ವಿಡಿಯೋ ಕೇಸ್ನಲ್ಲಿ ಎಸ್ಐಟಿ ರಚನೆ ಅಂದಾಗ ನಾನು ಬಹಳ ಸಂತೋಷ ಪಟ್ಟೆ, ಎಸ್ಐಟಿ ಅಂದ್ರೆ ಸ್ಪೆಷಲ್ ಇನ್ವೆಸ್ಟಿಗೇಶನ್ ಅಂತ ನಾನು ಅನ್ಕೊಂಡಿದ್ದೆ. ಅದ್ರೆ ಇದು ಒಂದು ಟೀಮ್ ಸಿದ್ದರಾಮಯ್ಯ ಇನ್ವಿಸ್ಟಿಗೇಶನ್ ಟೀಮ್, ಇನ್ನೊಂದು ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್ ಅನ್ನೋದು ಆ ಬಳಿಕ ಗೊತ್ತಾಯ್ತು. ಯಾರ್ಯಾರು ಈ ಪ್ರಕರಣದ ಬಗ್ಗೆ ಪೊನ್ನಲ್ಲಿ ಮಾತಾನಾಡಿದ್ದರೆ ಅದು ಹೊರಗೆ ಬರ್ಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ವಿಚಾರದಲ್ಲಿ ನಾನು ಪ್ರಜ್ವಲ್ ರೇವಣ್ಣ ಅವರನ್ನು ವಹಿಸಿಕೊಳ್ಳಲ್ಲ, ಈ ವಿಚಾರದಲ್ಲಿ ತನಿಖೆ ಪಾರದರ್ಶಕವಾಗಿರಲಿ. ಈ ಕೇಸ್ನಲ್ಲಿ ಎಲ್ಲಾ ನಾನ್ ಬೇಲಬಲ್ ಕೇಸ್ಗಳನ್ನ ಹಾಕಿಸಿದ್ದೀರಿ. ಮತ್ತೆ ಎರಡನೇ ದಿವಸ ಇನ್ನೊಂದು ಕೇಸ್ ಹಾಕಿಸಿದ್ರಿ. ಯಾರೋ ಹೆಣ್ಣುಮಗಳ ಕೈಲಿ ಗನ್ ಪಾಯಿಂಟ್ನಲ್ಲಿ ರೇಪ್ ಅಂತ ದೂರು ಕೊಡಿಸಿದ್ದೀರಿ. ಪಾಪ ಅದು ನಡೆದಿರಬಹುದೇನೋ ಇದನ್ನ ಮಾಧ್ಯಮಗಳಿಗೆ ಯಾರು ಲೀಕ್ ಮಾಡಿದ್ದು..? ಈ ಸರ್ಕಾರಕ್ಕೆ ಪ್ರಚಾರ ಬೇಕು ಇನ್ನೊಬ್ಬರ ತೇಜೋವಧೆ ಮಾಡಬೇಕು. ಬೇಲೂರಿನಲ್ಲಿ ಚುನಾವಣಾ ಪ್ರಚಾರ ಸಭೆ ನಡೆದಿದೆ, ಮೊದಲ ಪೆನ್ ಡ್ರೈವ್ನಲ್ಲಿ ಬಂದಿರುವ ಹೆಣ್ ಮಗಳು ಪ್ರಜ್ವಲ್ ರೇವಣ್ಣ ಪಕ್ಕ ಕೂತಿದ್ದಾರೆ. ಏನಿದರ ಅರ್ಥ..?
ಅವರ ಪ್ರಚಾರದ ಪೋಟೊವನ್ನೇ ಈಗ ಬಿಟ್ಟಿದ್ದೀರಿ. ಇಷ್ಟೆಲ್ಲ ಆದಮೇಲೆ ಆ ಹೆಣ್ ಮಗಳು ಪ್ರಚಾರಕ್ಕೆ ಯಾಕ್ ಹೋದ್ರು..? ಶಿವಕುಮಾರ್ ಅವರೇ, ಸಿದ್ದರಾಮಯ್ಯ ಅವರೇ, ಯಾರು ನೇರವಾಗಿ ರೇವಣ್ಣ ಅವರ ಮೇಲೆ ಕಂಪ್ಲೈಂಟ್ ಕೊಟ್ಟಿಲ್ಲ. ಕಿಡ್ಯಾಪ್ ಆದ ಹೆಣ್ ಮಗಳನ್ನು ಎಲ್ಲಿಂದ ಕರೆದುಕೊಂಡು ಬಂದ್ರಿ..? ಹೆಣ್ ಮಗಳನ್ನ ಯಾರು ಪ್ರಥಮವಾಗಿ ಕರ್ಕೊಂಡ್ ಬಂದ್ರಿ..? ಕಾಳೆನಹಳ್ಳಿ ತೋಟದ ಮನೆ ಅಂತ ಟಿವಿನಲ್ಲಿ ತೋರಿಸಿದ್ರಿ, ಆ ತೋಟದ ಮನೆಯನ್ನ ಮಹಜರ್ ಮಾಡಿಸಿದ್ರಾ? ಎರಡು ದಿನ ಆ ಹೆಣ್ ಮಗಳನ್ನ ನಿಮ್ಮ ಜೊತೆ ಇಟ್ಟುಕೊಂಡಿದ್ದೀರಿ. ಇವತ್ತಿನವರೆಗೂ ಆ ಹೆಣ್ಣು ಮಗಳನ್ನ ಜಡ್ಜ್ ಮುಂದೆ ಪ್ರೊಡ್ಯೂಸ್ ಮಾಡಿಲ್ಲ ಯಾಕೆ..? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಎಸ್ಐಟಿ ತನಿಖೆಗೆ ರೇವಣ್ಣ ನಮಗೆ ಸಹಕಾರ ಮಾಡ್ತಿಲ್ಲ ಅಂತ ಹೇಳಿದ್ದೀರಿ, ರೇವಣ್ಣ ಮಂತ್ರಿಯಾಗಿದ್ದವರು ನಿಮಗೆ ಬೇಕಾದ ರೀತಿ ಬರೆದುಕೊಡಬೇಕಾ..? ಇದಕ್ಕೆ ಹೇಳಿದ್ದು ಇದು ಶಿವಕುಮಾರ್, ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಂ ಎಂದು. ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ, ಆ ಕಾರ್ತಿಕ್ ಗೌಡ ಇಲ್ಲಿ ವರೆಗೂ ಎಲ್ಲಿದ್ದಾನೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರನ್ನು ಮಾತ್ರ ತನಿಖೆ ಮಾಡ್ತಿದ್ದೀರಿ, ಕಾರ್ತಿಕ್ ಗೌಡ ನಾನು ಪೆನ್ ಡ್ರೈವ್ ಅನ್ನು ದೇವರಾಜೇಗೌಡ ಅವ್ರಿಗೆ ಕೊಟ್ಟಿದ್ದೀನಿ ಅಂತ ಹೇಳಿದ್ದಾನೆ. ಆತ ಸಿಂಗಪೂರ್ನಲ್ಲಿ ಇದ್ದಾನೆ ಅಂತ ಹೇಳಿದಾಗ, ಡಿಕೆಶಿ ವ್ಯಂಗ್ಯ ಮಾಡಿದ್ರು ಎಂದು ಟೀಕಿಸಿದ್ದಾರೆ.
ಎಸ್ಐಟಿ ಅವರು ಸ್ಪೆಷಲ್ ತನಿಖೆ ಮಾಡ್ತಿದ್ರೆ ಕಾರ್ತಿಕ್ ಗೌಡ ಎಲ್ಲಿದ್ದಾನೆ ಎಂದು ತನಿಖೆ ಮಾಡಬೇಕಿತ್ತು. ನವೀನ್ ಗೌಡ ಹಾಗೂ ಆತನ ಸ್ನೇಹಿತನ ಆಡಿಯೋ ಪ್ಲೇ ಮಾಡಿಸಿರುವ ಕುಮಾರಸ್ವಾಮಿ, ನವೀನ್ ಗೌಡ ಹಾಗು ಹಾಸನದ ಕಾಂಗ್ರೆಸ್ ಅಭ್ಯರ್ಥಿ ಜೊತೆ ಇರು. ಪೋಟೊ ರಿಲೀಸ್ ಮಾಡಿದ್ದಾರೆ. ಇನ್ನು ಸಚಿವ ಜಮೀರ್ ಅಹಮ್ಮದ್ ಜೊತೆ ನವೀನ್ ಗೌಡ ಇರುವ ಪೋಟೊ ಕೂಡ ರಿವೀಲ್ ಮಾಡಿದ್ದಾರೆ. ನವೀನ್ ಗೌಡ ನಮ್ಮ ಅಫೀಸ್ನಲ್ಲೂ ಒಡಾಡ್ತಿದ್ದ ಅಂತ ಹೇಳ್ತಾರೆ, ಈ ಸರ್ಕಾರದಲ್ಲಿ ಎಸ್ಐಟಿ ಟೀಂ ಸಂತ್ರಸ್ತೆಯರು ಯಾರಿದ್ದಾರೆ ಅವರಿಂದ ದೂರು ಪಡೆಯಲು ಕಾಯ್ತಿದ್ದೇವೆ ಅಂತ ಹೇಳಿದ್ದಾರೆ. ಸರಿಯಾಗಿ ತನಿಖೆಯಾದ್ರೆ ಅವರಿಗೆ ಯಾರು ಎಷ್ಟು ದುಡ್ಡು ಕೊಟ್ಟಿದ್ದಾರೆ ಗೊತ್ತಾಗುತ್ತೆ ಎಂದಿದ್ದಾರೆ.