ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ಹಲ್ಲೆ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಘಟನೆ ನಡೆದಿದ್ದು, ಮೋದಿ ಬಗ್ಗೆ ಹಾಡು ಬರಿಯುತ್ತೀಯ, ನಿನ್ನನ್ನ ಸಾಯುಸುತ್ತೇವೆ ಅಂತ ಬೆದರಿಸಿ ಯುವಕನ ಬಟ್ಟೆ ಹರಿದು ದೈಹಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ರೋಹಿತ್ ಆರೋಪ ಮಾಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ ಪೊಲೀಸರು ಯುವಕನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ವಾರ ಮೋದಿ ಬಗ್ಗೆ ಒಂದು ಹಾಡು ಬರೆದಿದ್ದೆ, ಎಲ್ಲಾ ಕಡೆಗೂ ಹೋಗಿ ಮೋದಿ ಹಾಡನ್ನು ತೋರಿಸಿ ನನ್ನ ಯೂಟ್ಯೂಬ್ ಬಗ್ಗೆ ಮಾಹಿತಿ ನೀಡುತ್ತಿದೆ. ಆ ವೇಳೆ ಅಲ್ಲಿಗೆ ಬಂದ ಯುವಕನಿಗೆ ಈ ಬಗ್ಗೆ ತೋರಿಸಿದೆ. ಆತ ಮುಸಲ್ಮಾನ್ ಅಂತಾ ಗೊತ್ತಿರಲಿಲ್ಲ. ಆ ವೇಳೆ ಹಾಡು ತುಂಬಾ ಚೆನ್ನಾಗಿದೆ. ಬನ್ನಿ ನನ್ನ ಸ್ನೇಹಿತರಿಗೂ ತೋರಿಸೋಣ ಬನ್ನಿ ಎಂದು ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಬಾರಿಸಿದರು ಎಂದು ಹಲ್ಲೆಗೊಳಗಾದ ರೋಹಿತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.

ಆದರೆ ಹಲ್ಲೆ ನಡೆಯುವ ಮುನ್ನ ನಡೆದಿದ್ದು ಏನು..? ಹಲ್ಲೆ ನಡೆದಿದ್ಯಾ..? ಹಲ್ಲೆ ನಡೆದಿರುವುದಕ್ಕೆ ಏನಾದರು ಸಾಕ್ಷಿ ಇದೆ ಅನ್ನೋ ಬಗ್ಗೆ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಪಾಕ್, ಅಲ್ಲಾಹ್ ಪರ ಘೋಷಣೆ ಕೂಗುವಂತೆ ಒತ್ತಾಯಿಸಿರುವುದು ಸತ್ಯವೇ ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೋದಿ ಹಾಡು ಮಾಡಿದ್ದೀಯಾ..? ನಿನ್ನ ಸಾಯಿಸುತ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ. ಬಟ್ಟೆ ಹರಿದು ದೈಹಿಕವಾಗಿ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ ಎಂದಿದ್ದಾರೆ. ಆರೋಪಿಗಳ ಬಂಧನದ ಬಳಿಕ ಸ್ಪಷ್ಟ ಮಾಹಿತಿ ಹೊರ ಬೀಳಬೇಕಿದೆ.














