ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಹಿರಿಯ ಮಗ ಆಶಿಶ್ ಯೆಚೂರಿ ಗುರುವಾರ ಮುಂಜಾನೆ COVID-19 ಸೋಂಕಿನಿಂದ ನಿಧನರಾದರು.
35 ವರ್ಷ ವಯಸ್ಸಿನ ಆಶಿಶ್‌ಗೆ ಸೋಂಕು ಶ್ವಾಸಕೋಶಕ್ಕೆ ಹರಡಿದ ಪರಿಣಾಮ ಏಪ್ರಿಲ್ 12 ರಿಂದ ಐಸಿಯುಗೆ ದಾಖಲಾಗಿದ್ದರು. ಶ್ವಾಸಕೋಶಕ್ಕೆ ತೀವ್ರವಾಗಿ ಹರಡಿರುವ ಸೋಂಕಿನಿಂದ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
“ಕರೋನದಿಂದಾಗಿ ನನ್ನ ಹಿರಿಯ ಮಗ ಆಶಿಶ್ ಯೆಚೂರಿಯನ್ನು ನಾನು ಇಂದು ಬೆಳಿಗ್ಗೆ ಕಳೆದುಕೊಂಡೆ ಎಂಬ ದುಃಖದ ಸಂಗತಿಯನ್ನು ನಿಮ್ಮ ಮುಂದೆ ನಾನು ಹಂಚಿಕೊಳ್ಳುತ್ತಿದ್ದೇನೆ. ನಮಗೆ ಭರವಸೆ ತುಂಬಿದ ಮತ್ತು ನನ್ನ ಮಗನಿಗೆ ಚಿಕಿತ್ಸೆ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ವೈದ್ಯರು, ದಾದಿಯರು, ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕರ್ಮಚಾರಿಗಳಿಗೆ ಮತ್ತು ನಮ್ಮೊಂದಿಗೆ ನಿಂತ ಎ ಜನರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಶ್ರೀ ಯೆಚೂರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
