ಅಂದವಾಗಿ ಕಾಣಬೇಕು ಎಂದು ಬಯಸುವವರು ಮುಖದ ಚರ್ಮದ ಆರೈಕೆ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು ತ್ವಚೆಯ ಮೇಲೆ ಚಿಕ್ಕ ಕಲೆಗಳಾದರೂ ಕೂಡ ಮುಖದ ಅಂದ ಕಡಿಮೆಯಾಗುತ್ತದೆ ಅದರಲ್ಲೂ ಕೂಡ ಕೆಲವರಿಗೆ ಓಪನ್ ಪೋರ್ಸ್ ಹೆಚ್ಚಿರುತ್ತದೆ. ಓಪನ್ ಫೋರ್ಸ್ ಇಂದ ಮುಖದ ಸೌಂದರ್ಯ ಕಡಿಮೆಯಾಗುತ್ತದೆ. ಪೋರ್ಸ್ ಮುಚ್ಚುವುದಕ್ಕಾಗಿ ಅತಿಯಾಗಿ ಮೇಕಪ್ ಅನ್ನು ಬಳಸಬೇಕಾಗುತ್ತದೆ. ಹೆಚ್ಚು ಮೇಕಪ್ ಬಳಸಿದರೆ ಮುಖದ ತ್ವಚೆ ದಿನದಿಂದ ದಿನಕ್ಕೆ ಹಾಳಾಗುತ್ತದೆ. ಹಾಗೂ ಸಾಕಷ್ಟು ಜನ ಓಪನ್ ಪೋಸನ್ನ ನಿವಾರಣೆ ಮಾಡಿಕೊಳ್ಳುತ್ತಾರೆ ಸಾಕಷ್ಟು ಟ್ರೀಟ್ಮೆಂಟ್ ಗಳನ್ನ ತೆಗೆದುಕೊಳ್ಳುತ್ತಾರೆ ಹಾಗೂ ದುಬಾರಿ ಕರ್ಚನ ಮಾಡುತ್ತಾರೆ. ಆದರೂ ಕೂಡ ಪೋರ್ಸ್ ಕಡಿಮೆಯಾಗುವುದಿಲ್ಲ. ಈ ಓಪನ್ ಪೋರ್ಸ್ ಸಮಸ್ಯೆಗೆ ಪ್ರತಿದಿನ ನೀವು ಈ ಫೇಸ್ ಪ್ಯಾಕ್ ಗಳನ್ನ ಬಳಸುವುದರಿಂದ ಪೋರ್ಸ್ ಕಡಿಮೆಯಾಗಲು ಸಹಾಯ ಮಾಡುತ್ತದೆ.
ಮೊಟ್ಟೆಯ ಬಿಳಿಯ ಭಾಗ
ಮಟ್ಟಿಯ ಬಿಳಿಯ ಭಾಗ ನಮ್ಮ ದ್ವಜಿಯನ್ನ ಮಾಯಿಶ್ಚರೈಸ ಮಾಡುತ್ತದೆ ಜೊತೆಗೆ ನಮ್ಮ ಸ್ಕಿನ್ ಅನ್ನ ಟೈಟ್ ಮಾಡುತ್ತದೆ. ಓಪನ್ ಪೋರ್ಸ್ ಮೊಟ್ಟೆ ಉತ್ತಮವಾದ ಹೋಂ ರೆಮೆಡಿ ಆಗಿದ್ದು ತಕ್ಷಣಕ್ಕೆ ನಿಮಗೆ ರಿಸಲ್ಟ್ ದೊರೆಯುತ್ತದೆ. ಮೊಟ್ಟೆಯ ಬಿಳಿಯ ಭಾಗಕ್ಕೆ ಒಂದು ಸ್ಪೂನ್ ಅಷ್ಟು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಫೋರ್ಸ್ ಕಡಿಮೆಯಾಗುತ್ತದೆ.
ಕಡಲೆ ಹಿಟ್ಟು
ಕಡಲೆಹಿಟ್ಟೊಂದು ನ್ಯಾಚುರಲ್ ಇಂಗ್ರಿಡಿಯಂಟ್ ಆಗಿದ್ದು ಮುಖದಲ್ಲಿರುವ ಡೆಡ್ ಸ್ಕಿನ್ ಸೆಲ್ಸ್ ಅನ್ನ ತೆಗೆದುಹಾಕುತ್ತದೆ ಮತ್ತು ಎಕ್ಸ್ಟ್ರಾ ಆಯಿಲ್ ಅನ್ನು ಶಮನಗೊಳಿಸುತ್ತದೆ, ಹಾಗೂ ಓಪನ್ ಫೋರ್ಸ್ ನ ನಿವಾರಣೆ ಮಾಡುತ್ತದೆ. ಎರಡು ಟೇಬಲ್ ಸ್ಪೂನ್ ಅಷ್ಟು ಕಡಲೆಹಿಟ್ಟಿಗೆ ಚಿಟಿಕೆಯಷ್ಟು ಅರಿಶಿಣವನ್ನ ಹಾಕಿ ನಂತರ ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಆ ಮಿಶ್ರಣವನ್ನು ಹಚ್ಚಿ ಒಂದಿಷ್ಟು ನಿಮಿಷಗಳ ಕಾಲ ಹಾಗೆ ಬಿಟ್ಟು ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖದ ಅಂದ ಹೊಳಪು ಹೆಚ್ಚಾಗುತ್ತದೆ ಹಾಗೂ ಫೇಸ್ ವಾಶ್ ಸೋಪ್ ಬದಲು ಕಡಲೆ ಹಿಟ್ಟನ್ನ ಬಳಸಿ ಮುಖವನ್ನು ತೊಳೆಯುವುದರಿಂದ ತ್ವಜೆ ಉತ್ತಮವಾಗಿರುತ್ತದೆ.
ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯಲ್ಲಿ ಲುಟೀನ್ ಅಂಶವಿರುತ್ತದೆ.ಇದು ಉತ್ಕರ್ಷಣ ನಿರೋಧಕವಾಗಿದ್ದು ಚರ್ಮದ ಪೋಷಣೆಗೆ ತುಂಬಾನೇ ಒಳ್ಳೆಯದು. ಅದರಲ್ಲೂ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಶಿಯಂ ವಿಟಮಿನ್ ಹಾಗೂ ನ್ಯೂಟ್ರಿಷನ್ ಅಂಶ ಹೆಚ್ಚಿದ್ದು ಮುಖದಲ್ಲಿರುವ ಕಲೆಗಳು ಹಾಗೂ ವಾಲ್ಟನ್ನ ತೆಗೆದುಹಾಕುವುದಕ್ಕೆ ಸಹಾಯಕಾರಿ ನಿಮ್ಮ ತ್ವಚೆಯನ್ನ ಸಾಫ್ಟ್ ಮಾಡುತ್ತದೆ ಮುಖ್ಯವಾಗಿ ಓಪನ್ ಪೋರ್ಸ್ ಅನ್ನ ಶಮನ ಮಾಡುತ್ತದೆ.