ದೆಹಲಿ ಸರ್ಕಾರವು ದಿನದಿಂದ ದಿನಕ್ಕೆ ಶಿಕ್ಚಣ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅಮೆರಿಕಾದ ಪ್ರತಿಷ್ಠಿತ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಮುಖಪುಟದಲ್ಲಿ ದೆಹಲಿ ಎಜುಕೇಷನ್ ಮಾಡಲ್ ಕುರಿತು ಮೀಶ್ ಸಿಸೋಡಿಯಾರನ್ನು ಹೊಗಳಿ ಬರೆದಿರುವುದನ್ನು ಸಹಿಸಲಾರದೆ ಕೇಂದ್ರ ಸರ್ಕಾರ ಅವರ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿಸಿದೆ ಎಂದು ಕಿಡಿಕಾರಿದ್ದಾರೆ.
ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಗುಜರಾತ್ಗೆ ಮನೀಶ್ ಸಿಸೋಡೊಯಾರನ್ನು ಉಸ್ತುವಾರಿಯಾಗಿ ನೇಮಿಸಿರುವುದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ ಆದ್ದರಿಂದ ಈ ರೀತಿಯ ದ್ವೇಷ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.

ಗುಜರಾತ್ ಚುನಾವಣೆ ಇರುವ ಕಾರಣ ಶೀಘ್ರವೇ ಸಿಸೋಡಿಯಾರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಬಂಧಿಸಲಿದೆ ಯಾರಿಗೆ ಗೊತ್ತು ನನ್ನನು ಸಹ ಬಂಧಿಸುತ್ತಾರೋ ಏನೋ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಗುಜರಾತಿನ ಮಹಾಜನತೆ ಕಳೆದ 27 ವರ್ಷಗಳಿಂದ ಬಿಜೆಪಿ ದುರಾಡಳಿತದಿಂದ ಹತಾಶೆಯಲ್ಲಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.