ಮೈಸೂರು ವಿಶ್ವವಿದ್ಯಾನಿಲಯದ (University of Mysore) 104 ನೇ ಘಟಿಕೋತ್ಸವದಲ್ಲಿ (Convocation) ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಕ್ರಿಕೇಟಿಗ ಜಾವಗಲ್ ಶ್ರೀನಾಥ್ (Jawagal Srinath), ಎಂ.ಆರ್.ಸೀತಾರಾ (MR Seetharam) ಹಾಗೂ ಭಾಷ್ಯಂ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ವೇದ ಕಾಲದಿಂದ ಇಂದಿನವರೆಗೂ ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲಿ ಅನುಪಮವಾದ ಜ್ಞಾನವನ್ನು ಗಳಿಸಿದ್ದಾರೆ. ಖಗೋಳ ವಿಜ್ಞಾನದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಇಡೀ ಜಗತ್ತಿಗೆ ಮಹತ್ವದ್ದಾಗಿದೆ. ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ “ವಸುದೇವಂ ಕುಟುಂಬಕA” ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ ಮತ್ತು “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಎಂದರು.
ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ ಅಂತಹ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ವೇದ-ವೇದಾಂಗದ ಹೊರತಾಗಿ, ತಕ್ಷಶಿಲಾ ಮತ್ತು ನಳಂದ ವಿಶ್ವವಿದ್ಯಾಲಯಗಳು ವಿಜ್ಞಾನ, ತಂತ್ರಜ್ಞಾನ, ಗಣಿತ, ಖಗೋಳಶಾಸ್ತ್ರ, ರಾಜ್ಯಶಾಸ್ತ್ರ, ನೀತಿಶಾಸ್ತ್ರ, ಅರ್ಥಶಾಸ್ತ್ರ, ವ್ಯಾಕರಣ ಇತ್ಯಾದಿ ಅನೇಕ ವಿಷಯಗಳಿಗೆ ಪ್ರಸಿದ್ಧವಾಗಿವೆ. ಈ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಪ್ರಪಂಚದಾದ್ಯAತದ ವಿದ್ಯಾರ್ಥಿಗಳು ಬಂದಿದ್ದಾರೆ. ಈ ವಿಶ್ವವಿದ್ಯಾಲಯಗಳಲ್ಲಿ ಪ್ರಸಿದ್ಧ ಭಾರತೀಯ ವಿದ್ವಾಂಸರು – ಚರಕ್, ಸುಶ್ರುತ, ಆರ್ಯಭಟ್ಟ, ಚಾಣಕ್ಯ ಮುಂತಾದವರು ಜ್ಞಾನವನ್ನು ಪಡೆದರು ಮತ್ತು ಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅವರ ಮಹತ್ವದ ಕೊಡುಗೆಯಿಂದಾಗಿ ವಿಶ್ವಗುರು ಎಂದು ಪರಿಗಣಿಸಲ್ಪಟ್ಟರು ಎಂದು ಹೇಳಿದರು.
ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮತ್ತು ಜಗತ್ತಿಗೆ ಹೊಸ ದಿಕ್ಕನ್ನು ನೀಡಲು ಉತ್ತಮ ಶಿಕ್ಷಣ ಸಹಕಾರಿಯಾಗುವುದರ ಜೊತೆಗೆ ಇಡೀ ಮಾನವಕುಲಕ್ಕೆ ಒಳ್ಳೆಯದನ್ನು ಮಾಡುತ್ತದೆ ಎಂದು ತಿಳಿಸಿದರು.
ಮೈಸೂರು ನಗರವು ತನ್ನ ಐತಿಹಾಸಿಕ ಸ್ಮಾರಕಗಳು ಮತ್ತು ವಿಶಿಷ್ಟ ವಾಸ್ತುಶಿಲ್ಪ ಮತ್ತು ಅದರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ ಮತ್ತು ದಕ್ಷಿಣ ಭಾರತದ ಶಿಕ್ಷಣದ ಕೇಂದ್ರವಾಗಿದೆ. ಮೈಸೂರು ವಿಶ್ವವಿದ್ಯಾಲಯವನ್ನು ಜುಲೈ 27, 1916 ರಂದು ಸ್ಥಾಪಿಸಲಾಯಿತು, ಇದು ದೇಶದ ಆರನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯದ ಮೊದಲ ವಿಶ್ವವಿದ್ಯಾನಿಲಯವಾಗಿದೆ. ಈ ವಿಶ್ವವಿದ್ಯಾಲಯವು “ನ ಹಿ ಜ್ಞಾನನೇ ಸದೃಶಂ” ಮತ್ತು ‘ಸತ್ಯಮೇವೋದ್ದಾರಮ್ಯಹಂ’ ಎಂಬ ಧ್ಯೇಯವಾಕ್ಯಗಳ ಪ್ರಕಾರ ತನ್ನ ಗುರಿಯನ್ನು ಸಾಧಿಸಲು ಪ್ರಾರಂಭದಿAದಲೂ ಕೆಲಸ ಮಾಡುತ್ತಿದೆ, ಅಂದರೆ ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ ಮತ್ತು ನಾನು ಯಾವಾಗಲೂ ಸತ್ಯವನ್ನು ಬೆಂಬಲಿಸುತ್ತೇನೆ. ಈ ವಿಶ್ವವಿದ್ಯಾಲಯವು ಈ ದೇಶಕ್ಕೆ ಅನೇಕ ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ರಾಜಕಾರಣಿಗಳನ್ನು ನೀಡಿದೆ, ಅವರು ಕರ್ನಾಟಕ ಮತ್ತು ಭಾರತದ ನಿರ್ಮಾಣದಲ್ಲಿ ಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
103ನೇ ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವವಿಖ್ಯಾತ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಅವರಿಗೆ ಗೌರವ ಪದವಿ ನೀಡಿ ಗೌರವಿಸಲು ನಿರ್ಧರಿಸಲಾಗಿತ್ತು ಆದರೆ ಅವರ ಬಿಡುವಿಲ್ಲದ ಕಾರಣ ಅಂದು ಬರಲಾಗಲಿಲ್ಲ. ಈ ಘಟಿಕೋತ್ಸವದಲ್ಲಿ ಅವರನ್ನೂ ಗೌರವಿಸಲಾಗಿದೆ. ಈ ಸಾಧಕರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿ. ಈ ಸಾಧಕರ ಸಾಧನೆ ಹೀಗೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ.ಸುಧಾಕರ್ (MC Sudhakar) ಜಯದೇವ ಆರೋಗ್ಯ ಸಂಸ್ಥೆಗಳ ನಿವೃತ್ತ ನಿರ್ದೇಶಕರಾದ ಡಾ. ಸಿ ಎನ್ ಮಂಜುನಾಥ್ (Dr.CN Manjunath), ಕುಲಪತಿ ಎನ್. ಕೆ ಲೋಕನಾಥ್ (NK Lokanath) ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
#UniversityofMysore #Convocation #SMKrishna #javagalShrinath #MRSeeetharam #ThawarchandGehlot #governor #Doctorate #Dr.CNManjunath