ಹೆಚ್ಚಿನವರ ಮನೆಯಲ್ಲಿ ಬೆಳ್ಳಿ ಪಾತ್ರೆಗಳು, ಮೂರ್ತಿಗಳು ,ಆಭರಣಗಳು, ಬೆಳ್ಳಿ ಪೂಜಾ ವಸ್ತುಗಳು, ಹೀಗೆ ಸಾಕಷ್ಟಿರುತ್ತದೆ. ಹೊಸದಾಗಿ ತಂದಾಗ ಬೆಳ್ಳಿ ವಸ್ತುಗಳ ಹೊಳಪು ಹೆಚ್ಚಿರುತ್ತದೆ ದಿನೇ ದಿನೇ ಕಳೆದಂತೆ ಬಳಸಿದರೆ ಅವು ತಮ್ಮ ಹೊಳಪುವನ್ನು ಕಳೆದುಕೊಳ್ಳುತ್ತವೆ. ಆಗ ಬೆಳ್ಳಿ ವಸ್ತುಗಳಲ್ಲಿ ಕಪ್ಪು ಕಲೆಗಳು ಅಥವಾ ಹಳದಿ ಕಲೆಗಳನ್ನ ಹೆಚ್ಚಾಗಿ ನೋಡುತ್ತೀರಾ. ಪಾತ್ರೆ ತೊಳೆಯುವ ಸೋಪ್ ಬಳಸಿ ಈ ಬೆಳ್ಳಿ ವಸ್ತುಗಳನ್ನ ಸಚಿ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಬೆಳ್ಳಿ ವಸ್ತುಗಳಲ್ಲಿ ಇರುವಂತಹ ಕಲೆಗಳನ್ನ ಶಮನ ಮಾಡಿ ಒಳ್ಳೆಯವಂತೆ ಮಾಡಲು ಈ ಸಿಂಪಲ್ ಟಿಪ್ಸ್ ಅನ್ನ ಟ್ರೈ ಮಾಡಿ.

ಡಿಟರ್ಜೆಂಟ್
ಒಂದು ಪಾತ್ರೆಗೆ ಕುದಿಯುವ ನೀರನ್ನ ಹಾಕಿ ಅದಕ್ಕೆ ಒಂದು ಸ್ಪೂನ್ ಅಷ್ಟು ಡಿಟರ್ಜೆಂಟ್ ಹಾಕಿ ನಂತರ ಅದರೊಳಗೆ ಬೆಳ್ಳಿ ಆಭರಣವನ್ನು ಹಾಕಿ ಕೆಲ ನಿಮಿಷಗಳ ಕಾಲ ನೆನೆಯಲು ಬಿಡಿ. ಬಳಿಕ ಆ ಪಾತ್ರೆಯನ್ನು ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜಿ ಬಿಸಿ ನೀರಿನಿಂದ ತೊಳೆಯುವುದರಿಂದ ಕಲೆಗಳು ನಿವಾರಣೆಯಾಗುತ್ತದೆ.

ಹಲ್ಲುಜ್ಜುವ ಪುಡಿ
ಒಂದು ಪಾತ್ರೆಗೆ ಬಿಸಿ ನೀರನ್ನ ಹಾಕಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಹಲ್ಲುಗಳನ್ನು ಸುಚಿಗೊಳಿಸುವ ಅಂದ್ರೆ ಹಲ್ಲುಜ್ಜುವ ಪುಡಿಯನ್ನು ಹಾಕಿ. ನಂತರ ಅದಕ್ಕೆ ಬೆಳ್ಳಿ ಆಭರಣಗಳನ್ನ ಬೆಳ್ಳಿ ಪೂಜೆ ಪಾತ್ರಗಳನ್ನ ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಒಂದು ಬ್ರಷ್ ಬಳಸಿ ಬಳಸಿ ಉಜ್ಜುವುದರಿಂದ ಕಲೆಗಳು ನಿವಾರಣೆಯಾಗಿ ಹೊಳಪು ಹೆಚ್ಚಾಗುತ್ತದೆ.

ಅಡುಗೆ ಸೋಡಾ
ಅಡುಗೆ ಸೋಡಕ್ಕೆ ಸ್ವಲ್ಪ ನಿಂಬೆರಸವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದನ್ನ ಬೆಳ್ಳಿ ಪಾತ್ರೆಗಳಲ್ಲಿ ಕಲೆಯಾಗಿರುವ ಜಾಗಕ್ಕೆ ಅಥವಾ ಇಡೀ ಬೆಳ್ಳಿ ಪಾತ್ರೆಗೆ ಹಚ್ಚಿ ಒಂದಿಷ್ಟು ನಿಮಿಷ ಹಾಗೆ ಬಿಟ್ಟು ನಂತರ ಉಜ್ಜಿ ಬಿಸಿ ನೀರಿನಿಂದ ತೊಳೆಯುವುದರಿಂದ ಹೊಳಪು ಹೆಚ್ಚಾಗುತ್ತದೆ.

ವಿನೆಗರ್
ಎರಡು ಮೂರು ಟೇಬಲ್ ಸ್ಪೂನ್ ನಷ್ಟು ವಿನೆಗರ್ ಅನ್ನ ಬಿಸಿನೀರಿಗೆ ಹಾಕಿ ನಂತರ ಒಂದು ಟೇಬಲ್ ಸ್ಪೂನ್ ಅಷ್ಟು ಬೇಕಿಂಗ್ ಸೋಡವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಬೆಳ್ಳಿ ವಸ್ತುಗಳನ್ನ ಅದರೊಳಗೆ ಹಾಕಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ತೊಳೆಯುವುದರಿಂದ ಕಲೆಗಳು ಹೋಗುತ್ತದೆ.
