ಇದುವರೆಗೆ ತಣ್ಣಗಿದ್ದ ಶಿವಮೊಗ್ಗದಲ್ಲಿ ಈಗ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆಯಲಾರಂಭಿಸಿದ್ದು ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಸೋಮವಾರ ಬೈಕಿನಲ್ಲಿ ಬಂದ ಕೆಲವು ದುಷ್ಕರ್ಮಿಗಳು ಮೃತ ಹರ್ಷನ ಸಹೋದರಿ ಅಶ್ವಿನಿ ಸೇರಿದಂತೆ ಆತನ ಕುಟುಂಬದವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ.
ಇದಲ್ಲದೆ ಸೀಗೆಹಟ್ಟಿ ಭಾಗದಲ್ಲಿನ ಜನರನ್ನೂ ಬೆದರಿಸಿದ ದುಷ್ಕರ್ಮಿಗಳು ಭರ್ಮಪ್ಪ ನಗರದಲ್ಲಿ ಪ್ರಕಾಶ್ ಎಂಬ ಯುವಕನ ತಲೆಗೆ ಕಲ್ಲಿನಿಂದ ಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಭಾನುವಾರ ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ತಮ್ಮ ಇನ್ನೋವಾ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಿ ಅಜಾದ್ ನಗರದ ಸೈಯದ್ ಪರ್ವೇಜ್ ಎಂಬುವರು ದೂರು ದಾಖಲಿಸಿದ್ದರು.
![](https://pratidhvani.com/wp-content/uploads/2022/10/WhatsApp-Image-2022-10-25-at-5.00.44-PM-1024x576.jpeg)
ಇದಾದ ಎರಡು ದಿನಗಳ ಬಳಿಕ ಮಾರಾಕಾಸ್ತ್ರಗಳೊಂದಿಗೆ ಸೀಗೆಹಟ್ಟಿ ಬಡಾವಣೆಗೆ ಬಂದ ಕಿಡಿಗೇಡಿಗಳುಯ ಸಿಕ್ಕ ಸಿಕ್ಕವರನ್ನು ಹೆದರಿಸಿದ್ದಾರೆ ಜೊತೆಗೆ RSS ಹಾಗೂ ಭಜರಂಗದಳದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.
ಮೂರು ಬೈಕ್ ನಲ್ಲಿ ಬಂದಿದ್ದ ಒಂಭತ್ತು ಮಂದಿ ದುಷ್ಕರ್ಮಿಗಳು ವಾಪಸ್ ತೆರಳುವ ವೇಳೆ ಓಟಿ ರಸ್ತೆಯ ಸರ್ಕಲ್ ಬಳಿ ಇರುವ ಟಿ ಅಂಗಡಿಗೆ ಆಗಮಿಸಿದ್ದು ಅಂಗಡಿಯನ್ನು ಧ್ವಂಸಗೊಳಿಸಿ ಜೊತೆಗೆ ಅಂಗಡಿಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ದುಷ್ಕರ್ಮಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ಮರ್ಷ ಮತ್ತು ಪ್ರಕಾಶ್ ಕುಟುಂಬದವರಿಗೆ ಸೂಕ್ತ ಪೊಲೀಸ್ ಬದ್ರತೆ ಒದಗಿಸುವುದಾಗಿ ತಿಳಿಸಿದ್ದಾರೆ.
![](https://pratidhvani.com/wp-content/uploads/2022/10/gk-mithun-kumar1664800901-1024x610.jpg)