• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಕಣಿಯನಹುಂಡಿಯಲ್ಲಿ ಚಿರನಿದ್ರೆ; ಎಸ್. ಜಾನಕಿ ಅಂತಿಮಯಾತ್ರೆಯಲ್ಲಿ ಎಲ್ಲರ ಮನ ಮುಟ್ಟಿದ ಈ ಒಂದು ದೃಶ್ಯ

ಪ್ರತಿಧ್ವನಿ by ಪ್ರತಿಧ್ವನಿ
July 13, 2026
in ಇದೀಗ
0
ಕಣಿಯನಹುಂಡಿಯಲ್ಲಿ ಚಿರನಿದ್ರೆ; ಎಸ್. ಜಾನಕಿ ಅಂತಿಮಯಾತ್ರೆಯಲ್ಲಿ ಎಲ್ಲರ ಮನ ಮುಟ್ಟಿದ ಈ ಒಂದು ದೃಶ್ಯ
Share on WhatsAppShare on FacebookShare on Telegram

ಬಹುಭಾಷಾ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯ ಫಾರಂ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು. ವಯೋಸಹಜ ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದ ಜಾನಕಿ ಅವರ ಅಂತ್ಯಸಂಸ್ಕಾರವು ಅವರ ಇಚ್ಛೆಯಂತೆ ಮೈಸೂರಿನ ನೆಲದಲ್ಲೇ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.

 

ADVERTISEMENT

ಜೀವನದ ಕೊನೆಯ ದಿನಗಳಲ್ಲಿ ಮೈಸೂರನ್ನೇ ತಮ್ಮ ನೆಲೆಯಾಗಿ ಆರಿಸಿಕೊಂಡಿದ್ದ ಎಸ್. ಜಾನಕಿ, ತಾವು ಅಗಲಿದ ಬಳಿಕವೂ ಇದೇ ನೆಲದಲ್ಲಿ ಅಂತ್ಯಸಂಸ್ಕಾರ ನಡೆಯಬೇಕು ಎಂದು ಅಪೇಕ್ಷಿಸಿದ್ದರು. ಕುಟುಂಬಸ್ಥರು ಅವರ ಆ ಕೊನೆಯ ಇಚ್ಛೆಯನ್ನು ಗೌರವಿಸಿ ಕಣಿಯನಹುಂಡಿಯಲ್ಲಿರುವ ಫಾರಂ ಹೌಸ್‌ನಲ್ಲೇ ಅಂತ್ಯಕ್ರಿಯೆ ನೆರವೇರಿಸಿದರು.ಅವರ ಮೊಮ್ಮಗಳು ಅಪ್ಸರಾ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಅಂತಿಮ ಧಾರ್ಮಿಕ ವಿಧಿವಿಧಾನಗಳು ನಡೆದವು. ಮೈಸೂರು ಜಿಲ್ಲಾಡಳಿತ ಪೊಲೀಸ್ ಗೌರವ ಸಲ್ಲಿಸುವ ಮೂಲಕ ಕನ್ನಡ ಸೇರಿದಂತೆ ಭಾರತೀಯ ಸಂಗೀತ ಲೋಕದ ಮಹಾನ್ ಗಾಯಕಿಗೆ ಭಾವಪೂರ್ಣ ನಮನ ಸಲ್ಲಿಸಿತು.

ಎಸ್. ಜಾನಕಿ ಅವರ ಜೀವನದ ಕೊನೆಯ ಕ್ಷಣದಲ್ಲಿಯೂ ಅವರ ಕೈಯಲ್ಲಿ ಪುಟ್ಟ ಶ್ರೀಕೃಷ್ಣನ ವಿಗ್ರಹವಿತ್ತು ಎನ್ನಲಾಗಿದೆ. ವಿಶೇಷವೆಂದರೆ, ಅಂತ್ಯಸಂಸ್ಕಾರದ ವೇಳೆಯಲ್ಲಿಯೂ ಅದೇ ವಿಗ್ರಹವನ್ನು ಅವರ ಕೈಯಲ್ಲಿ ಇರಿಸಲಾಗಿತ್ತು. ಈ ದೃಶ್ಯ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಅಭಿಮಾನಿಗಳ ಮನಸ್ಸನ್ನು ಭಾವುಕರನ್ನಾಗಿಸಿತು.

ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಈ ವೇಳೆ ಅವರ ಕೈಯಲ್ಲಿದ್ದ ಶ್ರೀಕೃಷ್ಣನ ವಿಗ್ರಹ ಎಲ್ಲರ ಗಮನ ಸೆಳೆದಿದ್ದು, ಅವರ ಕೃಷ್ಣ ಭಕ್ತಿಯ ಪ್ರತೀಕವಾಗಿ ಕಂಡುಬಂತು.

ಅಂತ್ಯಕ್ರಿಯೆ ಹಾಗೂ ಸಾರ್ವಜನಿಕ ದರ್ಶನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಪಾರ್ಥಿವ ಶರೀರವನ್ನು ಇರಿಸಿದ್ದ ಸ್ಥಳದಲ್ಲಿ ಶಾಮಿಯಾನ, ನೆರಳಿನ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು.ಸಾವಿರಾರು ಅಭಿಮಾನಿಗಳು ಸರದಿ ಸಾಲಿನಲ್ಲಿ ಅಂತಿಮ ದರ್ಶನ ಪಡೆಯಲು ಅನುಕೂಲವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಯಾವುದೇ ನೂಕುನುಗ್ಗಲು ಅಥವಾ ಗೊಂದಲ ಉಂಟಾಗದೇ, ಎಸ್. ಜಾನಕಿ ಅವರಿಗೆ ಅಭಿಮಾನಿಗಳು ಶಾಂತಿಯುತವಾಗಿ ಅಂತಿಮ ನಮನ ಸಲ್ಲಿಸಿದರು.

 

Tags: #GovernmentHonours#Kaniyanahundi#KannadaNews#KrishnaIdol#Mysuru#SJanaki#SJanakiDeath#SJanakiFuneral#SJanakiLastRites#SouthCinema#Tribute #FinalFarewellbreakingnewsEntertainmentNewsHDKoteindianmusickannadacinemaMusicLegendPlaybackSinger
Previous Post

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

Next Post

16 ವರ್ಷ ವಯಸ್ಸಿನ ಅಂತರದ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿದ ರಘು ದೀಕ್ಷಿತ್‌

Related Posts

Boat Tragedy In Vietnam
Top Story

BREAKING NEWS : ದೋಣಿ ಮುಳುಗಿ 15 ಭಾರತೀಯರ ದುರ್ಮರಣ : ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ..

by ಪ್ರತಿಧ್ವನಿ
July 11, 2026
0

ನವದೆಹಲಿ : ವಿಯೆಟ್ನಾಂನ ಫು ಕ್ವಾಕ್‌ ದ್ವೀಪದ (Phu Quoc Island) ಬಳಿಕ 32 ಮಂದಿ ಭಾರತೀಯ ಪ್ರವಾಸಿಗರನ್ನು (Indian Tourists) ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿ 15...

Read moreDetails
DK Vs HDK

ಕಂಬಳದಿಂದ ವೈಶಿಷ್ಟ್ಯಪೂರ್ಣ ದಸರಾದ ಘನತೆಗೆ ಧಕ್ಕೆ ಬೇಡ : ಸರ್ಕಾರದ ನಡೆಗೆ HDK ವಿರೋಧ..!

July 11, 2026
Janardhan Reddy Vs Naidu

ಜನಾರ್ದನ ರೆಡ್ಡಿಗೆ ನಾಯ್ಡು ಸರ್ಕಾರದ ಶಾಕ್‌ : ಬ್ರಾಹ್ಮಣಿ ಸ್ಟೀಲ್ಸ್‌ಗೆ ನೀಡಿದ್ದ ಜಮೀನು ವಾಪಸ್..!

July 11, 2026
M P prakash Statue inaurgated BY Siddaramaiah

ದಿ. ಎಂ.ಪಿ. ಪ್ರಕಾಶ್‌ ಪ್ರತಿಮೆ ಅನಾವರಣಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..

July 11, 2026
Zameer Vs Governer

ಮಾಜಿ ಸಚಿವ ಜಮೀರ್‌ಗೆ ಬಿಗ್‌ ಶಾಕ್‌ : ರಾಜ್ಯಪಾಲರ ಬಳಿ ಲೋಕಾಯುಕ್ತ ಕೇಳಿಕೊಂಡಿದ್ದೇನು..?

July 11, 2026
Next Post
16 ವರ್ಷ ವಯಸ್ಸಿನ ಅಂತರದ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿದ ರಘು ದೀಕ್ಷಿತ್‌

16 ವರ್ಷ ವಯಸ್ಸಿನ ಅಂತರದ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿದ ರಘು ದೀಕ್ಷಿತ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada