ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪನಿಯೊಂದು ಸ್ಮೂಚ್ ಕ್ಯಾಬ್ಗಳ ಸೇವೆ ಆರಂಭಿಸಿದೆ ಅನ್ನೋ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಲ್ಚೆಲ್ ಸೃಷ್ಟಿಸಿದೆ. ಸ್ಮೂಚ್ ಕ್ಯಾಬ್ ಸೇವೆ ಎಂದರೆ ಗಂಡ-ಹೆಂಡತಿ ಅಥವಾ ಗೆಳಯ -ಗೆಳತಿ, ಪ್ರೇಯಸಿ – ಪ್ರೇಮಿ ಇಬ್ಬರೂ ಕುಳಿತು ತಮ್ಮದೇ ಆದ ಖಾಸಗಿ ತನವನ್ನು ಪಡೆಯುತ್ತಾ ಸಂಚಾರ ಮಾಡಬಹುದಾಗಿದೆ. ಓಲಾ, ಉಬರ್, ರಾಪಿಡೋ ರೀತಿಯ ಕ್ಯಾಬ್ಗಳಂತೆಯೇ ನೀವು ತಲುಪಬೇಕಾದ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. ಈ ಸಮಯದಲ್ಲಿ ನೀವು ರೊಮ್ಯಾಂಟಿಕ್ ಸಮಯ ಕಳೆಯಲು ಅವಕಾಶ ಮಾಡಿಕೊಡುತ್ತಾರೆ ಎನ್ನಲಾಗಿದೆ.

ಈ ಬಗ್ಗೆ ಅನುಷ್ಕಾ ಎಂಬುವರು Xನಲ್ಲಿ ಪೋಸ್ಟ್ ಮಾಡಿದ್ದು, ನಾವು ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್ಗಳ ಸೇವೆಯನ್ನು ನೋಡಿದೆ. ಕ್ಯಾಬ್ ಇನ್ಸೈಡ್ ಏನಾಯ್ತು ಎಂದು ನಾನು ಹೇಳಲಾರೆ, ಆದರೆ ಈ ಖಾಸಗಿ ಸೇವೆಗೆ ನಾನು 10ಕ್ಕೆ 10ರಷ್ಟು ಅಂಕಗಳನ್ನು ನೀಡುತ್ತೇನೆ ಎಂದಿದ್ದಾರೆ. ಈ ಪೋಸ್ಟ್ಗೆ ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದು, ಸ್ಮೂಚ್ ಕ್ಯಾಬ್ ಸೇವೆ ಬಗ್ಗೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಲಿಂಕ್ಡಿನ್ ಬಳಕೆದಾರರಾದ ಆರತಿ ಸೇಥ್ ಪೋಸ್ಟ್ ಮಾಡಿದ್ದು, ಬೆಂಗಳೂರಿನಲ್ಲಿ ಉತ್ತಮ ರಸ್ತೆಗಳ ಅವಶ್ಯಕತೆ ಇದೆ. ಆದರೆ ಬೆಂಗಳೂರು ಉತ್ತಮ ರೊಮ್ಯಾಂಟಿಕ್ ಆಯ್ಕೆ ಮಾಡಿಕೊಂಡಿದೆ ಎಂದಿದ್ದಾರೆ. ದೆಹಲಿಯಲ್ಲಿ ಹಗ್ಸ್ ಆಟೋ, ಮುಂಬೈನಲ್ಲಿ ಕಡ್ಲ್ ರಿಕ್ಷ, ಇದು ಪ್ರಾಂಕ್ ಸುದ್ದಿಯಾಗಿದೆ. ಈ ಸುದ್ದಿ ಸತ್ಯವಾಗಿದ್ದರೆ ಹೇಗೆ..? ಎಂದಿದ್ದಾರೆ.

ಇನ್ನೂ ಸಾಕಷ್ಟು ಜನರು ಈ ರೀತಿಯ ಐಡಿಯಾ ನಮಗೆ ಯಾಕೆ ಬರಲ್ಲ..? ಅಂತಾ ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದಾರೆ. ಇನ್ನು ಕೆಲವರು ಬೆಂಗಳೂರು ಟ್ರಾಫಿಕ್ ಬಗ್ಗೆ ವ್ಯಂಗ್ಯ ಮಾಡಿದ್ದು, ಇಷ್ಟು ದಿನ ಟ್ರಾಫಿಕ್ ಅಂತಾ ಬೇಸರ ಆಗ್ತಿತ್ತು. ಇನ್ಮುಂದೆ ಟ್ರಾಫಿಕ್ನಲ್ಲಿ ಸಿಕ್ಕಿಕೊಂಡಾಗ ಒಳಗಡೆ ರೊಮ್ಯಾನ್ಸ್ನಲ್ಲಿ ಸಿಕ್ಕಿಕೊಳ್ಳಬಹುದು ಎಂದಿದ್ದಾರೆ. ಇದು ರಸ್ತೆ ಸುರಕ್ಷತೆಗೆ ಅಡ್ಡಿಯಾಗುತ್ತದೆ ಎಂದು ಕೆಲವರು ಹೇಳಿದ್ರೆ, ಹಿಂಬದಿ ವೀವ್ ಬ್ಲಾಕ್ ಮಾಡಲಾಗಿದೆ ಎಂದು ಕೆಲವು ಮಂದಿ ಕಿಚಾಯಿಸಿದ್ದಾರೆ. ಇನ್ನೂ ಕೆಲವರು ಈ ಸರ್ವೀಸ್ ಎಲ್ಲೆಲ್ಲಿ ಲಭ್ಯವಿದೆ ಅಂತ ಕೇಳಿರುವುದು ವಿಶೇಷ.