ಬೆಂಗಳೂರು : ಮೇ 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಳೆದು-ತೂಗಿ ಖಾತೆಗಳನ್ನ ಹಂಚಿಕೆ ಮಾಡಿದ್ದು, ಇಂದು ಸಚಿವ ಸಂಪುಟ ವಿಸ್ತರಣೆಯಾಗಿದ್ದು 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ರು. ಇದೇ ವೇಳೆ ಸಚಿವ ಸ್ಥಾನ ಕೈ ತಪ್ಪಿದ ಕಾಂಗ್ರೆಸ್ ಕೆಲ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ


ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇದಕ್ಕೆ ನಾನೇನು ಮಾಡಲು ಸಾಧ್ಯ. ನಾನೂ ಕೂಡ ಸಾಕಷ್ಟು ಬಾರಿ ಅವಕಾಶದಿಂದ ವಂಚಿತನಾಗಿದ್ದೆ. ಧರಂಸಿಂಗ್, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನನಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ, ನಾನು ತಾಳ್ಮೆಯಿಂದ ಕಾದಿದ್ದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಮಾಡಿಕೊಂಡರೆ ನಾನು ಏನು ಮಾಡಲು ಆಗುತ್ತೆ? ಮಾತನಾಡುವವರು ಮಾತನಾಡಲಿ. ನಾನೇನು ಮಾತನಾಡುವುದಿಲ್ಲ. ತಾಳ್ಮೆ ಇದ್ದರೆ ಮುಂದಿನ ದಿನಗಳಲ್ಲಿ ಸಿಗುತ್ತೆದೆ ಎಂದರು ಡಿಸಿಎಂ ಹೇಳಿದ್ರು..











