
ಪ್ರಕೃತಿ ಮತ್ತು ಸಮಾಜವು ನಮಗೆ ಎಲ್ಲವನ್ನೂ ಕೊಟ್ಟಿದೆ. ದೈಹಿಕ ಅಸ್ತಿತ್ವ, ನಿಲ್ಲಲು ಸ್ಥಳ, ಗಾಳಿ, ಬೆಳಕು, ನೀರು, ಅನ್ನ, ಆಹಾರ, ಗೌರವ, ವಸ್ತ್ರ, ಸ್ಥಾನಮಾನ ಇತ್ಯಾದಿ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ಸಮಾಜಕ್ಕೆ ಏನನ್ನು ಕೊಟ್ಟಿದ್ದೇವೆ ಎಂದು ಎಷ್ಟು ಜನ ಯೋಚಿಸುತ್ತಾರೋ ತಿಳಿಯದು. ಪ್ರತಿಯೊಬ್ಬನೂ ಸಹ ಒಂದೇ ಒಂದು ಸಾರಿಯಾದರೂ ಈ ಬಗ್ಗೆ ಜನ ಯೋಚಿಸಲಿ ಎಂದು ಆಶಿಸುತ್ತೇನೆ.

ಎಂಬಂತೆ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಬೇಕು. ಮತ್ತು ಅದು ಬೇರೆಯವರ ಒತ್ತಾಯದಿಂದಲ್ಲದೆ ಸ್ವಯಂ ಪ್ರೇರಿತವಾಗಿ ಅವರವರ ಮನದಲ್ಲಿಯೇ ಮೂಡುವಂತಾಗಬೇಕು. ಸದಾ ನಾನು, ನನಗಾಗಿ ಮತ್ತು ನನ್ನಿಂದಲೇ ಎನ್ನುವ ಮನುಷ್ಯ ತನ್ನವರಿಗೆ, ಕುಟುಂಬಕ್ಕೆ, ಗೆಳೆಯರಿಗೆ, ನೆರೆಹೊರೆಯವರಿಗಾಗಿ, ನಾಡು ನುಡಿಗಾಗಿ, ದೇಶಕ್ಕಾಗಿ ಏನನ್ನು ಮಾಡಿದ್ದೇನೆ ಎಂಬುದನ್ನು ಯೋಚಿಸುವುದು, ಪ್ರಶ್ನಿಸಿಕೊಳ್ಳುವುದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ. ಹೀಗಾದಾಗ ಅವುಗಳಿಗಾಗಿ ಏನಾದರೂ ಮಾಡಬೇಕು ಎಂಬ ಹಂಬಲವು ನಮ್ಮಲ್ಲಿ ಮೂಡಲು ಸಾಧ್ಯವಾಗುತ್ತದೆ.
ಮಾನವನ ಇತಿಹಾಸದಲ್ಲಿ ದಾರ್ಶನಿಕರು, ಚಿಂತಕರು, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು,ವಿಜ್ಞಾನಿಗಳು, ಕೆಲವು ವ್ಯಾಪಾರೋದ್ಯಮಿಗಳು ಹೀಗೆ ಹಲವಾರು ವರ್ಗದ ಜನರು ಮಾಡಿದ ನಿಸ್ವಾರ್ಥಸೇವೆ, ಸಮಾಜಮುಖಿ ವರ್ತನೆ ಹಾಗೂ ತ್ಯಾಗ ಬಲಿದಾನಗಳಿಂದಾಗಿಯೇ ಈ ಸಮಾಜವು, ನಮ್ಮ ಜೀವನವು ಪ್ರಾರಂಭಿಕವಾದ ಹಾಗೂ ಆಗಾಗ ಉದ್ಭವಿಸುವ ಅಡೆತಡೆಗಳನ್ನು ನಿವಾರಿಸಿಕೊಂಡು ಈ ಹಂತದವರೆಗೂ ಬೆಳವಣಿಗೆಯಾಗಲು ಮತ್ತು ಸುಖಮಯವಾಗಲು ಹಾಗೂ ಸರಾಗವಾಗಿ ನಡೆದುಕೊಂಡು ಬರಲು ಸಾಧ್ಯವಾಗಿದೆ. ಹಾಗಾಗಿಯೇ ಅರ್ಕಿಮಿಡಿಸ್, ಸಾಕ್ರಿಟಿಸ್, ಪ್ಲೇಟೊ ಗೌತಮ ಬುದ್ಧ, ಅಶೋಕ, ಬಸವಣ್ಣ, ದಾಸರು, ಶರಣರು, ಗಾಂಧೀಜಿ, ಅಂಬೇಡ್ಕರ್ ಐನ್ ಸ್ಟೀನ್ ಮುಂತಾದ ಮಹನೀಯರು ನೂರಾರು, ಸಾವಿರಾರು ವರ್ಷಗಳು ಕಳೆದರೂ ಸಹ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ನಮಗೆ ನಮ್ಮದೇ ವಂಶದ ಮೂರ್ನಾಲ್ಕು ತಲೆಮಾರಿನ ಹಿಂದಿನ ಇತಿಹಾಸ ತಿಳಿದಿಲ್ಲವಾದರೂ ಸಹ ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡಿದ್ದೇವೆ. ಅದಕ್ಕೆ ಅವರು ಮಾಡಿದ ಗುರುತರವಾದ ಕೆಲಸಗಳೇ ಕಾರಣವೇ ಹೊರತು ಮತ್ತಿನ್ನೇನೂ ಅಲ್ಲ.

ಹಾಗಾಗಿ “ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆದುಕೊಳ್ಳಿರೋ” ಎಂಬ ದಾಸವಾಣಿಯಂತೆ ನಾವು ನಮ್ಮ ನಮ್ಮಗಳ ಕ್ಷೇತ್ರಗಳಲ್ಲಿ ನಮ್ಮ ಆಸಕ್ತಿಯ ಹಾಗೂ ಅರಿವಿನ ಕ್ಷೇತ್ರದಲ್ಲಿ ನಮಗೂ ಸಹ ಒತ್ತಡವಾಗದಂತೆ ನಮ್ಮ ನಮ್ಮ ಕೈಲಾದ ನಿಸ್ವಾರ್ಥವಾದ, ಅಳಿಲುಸೇವೆಯನ್ನು ಮಾಡುತ್ತಾ ಸಾಗಿದರೆ ಅದು ಮಾನವ ಜನಾಂಗಕ್ಕೆ ಭವಿಷ್ಯದಲ್ಲಿ ಬಹುದೊಡ್ಡ ಕೊಡುಗೆಯಾಗಬಲ್ಲದು. ನಮ್ಮನ್ನೂ ಸಹ ಇತಿಹಾಸದ ಯಾವುದೋ ಒಂದು ಹಂತದಲ್ಲಿ ಯಾರೋ ಒಬ್ಬರು ನೆನಪಿಸಿಕೊಳ್ಳುವಂತಾಗಬಹುದು
ಸುತ್ತಮುತ್ತಲಿನವರಿಗೆ ಕೈಲಾದ ಸೇವೆಯನ್ನ ಮಾಡೋಣ ಆ ಸಹಾಯಕ್ಕೆ ನಿರೀಕ್ಷೆ ಮಾಡಬೇಡಿ
ಅದು ಸಹಾಯ ಅನಿಸಿಕೊಳ್ಳೋದಿಲ್ಲ ಬದಲಿಗೆ ದುಡ್ಡು ಕೊಟ್ಟು ಕೊಂಡುಕಂಡ ಹಾಗೆ ಸ್ವಾರ್ಥಿಗಳಾಗಬಾರದು ಬಡವರ ದೀನ ದಲಿತರ ಬಗ್ಗೆ ಕಾಳಜಿ ಇರಲಿ ತುಂಬಿದ ಕೊಡ ತುಳುಕುವುದಿಲ್ಲ ಪ್ರತಿಯೊಬ್ಬರಿಗೂ ಮನುಷ್ಯತ್ವ ಅನ್ನೋದು ಇರುತ್ತದೆ ಯಾರು ಕೂಡ ಉಪಯೋಗವಿಲ್ಲದೆ ಏನನ್ನು ಮಾಡಲಾರ
ಅಂಥವರು ಏನಾದರೂ ಇದ್ದರೆ ದೇವರು ಸಮಾನರು
ಈ ಸಮಾಜಕ್ಕೆ ಹಲವಾರು ಮಹನೀಯರು ಸಾಧನೆ ಮಾಡಿ ಮನದಲ್ಲಿ ಪುಸ್ತಕದ ಪುಟದಲ್ಲಿ ಸೇರಿದ್ದಾರೆ

ನವೀನ ಹೆಚ್ ಎ
ಹನುಮನಹಳ್ಳಿ ಅಂಕಣಕಾರ ಲೇಖಕರು