ಬೆಂಗಳೂರು: ಬಾಂಗ್ಲಾದೇಶದಲ್ಲಿ ರಾಜಕೀಯ ಹಿಂಸಾಚಾರದಿಂದಾಗಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿರುವುದಕ್ಕೆ ಲೇಖಕಿ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ ನೀಡಿದ್ದಾರೆ.ಇಸ್ಲಾಂ ಕೋಮುವಾದಿಗಳನ್ನು ಮೆಚ್ಚಿಸಲು ಶೇಖ್ ಹಸೀನಾ ನನ್ನ ಬಾಂಗ್ಲಾದೇಶದಿಂದ ಹೊರ ಹಾಕಿದ್ದರು.ಈಗ ಅದೇ ಕೋಮುವಾದಿಗಳು ವಿದ್ಯಾರ್ಥಿ ಚಳವಳಿ ಮೂಲಕ ಶೇಖ್ ಹಸೀನಾ ಅವರನ್ನು ದೇಶ ತೊರೆಯುವಂತೆ ಮಾಡಿದರು ಎಂದು ಹೇಳಿದ್ದಾರೆ.
1999ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಾಯಿ ನೋಡಲು ಬಾಂಗ್ಲಾಕ್ಕೆ ತೆರಳಿದ್ದೆ. ಆಗ ಹಸೀನಾ ಕೋಮುವಾದಿಗಳನ್ನು ಮೆಚ್ಚಿಸಲು ನನ್ನ ಹೊರ ಹಾಕಿದರು. ಈಗ ಅದೇ ಕೋಮುವಾದಿಗಳು ಅವರನ್ನು ಹೊರ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ.ಹಸೀನಾ ಅವರು ಸೋಮವಾರ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ಪಲಾಯನ ಮಾಡಿದ್ದರು. ಇಲ್ಲಿಂದ ಅವರು ಇಂಗ್ಲೆಂಡ್ಗೆ ತೆರಳಿ ಆಶ್ರಯ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.