ಶೇರಿಂಗ್ (power sharing) ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ (Veerappa moily) ಪ್ರತಿಕ್ರಿಯಿಸಿದ್ದು, ರಾಜ್ಯದ ಮುಖಂಡರು ಹಾಗೂ ಕೇಂದ್ರದ ಹೈಕಮ್ಯಾಂಡ್ (Congress highcommand) ನಾಯಕರ ನಡುವೆ ಈ ಚರ್ಚೆಯಾಗಿರಬಹುದು,ಇದರಲ್ಲಿ ನಾನು ಅಭಿಪ್ರಾಯ ತಿಳಿಸಲ್ಲ ಎಂದಿದ್ದಾರೆ.

ಸಿಎಂ ಬದಲಾವಣೆ ವಿಚಾರದ ಚರ್ಚೆಯಲ್ಲಿ ದೆಹಲಿ ನಾಯಕರು ನನ್ನ ಅಭಿಪ್ರಾಯ ಕೇಳಿಲ್ಲ.ಹೀಗಾಗಿ ನನ್ನ ಅಭಿಪ್ರಾಯ ತಿಳಿಸಿದ್ರೆ ಅನಾವಶ್ಯಕವಾಗಿ ಅಧಿಕ ಪ್ರಸಂಗತನ ಮಾಡಿದಂತಾಗಲಿದೆ ಎಂದು ಮೊಯ್ಲಿ ಹೇಳಿದ್ದಾರೆ.

ಈ ಬಗ್ಗೆ ಯಾರು ಚರ್ಚೆ ಮಾಡಿದ್ರೋ, ಅವರೇ ಹೇಳಬೇಕು. ಇಲ್ಲದಿದ್ರೆ ಅಧಿಕ ಪ್ರಸಂಗತನ ಮಾಡಿದಂತೆ ಆಗಲಿದೆ. ಈ ಎಲ್ಲಕ್ಕಿಂತ ಮೊದಲು ಸರ್ಕಾರದ ಸ್ಟೆಬಿಲಿಟಿ ಮುಖ್ಯ, ಸಂಪೂರ್ಣ ಐದು ವರ್ಷ ಆಡಳಿತ ಮಾಡಬೇಕು.ಹೀಗಾಗಿ ರಾಜ್ಯದ ಹಾಗೂ ಕೇಂದ್ರದ ನಾಯಕರು ಮಾತಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.






