• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಸರ್ಕಾರದ ಸೂಚನೆಯಂತೆ ವಿಡಿಯೋ, ದೂರು ನಡೆದಿದ್ಯಾ..?

ಪ್ರತಿಧ್ವನಿ by ಪ್ರತಿಧ್ವನಿ
May 7, 2024
in ರಾಜಕೀಯ
0
ತಾನು ಅಕ್ರಮ ಮಾಡಿ, ಬೇರೆಯವರ ಮೂತಿಗೆ ಒರೆಸುವುದು ಕುಮಾರಸ್ವಾಮಿ ಜಾಯಮಾನ: ಡಿಸಿಎಂ ಡಿ.ಕೆ. ಶಿವಕುಮಾರ್
Share on WhatsAppShare on FacebookShare on Telegram

ರಾಜ್ಯ ರಾಜಕಾರಣದಲ್ಲಿ ಹಲ್​ಚಲ್​ ಎಬ್ಬಿಸಿರುವ ವಿಡಿಯೋ ಪ್ರಕರಣದಲ್ಲಿ ಮಾಸ್ಟರ್​ ಮೈಂಡ್​ ರೀತಿಯಲ್ಲಿ ಡಿಕೆ ಶಿವಕುಮಾರ್​​ ಕೆಲಸ ಮಾಡಿದ್ದಾರೆ. ಆಮಿಷ ಒಡ್ಡಿದ್ದಾರೆ ಎಂದು ನಿನ್ನೆ ವಕೀಲ ಹಾಗು ಬಿಜೆಪಿ ನಾಯಕ ದೇವರಾಜೇಗೌಡ ಆರೋಪ ಮಾಡಿದ್ದರು. ಆದರೆ ಅದೆಲ್ಲಾ ಸುಳ್ಳು ಆರೋಪ, ಸತ್ಯಾಂಶವಿಲ್ಲ ಎಂದು ಡಿ.ಕೆ ಶಿವಕುಮಾರ್​ ವಿಡಿಯೋ ಸಂದೆಶದಲ್ಲಿ ಹೇಳಿದ್ದರು. ಆ ಬಳಿಕ ಇಂದು ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ADVERTISEMENT

ಇತ್ತೀಚಿಗೆ ರಾಜ್ಯದಲ್ಲಿ ನಡೆದಿರುವುದು ಅತ್ಯಂತ ಕೆಟ್ಟ ಬೆಳವಣಿಗೆ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕೊನೆಯ ಹಂತ ಚುನಾವಣೆ ನಡೆಯುತ್ತಿದೆ. ಏಪ್ರಿಲ್​ 21ರಂದು ಪೆನ್ ಡ್ರೈವ್ ಅನ್ನು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಸರ್ಕ್ಯೂಲೇಶನ್ ಮಾಡಿದ್ದಾರೆ. ಹಾಸನ‌, ಬೆಂಗಳೂರು ಗ್ರಾಮಾಂತರದಲ್ಲೂ ಪೆನ್​ಡ್ರೈವ್​ ಹಂಚಿದ್ದಾರೆ. ಹಾಸನದ ಜೆಡಿಎಸ್ ಅಭ್ಯರ್ಥಿಯನ್ನು ಈಗ ನಾನು ಮೈತ್ರಿ ಅಭ್ಯರ್ಥಿ ಅನ್ನಲ್ಲ, ಏಪ್ರಿಲ್​ 21ರಂದು ರಾತ್ರಿ 8 ಗಂಟೆಗೆ ಪ್ರಜ್ವಲ್ ರೇವಣ್ಣ ವಿಡಿಯೋ ನೋಡಲು ಗ್ರೂಪ್​ಗೆ ಜಾಯಿನ್​ ಆಗಿ, ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಲಾಗುತ್ತೆ ಅನ್ನೋ ಸಂದೇಶ ಹರಿದಾಡಿತ್ತು.

ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ, ಈ ನೆಲದ ಕಾನೂನಿನಲ್ಲಿ ಕಠಿಣ ಶಿಕ್ಷೆ ಆಗಲಿ ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಈ ನಿರ್ಧಾರದಲ್ಲಿ ಯಾವುದೇ ರಾಜಿ ಇಲ್ಲ, ರಕ್ಷಣೆ ಕೊಡುವಂತ ಪ್ರಶ್ನೆಯೂ ಇಲ್ಲ. ವಿಡಿಯೋ ರಿಲೀಸ್​ಗೆ ಕ್ಷಣಗಣನೆ ಅಂತ ಹೇಳಿರೋದು ನವಿನ್ ಗೌಡ. ನಮ್ಮ ಅಭ್ಯರ್ಥಿ ಪೋಲಿಂಗ್ ಏಜೆಂಟ್ ನಾಲ್ಕು ಜನರ ಮೇಲೆ ದೂರು ನೀಡಿದ್ದಾರೆ. ಅದ್ರೆ ಈ ಕ್ಷಣದವರೆಗೂ ಅವರ ಮೇಲೆ ಕ್ರಮ ಆಗಿಲ್ಲ. ಈ ದೂರು ಸರ್ಕಾರದ ಗಮನಕ್ಕೆ ಹೋಗಿದೆ, ಚುನಾವಣಾ ಅಧಿಕಾರಿಗಳ ಗಮನಕ್ಕೂ ಹೋಗಿದೆ ಆದರೂ ಕ್ರಮವಿಲ್ಲ ಎಂದಿದ್ದಾರೆ.

ರಾಜ್ಯಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿಕೆ ಅಂತ ಲೋಕಲ್ ಪತ್ರಿಗಳಲ್ಲಿ ಬಂದಿದೆ. ಕಂಪ್ಲೈಟ್ ಕೊಟ್ಟ ನಂತ್ರ ಏನೂ ಆ್ಯಕ್ಷನ್ ಆಗಿಲ್ಲ. ಯಾರಾದ್ರು ಕಾರ್ಯಕರ್ತರು ಒಂದು ಪೋಸ್ಟ್ ಮಾಡಿದ್ರೆ ತೀರಾ ತರಾತುರಿಯಲ್ಲಿ ಮನೆ ಸರ್ಚ್ ಮಾಡಿ ಸ್ಟೇಷನ್​ಗೆ ಕರ್ಕೊಂಡ್ ಹೋಗಿ ಕೂರಿಸ್ತಾರೆ. ಅದ್ರೆ ಈ ಪ್ರಕರಣದಲ್ಲಿ ಇನ್ನೂ ಏನು ಕ್ರಮ ಆಗಿಲ್ಲ. ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿಗಳು ನೂರು ಬಾರಿ ಹೇಳಿದ್ದಾರೆ. ಜೆಡಿಎಸ್ ಪಕ್ಷ, ಕುಮಾರಸ್ವಾಮಿ ಗೆಲ್ಲಲ್ಲ ಅಂತ ಪದೇ ಪದೇ ಹೇಳಿದ್ದಾರೆ. ಇವರು ಅಷ್ಟು ಧೈರ್ಯವಾಗಿ ‌ಹೇಳಬೇಕಾದ್ರೆ, ಯಾರ್ಯಾರು ಇದಲ್ಲಿ ಪಾಲುದಾರರಿದ್ದಾರೆ ಅನ್ನೋದು ಗೊತ್ತಾಗಬೇಕು ಎಂದಿದ್ದಾರೆ.

ಹೆಣ್ಣು ಮಕ್ಕಳನ್ನು ಕರ್ಕೊಂಡ್ ಬಂದು ನನ್ನ ವಿರುದ್ದ ಹೋರಾಟ ಮಾಡಿಸಿದ್ರು, ಏಪ್ರಿಲ್​ 25ಕ್ಕೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಪತ್ರದಲ್ಲಿ ಪ್ರಭಾವಿ ರಾಜಕಾರಣಿಗಳು ಅಂತ ಇದೆ. ರಾಜಕಾರಣಿಗಳು ಅಂದ್ರೆ ಎಷ್ಟು ಜನ ನೂರು ಜನ ಬೇಕಾದ್ರು ಆಗಬಹುದು. ಇದಕ್ಕೆ ನಮ್ಮ ಮುಖ್ಯಮಂತ್ರಿಗಳು ಅವತ್ತು ರಾತ್ರಿಯೇ ವಿಶೇಷ ತಂಡ ರಚನೆ ಮಾಡಿದ್ರು. ಪ್ರತ್ರದಲ್ಲಿ ಎಲ್ಲೂ ರೇವಣ್ಣ, ಪ್ರಜ್ವಲ್ ರೇವಣ್ಣ ಹೆಸರಿಲ್ಲ. ಅದರೂ ಮುಖ್ಯಮಂತ್ರಿಗಳು ಟ್ವೀಟ್​ನಲ್ಲಿ ಪ್ರಜ್ವಲ್ ರೇವಣ್ಣ ಅಂತ ಹಾಕಿದ್ದಾರೆ. ಏಪ್ರಿಲ್​ 28ಕ್ಕೆ ಬೆಂಗಳೂರಿನಲ್ಲಿ ಕೂತ್ಕೊಂಡ್ ಕಂಪ್ಯೂಟರ್​​ನಲ್ಲಿ ಟೈಪ್ ಮಾಡಿಸಿ, ಹೊಳೆನರಸೀಪುರದಲ್ಲಿ ದೂರು ಕೊಡಿಸಿದ್ರು ಎಂದು ದೂರಿದ್ದಾರೆ.

Tags: DKShivakumarHassankumaraswamyPen Drive casePrajwal Revanna
Previous Post

BSYಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಬಿಎಸ್‌ವೈ ಕುಟುಂಬ

Next Post

ಎಸ್​ಐಟಿ ಅಂದ್ರೆ ‘ಸ್ಪೆಷಲ್​ ಇನ್ವೆಸ್ಟಿಗೇಷನ್​ ಟೀಂ ಅಲ್ಲವೇ ಅಲ್ಲ’

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
Next Post
ಎಸ್​ಐಟಿ ಅಂದ್ರೆ ‘ಸ್ಪೆಷಲ್​ ಇನ್ವೆಸ್ಟಿಗೇಷನ್​ ಟೀಂ ಅಲ್ಲವೇ ಅಲ್ಲ’

ಎಸ್​ಐಟಿ ಅಂದ್ರೆ ‘ಸ್ಪೆಷಲ್​ ಇನ್ವೆಸ್ಟಿಗೇಷನ್​ ಟೀಂ ಅಲ್ಲವೇ ಅಲ್ಲ’

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada