• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಮೀನು ವಿವಾದಕ್ಕೆ ಒಂದೇ ಕುಟುಂಬದ ಐವರು ಸೇರಿ 6 ಜನರ ಬರ್ಬರ ಕೊಲೆ

ಪ್ರತಿಧ್ವನಿ by ಪ್ರತಿಧ್ವನಿ
May 29, 2026
in Top Story
0
ಜಮೀನು ವಿವಾದಕ್ಕೆ ಒಂದೇ ಕುಟುಂಬದ ಐವರು ಸೇರಿ 6 ಜನರ ಬರ್ಬರ ಕೊಲೆ
Share on WhatsAppShare on FacebookShare on Telegram

ವಿಜಯಪುರ ಜಿಲ್ಲೆಯಲ್ಲಿ ಜಮೀನು ವಿವಾದ ಭೀಕರ ಮಾರಣಹೋಮಕ್ಕೆ ತಿರುಗಿದ್ದು, ಚಡಚಣ ತಾಲೂಕಿನ ಗೊವಿಂದಪುರ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ರಾಜ್ಯಾದ್ಯಂತ ಬೆಚ್ಚಿಬೀಳುವಂತೆ ಮಾಡಿದೆ.ಶುಕ್ರವಾರ ಮಧ್ಯಾಹ್ನ ಸುಮಾರು 2ರಿಂದ 2.30ರ ಅವಧಿಯಲ್ಲಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದ್ದು, 15ರಿಂದ 20 ಜನರ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ADVERTISEMENT
DK Shivakumar's New Era Begins: ಡಿಕೆಶಿ ಸಂಪುಟದಲ್ಲಿ ಅಚ್ಚರಿ ಹೆಸರುಗಳ ಸೇರ್ಪಡೆ.#pratidhvani #siddaramaiah

ಹತ್ಯೆಗೀಡಾದವರನ್ನು ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ @ ಚಂದು ನಿರಾಳೆ (55), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಹಾಗೂ ಶಬ್ಬೀರ ಅತ್ತಾರ (45) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಅರವಿಂದ ಕಟಗೆ (72) ಮತ್ತು ಜೆಸಿಬಿ ಚಾಲಕ ಸಂದೀಪ ಮಾನೆ (33) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಪೊಲೀಸರ ಮಾಹಿತಿ ಪ್ರಕಾರ, ಸುಮಾರು 25 ಎಕರೆ ಜಮೀನು ವಿಚಾರವಾಗಿ ಕಳೆದ 15-16 ವರ್ಷಗಳಿಂದ ಎರಡು ಗುಂಪುಗಳ ನಡುವೆ ತೀವ್ರ ವೈಷಮ್ಯ ಮುಂದುವರಿದಿತ್ತು. ಇದೇ ಜಮೀನು ವಿಚಾರವಾಗಿ 2015ರಲ್ಲಿ ಚಡಚಣ ಪೋಲಿಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣವೂ ದಾಖಲಾಗಿತ್ತು.ಆ ಪ್ರಕರಣದಲ್ಲಿ ಕೆಲವರಿಗೆ ಶಿಕ್ಷೆಯಾಗಿದ್ದು, ಬಳಿಕ ಆರೋಪಿತರು ಗ್ರಾಮ ತೊರೆದಿದ್ದರು. ಹಲವು ವರ್ಷಗಳಿಂದ ವಿವಾದಿತ ಜಮೀನು ಬಿಕೋಯ್ದ ಸ್ಥಿತಿಯಲ್ಲಿತ್ತು. ಇತ್ತೀಚೆಗೆ ನಿರಾಳೆ ಕುಟುಂಬ ಜಮೀನನ್ನು ಖರೀದಿಸಿ ಕೃಷಿಗೆ ಸಜ್ಜುಗೊಳಿಸಲು ಮುಂದಾದ ವೇಳೆ ಮತ್ತೆ ಉದ್ವಿಗ್ನತೆ ಉಂಟಾಗಿದೆ ಎನ್ನಲಾಗಿದೆ.

Chuvarayaswamy On Karnataka New CM DK Shivakumar | ಕುಮಾರಸ್ವಾಮಿಗೆ ಚಲುವಣ್ಣ ಕ್ಲಾಸ್ #pratidhvani

ಜಮೀನಿನಲ್ಲಿ ಟ್ರ್ಯಾಕ್ಟರ್ ಮತ್ತು ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಮೊದಲು ಖಾರದ ಪುಡಿ ಎರಚಿ, ಬಳಿಕ ಕಬ್ಬು ಕತ್ತರಿಸುವ ಕೊಯ್ತಾ, ಮಚ್ಚು ಹಾಗೂ ಇತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿರುವ ಶಂಕೆಯೂ ವ್ಯಕ್ತವಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ “ಮೃತದೇಹಗಳ ಮೇಲ್ನೋಟ ಪರಿಶೀಲನೆಯಲ್ಲಿ ಬುಲೆಟ್ ಗಾಯಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ” ಎಂದು ತಿಳಿಸಿದ್ದಾರೆ.

Sumalata: ಸಿದ್ರಾಮಯ್ಯ ರಾಜೀನಾಮೆ ವಿಚಾರ ಶಾಕಿಂಗ್ ನ್ಯೂಸ್​ ಅಲ್ಲ.. ಸುಮಲತಾ ಹೀಗ್ಯಾಕಂದ್ರು? #pratidhvani

 

ಈ ಹತ್ಯಾಕಾಂಡದಲ್ಲಿ ಗ್ರಾಮದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಹಾಗೂ ಆತನ ಸಹಚರರ ಕೈವಾಡವಿದೆ ಎಂದು ನಿರಾಳೆ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.ಘಟನೆ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸೋಕೋ ತಂಡ ಹಾಗೂ ಬೆರಳು ಮುದ್ರೆ ತಜ್ಞರು ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸಿದ್ದಾರೆ.

 

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂಡಿ ಉಪವಿಭಾಗದ ಪೊಲೀಸರು, ಡಿಎಆರ್ ಮತ್ತು ಕೆಎಸ್‌ಆರ್‌ಪಿ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರದ  ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: BJP leader allegationbrutal murder caseChadachan police stationfamily murder in KarnatakaGovindapura massacreGovindapura village incidentKarnataka Crime NewsKarnataka latest crime newsKarnataka law and orderland dispute murderland dispute violencemurder over property disputepolice investigation Vijayapurapratidavanisix people killed in VijayapuraVijayapura breaking news
Previous Post

“ಸೋಮವಾರದಿಂದ ಕಾಂಗ್ರೆಸ್‌ನಲ್ಲಿ ಹೊಸ ಅಧ್ಯಾಯ ಆರಂಭ” : ಸತೀಶ್ ಜಾರಕಿಹೊಳಿ

Next Post

“ಡಿಕೆಶಿ ಯುಗ” ಹೇಗಿರಬಹುದು..?

Related Posts

ಬೆಂಗಳೂರಿನ ಮೊಳೆ ಮಾಫಿಯಾ ಮಟ್ಟ ಹಾಕಿ : ನಗರ ಪೊಲೀಸ್ ಆಯಕ್ತರಿಗೆ ಮೋಹನ್‌ ಕುಮಾರ್‌‌ ದಾನಪ್ಪ ಪತ್ರ..!
Top Story

ಬೆಂಗಳೂರಿನ ಮೊಳೆ ಮಾಫಿಯಾ ಮಟ್ಟ ಹಾಕಿ : ನಗರ ಪೊಲೀಸ್ ಆಯಕ್ತರಿಗೆ ಮೋಹನ್‌ ಕುಮಾರ್‌‌ ದಾನಪ್ಪ ಪತ್ರ..!

by ಪ್ರತಿಧ್ವನಿ
May 29, 2026
0

ಬೆಂಗಳೂರು : ಸಾರ್ವಜನಿಕ ವಾಹನಗಳಿಗೆ ಹಾನಿ ಮಾಡುವ ದುರುದ್ದೇಶದಿಂದ ಸಾರ್ವಜನಿಕ ರಸ್ತೆಗಳಲ್ಲಿ ಕಬ್ಬಿಣದ ಮೊಳೆಗಳನ್ನು ಹರಡುತ್ತಿರುವ ಕಿಡಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
Next Post
ಮೌನ ಮುರಿದ ಡಿಕೆ ಶಿವಕುಮಾರ್; ಸಿಎಂ ರಾಜೀನಾಮೆ ಬಳಿಕ ಭಾವನಾತ್ಮಕ ಸಂದೇಶ

“ಡಿಕೆಶಿ ಯುಗ” ಹೇಗಿರಬಹುದು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada