ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಡಿಯೋಗಳಿಂದಲೇ ಸಾಕಷ್ಟು ಖ್ಯಾತಿ, ಕುಖ್ಯಾತಿ ಎಲ್ಲವನ್ನೂ ಗಳಿಸಿಕೊಂಡಿರುವ ಸೋನುಗೌಡ ಇತ್ತೀಚಿಗೆ ಜೈಲು ಸೇರಿದ್ದರು. ಕಾನೂನು ಬಾಹಿರವಾಗಿ ಮಗವನ್ನು ದತ್ತು ಪಡೆದ ಆರೋಪದಲ್ಲಿ ಸೋನು ಶ್ರೀನಿವಾಸ್ ಗೌಡಳನ್ನು ಬ್ಯಾಡರಹಳ್ಳಿ ಪೊಲೀಸ್ರು ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದರು.
ಜಾಮೀನು ವಿಚಾರಣೆ ನಡೆಸಿದ PDJ ಕೋರ್ಟ್ (Principal District And Sessions Judge) ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲ ಪ್ರಕಾಶ್, ಜಾಮೀನು ನೀಡುವಂತೆ ವಾದ ಮಂಡಿಸಿದ್ದರು. ಸರ್ಕಾರದ ಪರ ಹಾಗು ಸೋನುಗೌಡ ಪರ ವಾದ ಆಲಿಸಿದ ಕೋರ್ಟ್ ಜಾಮೀನು ನೀಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಬ್ಯಾಡರಹಳ್ಳಿ ಪೊಲೀಸರಿಗೆ ದತ್ತು ಅಕ್ರಮದ ಬಗ್ಗೆ ದೂರು ನೀಡಿದ್ರು. ಆ ದೂರು ಆಧರಿಸಿ ಮಾರ್ಚ್ 22 ರಂದು ಸೋನು ಶ್ರೀನಿವಾಸ್ ಗೌಡಳನ್ನು ಬಂಧನ ಮಾಡಲಾಗಿತ್ತು. ಇದೀಗ ಇಬ್ಬರು ಶ್ಯೂರಿಟಿ ಹಾಗು 1 ಲಕ್ಷ ಬಾಂಡ್ ಜೊತೆಗೆ ಕೆಲವು ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಕೋರ್ಟ್ ಪ್ರಕ್ರಿಯೆ ಮುಗಿಯುವುದು ತಡವಾದ ಕಾರಣ ಜೈಲಿನಿಂದ ಬಿಡುಗಡೆ ಆಗಿಲ್ಲ. ಶುಕ್ರವಾರ ಬಿಡುಗಡೆ ಆಗುವ ಸಾಧ್ಯತೆಯಿದೆ.
![](https://pratidhvani.com/wp-content/uploads/2024/04/sonu-dp-1707039959-1024x576.jpg)
ಸೋನುಗೌಡ ದತ್ತು ಪಡೆದಿಲ್ಲ. ಆದರೆ ಉತ್ತರ ಕರ್ನಾಟಕ ಮೂಲದ ಹೆಣ್ಣು ಮಗುವನ್ನು ಪೋಷಕರು ಹಾಗು ಆ ಬಾಲಕಿಯ ಆಸಕ್ತಿಯಂತೆ ಮನೆಯಲ್ಲಿ ಸಾಕಿಕೊಂಡಿದ್ದರು. ಆದರೆ ದತ್ತು ಪಡೆಯುವ ಪ್ರಕ್ರಿಯೆ ಮಾಡ್ತೇನೆ ಎಂದು ಹೇಳಬೇಕಿದ್ದ ಸೋನುಗೌಡ, ಮಾತಿನಲ್ಲಿ ಎಡವಿದ್ದು ಇಷ್ಟಕ್ಕೆಲ್ಲಾ ಕಾರಣವಾಗಿದೆ. ಇನ್ನು ದತ್ತು ಪಡೆದ ಮಗುವಿನ ಬಗ್ಗೆ ಬಹಿರಂಗವಾಗಿ ಮಾತನಾಡುವ ಬಗ್ಗೆಯೂ ಕೆಲವು ಷರತ್ತುಗಳಿದ್ದು, ಅವುಗಳ ಉಲ್ಲಂಘನೆ ಆಗಿದೆ ಎನ್ನಲಾಗ್ತಿದೆ. ದತ್ತು ಸ್ವೀಕಾರ ಮಾಡದೆ ಬೇರೆಯವರ ಮಕ್ಕಳನ್ನು ಓದಿಸುವುದು ತಪ್ಪಲ್ಲ.. ಚೆನ್ನಾಗಿ ಯೋಗಕ್ಷೇಮ ನೋಡಿಕೊಳ್ಳುವುದು ತಪ್ಪಲ್ಲ. ಆದರೆ ಮಗುವಿನ ಮೇಲಿನ ಆಸೆಯಿಂದ ನಾನೇ ದತ್ತು ಪಡೆದುಕೊಳ್ಳಬೇಕು, ದತ್ತು ಪಡೆದುಕೊಳ್ತೇನೆ ಎಂದಿದ್ದು, ವಿಡಿಯೋ ಮಾಡಿದ್ದು ತಪ್ಪಾಗಿದೆ. ನಮ್ಮ ಪಕ್ಕದ ಮನೆ ಹುಡುಗಿ ಎಂದು ವಿಡಿಯೋ ಮಾಡಿದ್ದರೂ ತಪ್ಪಲ್ಲ. ಆದರೆ ಕೆಲಸ ಮಾಡಿಸಿಕೊಳ್ತಿದ್ದಾರೆ. ಬಾಲಕಾರ್ಮಿಕಳ ರೀತಿ ಬಳಸ್ತಿದ್ದಾರೆ ಎಂದರೆ ತಪ್ಪಾಗುತ್ತದೆ.
![](https://pratidhvani.com/wp-content/uploads/2024/04/Sonu-Srinivas-Gowda-Says-Bigg-Boss-was-cheating-Girls.jpg-1024x576.webp)
ಕೃಷ್ಣಮಣಿ