ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy case) ನಟ ದರ್ಶನ್ (Actor darshan) ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದು ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ. ಆದ್ರೆ ಈ ಬೇಸರದ ನಡುವೆ ಡಿ ಫ್ಯಾನ್ಸ್ ಗೆ ಕೊಂಚ ಸಂತಸ ಸುವಂತೆ ಡೆವಿಲ್ ಚಿತ್ರತಂಡ (Devil movie) ಹಾಡೊಂದನ್ನು ರಿಲೀಸ್ ಮಾಡಿದೆ.

ಹೌದು ಬಹು ನಿರೀಕ್ಷೆಯ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದ್ದು, ದಾಸನ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸ್ತಿದೆ.. ‘ಇದ್ರೆ ನೆಮ್ಮಿಯಾಗ್ ಇರ್ಬೇಕು’ ಹಾಡು ಸ್ವಾತಂತ್ರ್ಯ ದಿನಾಚರಣೆಯಂದೇ ಬಿಡುಗಡೆ ಆಗೇಕಿತ್ತು.ಆದ್ರೆ ಕಾರಣಾಂತರಗಳಿಂದ ಹಾಡು ಬಿಡುಗಡೆ ಆಗಿರಲಿಲ್ಲ.

ಇನ್ನೇನು ಹಾಡು ಬಿಡುಗಡೆ ಎನ್ನುವಷ್ಟರಲ್ಲಿ ಜಾಮೀನು ರದ್ದಾದ ಹಿನ್ನಲೆ ಮತ್ತೆ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. ಹೀಗಾಗಿ ಸಾಂಗ್ ರಿಲೀಸ್ ಮುಂದೂಡಲಾಗಿತ್ತು. ಹೀಗಾಗಿ ಇಂದು ಮೊದಲ ಹಾಡು ಬಿಡುಗಡೆ ಆಗಿದೆ. ಇಂದಿನಿಂದ ಅಧಿಕೃತವಾಗಿ ದಿ ಡೆವಿಲ್ ತಂಡ ಪ್ರಚಾರ ಕಾರ್ಯ ಆರಂಭಿಸಲಿದ್ದು ಸಿನಿಮಾ ರಿಲೀಸ್ ಗೆ ಬೇಕಾದ ಕೆಲಸಗಳು ಆರಂಭಗೊಳ್ಳಲಿವೆ.

ಇದೇ ವೇಳೆ ದರ್ಶನ್ ಜೈಲಿನಲ್ಲಿರುವ ಕಾರಣ, ಸಿನಿಮಾ ರೀಲೇಸ್ ಆಗುತ್ತೋ.. ಇಲ್ಲವೋ ಎಂಬ ಗೊಂದಲದಲ್ಲಿದ್ದ ಅಭಿಮಾನಿಗನಿಗಳಿಗೆ ಕೂಡ ಡೆವಿಲ್ ಟೀಮ್ ಭರ್ಕರಿ ಗುಡ್ ನ್ಯೂಸ್ ಕೊಟ್ಟಿದ್ದು, ದಿ ಡೆವಿಲ್ ಸಿನಿಮಾದ ರೀಲೇಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದೆ. 2025 ರ ಡಿಸೆಂಬರ್ 12 ರಂದು ಡೆವಿಲ್ ತೆರೆಕಾಣಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.











