• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಕಮಲಾಕರ ಭಟ್‌ ಜೊತೆಗೆ ಬಿಜೆಪಿ ಶಾಸಕ : BK ಹರಿಪ್ರಸಾದ್ ಸ್ಫೋಟಕ ಆರೋಪಗಳೇನು..?

ಸುರೇಶ್​ ಕುಮಾರ್ ಅವರೇ, ಇನ್ನಾದರೂ ಸಜ್ಜನ ಶಾಸಕ ಎಂಬ ಸ್ವಯಂ ಭ್ರಮೆಗಳಿಂದ ಹೊರ ಬಂದು ಸಂವಿಧಾನಬದ್ಧ, ವೈಚಾರಿಕವಾದ ಮಾನವೀಯ ಬದುಕು ಸಾಗಿಸಿ ಎಂದ ಹರಿಪ್ರಸಾದ್..

ಪ್ರತಿಧ್ವನಿ by ಪ್ರತಿಧ್ವನಿ
February 4, 2026
in ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಕಮಲಾಕರ ಭಟ್‌ ಜೊತೆಗೆ ಬಿಜೆಪಿ ಶಾಸಕ : BK ಹರಿಪ್ರಸಾದ್ ಸ್ಫೋಟಕ ಆರೋಪಗಳೇನು..?
519
VIEWS
Share on WhatsAppShare on FacebookShare on Telegram
ಬೆಂಗಳೂರು : ಕೊಲೆ ಆರೋಪದಲ್ಲಿ ಅರೆಸ್ಟ್‌ ಆಗಿರುವ ಜ್ಯೋತಿಷಿ ಕಮಲಾಕರ ಭಟ್‌ ಹಾಗೂ ಮಾಜಿ ಸಚಿವ ಎಸ್.ಸುರೇಶ್‌ ಕುಮಾರ್‌ ಸಂಬಂಧಕ್ಕೆ ವಿಧಾನ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌
ನಾನು ಮತ್ತು ಸುರೇಶ್​ ಕುಮಾರ್ ಒಂದೇ ಕಾಲೇಜಲ್ಲಿ ಕಲಿತವರು ಎಂಬುದನ್ನು ಸುರೇಶ್ ಕುಮಾರ್ ಅವರೇ ನೆನಪಿಸಿದ್ದಾರೆ. ಎಂಇಎಸ್​ ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಲ್ಲಿ ಕಲಿತ ನಾನು ಗಾಂಧಿ-ಅಂಬೇಡ್ಕರ್-ನೆಹರೂ ಅವರ ಅನುಯಾಯಿ ಆದ್ರೆ, ಸುರೇಶ್​ ಕುಮಾರ್ ಅವರು ಗಾಂಧಿ ಕೊಲೆಗಾರರ ಅನುಯಾಯಿ ಆದ್ರು. ಈಗಲಾದರೂ ಬದಲಾಗಿದ್ದಾರಾ ಎಂದರೆ, ಇನ್ನೂ ಕೊಲೆಗಾರರ ಜೊತೆಯೇ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
https://youtu.be/S3ryrFW3GIM?si=1Ns_coJKC_yG9RuF
‘ಜನಪ್ರತಿನಿಧಿಗಳ ಜೊತೆ ನಿತ್ಯ ನೂರಾರು ಜನ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರೆಲ್ಲರೂ ನೈತಿಕ ಹೊಣೆ ಹೊತ್ತುಕೊಳ್ಳೋದಿಕ್ಕೆ ಆಗುತ್ತಾ?’ ಎಂದು ಮಾಜಿ ಕಾನೂನು ಸಚಿವ ಸುರೇಶ್​ಕುಮಾರ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಸುರೇಶ್​ಕುಮಾರ್ ಅವರು ಇಂತಹ ನುಣುಚಿಕೊಳ್ಳುವಿಕೆಯ ಜಾಣತನ ತೋರಬಾರದು. ಕೊಲೆಗಾರ ಜ್ಯೋತಿಷಿ ಕಮಲಾಕರ ಭಟ್ಟನು ಸುರೇಶ್​ ಕುಮಾರ್ ಜೊತೆ ಫೋಟೋ ತೆಗೆಸಿಕೊಂಡಿಲ್ಲ. ಸುರೇಶ್​ ಕುಮಾರ್ ಅವರೇ ಕಾರಿನಿಂದ ಇಳಿದು ಕಮಲಾಕರ ಭಟ್ ಎಂಬ ಮಹಾನುಭಾವನ ಕಾರಿನ ಬಳಿ ಹೋಗಿ ತನ್ನ ಸಹಾಯಕನ ಮೂಲಕ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಸುರೇಶ್​ ಕುಮಾರ್ ಅವರು ಫೋಟೋ ತೆಗೆಸಿಕೊಳ್ಳುವಾಗ ಸ್ವಯಂಘೋಷಿತ ಮಹಾನುಭಾವ ಜೋತಿಷಿ ಸೌಜನ್ಯಕ್ಕಾದರೂ ಕಾರಿನಿಂದ ಇಳಿಯುವುದಿಲ್ಲ. ಆದರೂ ಯಾವುದೇ ಮುಜುಗರ ಪಡದ ಸುರೇಶ್​ ಕುಮಾರ್ ಅವರು ತಮ್ಮ ಎಲ್ಲಾ ಆತ್ಮಗೌರವವನ್ನು ಬದಿಗಿಟ್ಟು ಕಮಲಾಕರ ಭಟ್​ ಎಂಬ ಜೋತಿಷಿಯೊಂದಿಗೆ ಫೋಟೋ ತೆಗೆದುಕೊಂಡು ಅವರ ಸಾಮಾಜಿಕ ಜಾಲತಾಣದಲ್ಲಿ ಜೋತಿಷಿಯನ್ನೂ, ಆತನ ಕೆಲಸವನ್ನೂ ಹೊಗಳಿ ಫೋಸ್ಟ್​ ಮಾಡಿದ್ದಾರೆ. ಮಾಜಿ ಸಚಿವರಾಗಿರುವ ಸುರೇಶ್​ ಕುಮಾರ್ ಅವರು ನೀಡಿದ ಪ್ರಚಾರವನ್ನೇ ಬಳಸಿಕೊಂಡು ಆ ಜೋತಿಷಿ ಎಷ್ಟು ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿರಬಹುದು ? ಎಷ್ಟು ಮನೆಹಾಳು ಮಾಡಿರಬಹುದು ಎಂಬುದು ಚರ್ಚೆಯ ವಿಷಯವಲ್ಲವೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಸಿಗರೇಟ್‌ ತಂದಿಟ್ಟ ಸಂಕಷ್ಟ : ಚಟಕ್ಕಾಗಿ ಅಂಗಡಿ ಮಾಲೀಕನ ಚಟ್ಟ ಕಟ್ಟಿದ ಕಿರಾತಕರು ಅಂದರ್‌..!
ಸುರೇಶ್​ ಕುಮಾರ್ ಅವರ ಕೊಳೆತ ಮನಸ್ಥಿತಿ ಹೇಗಿದೆಯೆಂದರೆ, ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ನನ್ನ ಅಂಗಿಯನ್ನು ಹರಿದಾಗ ನಿರಂತರ ಮೂರು ದಿನ ಪುಂಡು ಪೋಕರಿಗಳ ರೀತಿಯಲ್ಲಿ ಸುರೇಶ್​ ಕುಮಾರ್ ಅವರು ನನ್ನನ್ನು ಟ್ರೋಲ್ ಮಾಡಿದ್ದರು. ನನ್ನ ಹೆಸರಿನ ಮೇಲೆಯೇ ಅವರು ವ್ಯಂಗ್ಯಗಳನ್ನು ಮಾಡಿದ್ದರು. ನನ್ನ ವಿರುದ್ಧ ಮಾನಹಾನಿಕರವಾಗಿ ಬರೆದ ಟ್ರೋಲರ್​​ಗಳ ಎಲ್ಲಾ ಪೋಸ್ಟ್​ ಗಳನ್ನು ಶೇರ್ ಮಾಡಿ ಬೆಂಬಲಿಸಿದ್ದ ಕೊಳೆತ ಮನಸ್ಥಿತಿಯ ಸುರೇಶ್​ ಕುಮಾರ್ ಅವರಿಗೆ ಇದೀಗ ಕೊಲೆಗಾರನ ಸಖ್ಯದ ಬಗ್ಗೆ ಪ್ರಶ್ನೆ ಕೇಳಿದಾಗ ದಿಗ್ಭ್ರಾಂತರಾಗಿ ಮಾತನಾಡುತ್ತಿದ್ದಾರೆ ಎಂದು ಜರಿದಿದ್ದಾರೆ.
ನೀವು ಜನಪ್ರತಿನಿದಿಯಾದ ಮೇಲೆ ನೀವು ಸಂವಿಧಾನವನ್ನು ಪಾಲಿಸಲೇಬೇಕು ಮಿಸ್ಟರ್ ಸುರೇಶ್​ ಕುಮಾರ್. ಜೋತಿಷಿ ನಿಮ್ಮ ಬಳಿ ಬಂದು ಫೋಟೋ ತೆಗೆದುಕೊಂಡರೆ ಅದು ನಿಮ್ಮ ತಪ್ಪಲ್ಲ. ನೀವೇ ಹೋಗಿ ಜೋತಿಷಿ ಬಳಿ ಫೋಟೋ ತೆಗೆದುಕೊಂಡರೂ ಅದು ನಿಮ್ಮ ವೈಯಕ್ತಿಕ. ಆದರೇ, ನೀವೇ ಹೋಗಿ ಜೋತಿಷಿ ಬಳಿ ಫೋಟೋ ತೆಗೆದುಕೊಂಡು ಆ ಜ್ಯೋತಿಷಿಯನ್ನು ಅಮಾಯಕ ಜನರಿಗೆ ಜಾಹೀರಾತು/ಪ್ರಮೋಟ್​ ಮಾಡಿದರೆ ಅದು ಸಂವಿಧಾನದ ಆರ್ಟಿಕಲ್ 51A(h) ಉಲ್ಲಂಘನೆಯಾಗುತ್ತದೆ. ಹಾಗಾಗಿ ಆ ಜೋತಿಷಿ ಇನ್ನೆಷ್ಟು ಹುಡುಗಿಯರನ್ನು ಲೈಂಗಿಕವಾಗಿ ಬಳಸಿದ್ದಾನೆ ? ಇನ್ನೆಷ್ಟು ಕೊಲೆಗಳಿಗೆ ಕಾರಣವಾಗಿದ್ದಾನೆ ? ಇನ್ನೆಷ್ಟು ಮನೆ ಹಾಳು ಮಾಡಿದ್ದಾನೆ ಎಂದು ಪರಿಶೀಲಿಸಿದರೆ ಅದರಲ್ಲಿ ಸುರೇಶ್​ ಕುಮಾರ್ ಭಾಗಿಧಾರಿಕೆ ಅರಿವಾಗುತ್ತದೆ ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಸುರೇಶ್​ ಕುಮಾರ್ ಅವರು ‘ಅಪರಾಧವನ್ನು ಅಪರಾಧವಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ’ ಎಂದು ನನಗೆ ಉಪದೇಶ ಮಾಡಿದ್ದಾರೆ. ಇದು ಸುರೇಶ್​ ಕುಮಾರ್ ಅವರ ನೈತಿಕ ಅದಃಪತನವನ್ನು ಸೂಚಿಸುತ್ತದೆ. ಕರಾವಳಿ, ಉತ್ತರ ಕನ್ನಡ, ಮಲೆನಾಡಲ್ಲಿ ಹೆಣ ಬಿದ್ದ ತಕ್ಷಣ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ನೀವುಗಳು ನಮಗೆ ಉಪದೇಶ ಮಾಡುವುದು ಬೇಕಾಗಿಲ್ಲ. ಕಮಲಾಕರ ಭಟ್​ ಬದಲು ಬೇರೆ ಧರ್ಮದ ವ್ಯಕ್ತಿ ಆರೋಪಿಯಾಗಿದ್ದರೆ ಸುರೇಶ್ ಕುಮಾರ್ ಮತ್ತವರ ಪಟಾಲಂ ‘ಅಪರಾಧವನ್ನು ಅಪರಾಧವನ್ನಾಗಿ ನೋಡಿ’ಕೊಳ್ಳುತ್ತಿತ್ತೇ ? ಕೋಮುಗಲಭೆ, ಕೋಮು ಹಿಂಸಾಚಾರದಲ್ಲಿ ಹೆಣ ಬಿದ್ದಾಕ್ಷಣ ರಣಹದ್ದುಗಳಂತಾಗುವ ಸುರೇಶ್ ಕುಮಾರ್ ಅಂತವರ ಉಪದೇಶ ನಮಗೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಕ್ರಿಮಿನಲ್​ ಗಳ ಜೊತೆ ಅವಿನಾಭಾವ ಸಂಬಂಧ ಇದೆ ಎಂದು ಸಾರಾಸಗಾಟಾಗಿ ಹೇಳಿದ್ದರ ಬಗ್ಗೆ ಸುರೇಶ್​ ಕುಮಾರ್ ಆಕ್ಷೇಪಿಸಿದ್ದಾರೆ. ಸಿದ್ದಾಪುರದ ಕೊಲೆಗಡುಕ ಕಮಲಾಕರ ಗುರೂಜಿಯಿಂದ ಹಿಡಿದು, ಅಂತರರಾಷ್ಟ್ರೀಯ ಮಕ್ಕಳ ಲೈಂಗಿಕ ಪೀಡಕ ಎಪ್‌ಸ್ಟೀನ್‌ ತನಕ ತಮ್ಮ ಪಕ್ಷದ ಕೈವಾಡ ಇಲ್ಲವೇ ? ಆಸಾರಾಂ ಬಾಪೂ, ಡೇರೇ ಸಚ್ಚಾ ಸೌದಾ ಗುರೂಜಿಯಿಂದ ಹಿಡಿದು ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳವರೆಗೆ ಕ್ರಿಮಿನಲ್​ಗಳ ಜೊತೆ ಗುರುತಿಸಿಕೊಂಡಿರುವವರು ಯಾರು ? ರಾಜ್ಯದಲ್ಲೇ ಬಿಜೆಪಿಯ ಎಷ್ಟು ನಾಯಕರ ಮೇಲೆ ಲೈಂಗಿಕ ಹಗರಣ, ಪೋಕ್ಸೋ ಪ್ರಕರಣಗಳಿವೆ ಎಂಬ ಬಗ್ಗೆ ಸುರೇಶ್​ಕುಮಾರ್ ಅವರು ಬಹಿರಂಗ ಚರ್ಚೆಗೆ ಸಿದ್ದರಿದ್ದಾರೆಯೇ ? ಎಂದು ಹರಿಪ್ರಸಾದ್ ಸವಾಲು ಹಾಕಿದ್ದಾರೆ.‌
https://youtu.be/PEo85t-0aEQ?si=ItUhju1cNT87dAsD
ಸುರೇಶ್​ ಕುಮಾರ್ ಅವರು ಜೋತಿಷ್ಯವನ್ನು ನಂಬುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಅವರು ನಂಬದೇ ಇರುವುದನ್ನು ಜನರಿಗೆ ನಂಬಿಸುವುದು ನೈತಿಕವಾಗಿ ಅಪರಾಧವಲ್ಲವೇ ? ನೀವು ಮತ್ತು ನಿಮ್ಮ ಕುಟುಂಬ ಎಲ್ಲಾ ರೀತಿಯಲ್ಲೂ ವಿಜ್ಞಾನದ ಲಾಭ ಪಡೆದು, ಅಮಾಯಕ ಬಡ ಜನರನ್ನು ಜೋತಿಷಿಗಳತ್ತಾ/ಸನಾತನವಾದದತ್ತಾ ಕಳುಹಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದರ ಬಗ್ಗೆಯೇ ನನಗೆ ಮೂಲ ತಕರಾರು ಇರುವುದು. ಮಾಜಿ ಕಾನೂನು ಸಚಿವರಿಗೆ ಈ ಸಂದರ್ಭದಲ್ಲಿ ನಾನು Drugs & Magic Remedies (Objectionable Advertisements) Act, 1954 ಅನ್ನು ನೆನಪಿಸಲು ಬಯಸುತ್ತೇನೆ. ಜೋತಿಷ್ಯವನ್ನು ಜಾಹೀರಾತು ಮಾಡುವುದು ಈ ಕಾನೂನಿನ ಪ್ರಕಾರವೂ ಅಪರಾಧವಾಗುತ್ತದೆ ಎಂದು ಕುಟುಕಿದ್ದಾರೆ.
ನೀವು ಎಂಇಎಸ್​ ನಂತಹ ಉತ್ತಮವಾದ ಕಾಲೇಜಿನಲ್ಲಿ ನನ್ನೊಂದಿಗೆ ಕಲಿತಿದ್ದರೂ ತಾವು ಸಂವಿಧಾನ ವಿರೋಧಿ, ಕೊಲೆಗಡುಕರ ಜೊತೆ ಸೇರಿದ್ದೀರಲ್ವಾ ಎಂಬ ಬೇಸರ ನನಗೂ ಇದೆ. ಕಾಲೇಜು ದಿನಗಳ ಕತೆಗಳನ್ನು ಹೇಳಿ ಸಾರ್ವಜನಿಕ ಬದುಕಿನಲ್ಲಿರುವ ತಮ್ಮನ್ನು ತಮ್ಮ ಈ ವಯಸ್ಸಿನಲ್ಲಿ ಇನ್ನಷ್ಟೂ ಮುಜಗರಕ್ಕೀಡು ಮಾಡುವ ಉದ್ದೇಶ ನನಗಿಲ್ಲ. ಸುರೇಶ್​ ಕುಮಾರ್ ಅವರೇ, ಇನ್ನಾದರೂ ಸಜ್ಜನ ಶಾಸಕ ಎಂಬ ಸ್ವಯಂ ಭ್ರಮೆಗಳಿಂದ ಹೊರ ಬಂದು ಸಂವಿಧಾನಬದ್ಧ, ವೈಚಾರಿಕವಾದ ಮಾನವೀಯ ಬದುಕು ಸಾಗಿಸಿ ಎಂದು ಹರಿಪ್ರಸಾದ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಸುರೇಶ್‌ ಕುಮಾರ್ ಗುಡುಗಿದ್ದಾರೆ.
Tags: advertisementAstrologer Kamalakar BhatBJPBK HariprasadCommunal ViolencecongressConstituency of indiaCostal areacrimeFacebook PostIdeology FightJeffrey Epsteinkannada newsKarnataka PoliticsS SureshkumarSexual HarrasmentSocial Media WarUtttara kannada
Previous Post

ಸಿಗರೇಟ್‌ ತಂದಿಟ್ಟ ಸಂಕಷ್ಟ : ಚಟಕ್ಕಾಗಿ ಅಂಗಡಿ ಮಾಲೀಕನ ಚಟ್ಟ ಕಟ್ಟಿದ್ದ ಕಿರಾತಕರು ಅಂದರ್‌..!

Next Post

ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ರಾಜಕೀಯ ತಿರುವು: ಬಿಜೆಪಿ-ಕಾಂಗ್ರೆಸ್ ಮಾತಿನ ಸಮರ

Next Post
ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ರಾಜಕೀಯ ತಿರುವು: ಬಿಜೆಪಿ-ಕಾಂಗ್ರೆಸ್ ಮಾತಿನ ಸಮರ

ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ರಾಜಕೀಯ ತಿರುವು: ಬಿಜೆಪಿ-ಕಾಂಗ್ರೆಸ್ ಮಾತಿನ ಸಮರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

error: Content is protected !!