ಹೆಚ್ಚು ಜನ ಮಕ್ಕಳಿಗೆ ಡೈಪರ್ಗಳನ್ನ ಬಳಸುತ್ತಾರೆ. ಹೊರಗಡೆ ಹೋಗುವಾಗ ಅಥವಾ ರಾತ್ರಿ ಮಲಗಿದಾಗ ಡೈಪರ್ ಬಳಸುವುದು ಸರಿ..ಆದ್ರೆ ಕೆಲವರಂತು ಇಡಿ ದಿನ ಡೈಪರ್ ಬಳಸುತ್ತಾರೆ..ಇದರಿಂದ ಸಮಸ್ಯೆಗಳು ಶುರುವಾಗುತ್ತದೆ..

ಗುಳ್ಳೆಗಳು
ಮೂತ್ರ ಮತ್ತು ಮಲಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮಕ್ಕಳ ಚರ್ಮದಲ್ಲಿ ಕೆಂಪು ಗುಳ್ಳೆಗಳು ಮತ್ತು ದದ್ದುಗಳು ಉಂಟಾಗಬಹುದು.ಇದರಿಂದ ಮಕ್ಕಳಿಗೆ ಕಿರಿ ಕಿರಿ ಶುರುವಾಗುತ್ತದೆ.
ಯೂರಿನ್ ಇನ್ಫೆಕ್ಷನ್
ಡಯಾಪರ್‌ನ ಇಡಿ ದಿನ ಬಳಸುವುದರಿಂದ ಯೂರಿನ್ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚು,ಕಾರಣ ಡೈಪರ್ ವೆಟ್ ಆಗಿರುತ್ತದೆ..ಆರ್ದ್ರ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತದೆ , ಇದು UTI ಗಳ ಅಪಾಯವನ್ನು ಹೆಚ್ಚಿಸುತ್ತದೆ.

ಫಂಗಲ್ ಇನ್ಫೆಕ್ಷನ್
ಡೈಪರ್ ನಿಂದ ಅತಿಯಾದ ತೇವಾಂಶವು ಥ್ರಷ್ ಅಥವಾ ರಿಂಗ್‌ವರ್ಮ್‌ನಂತಹ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.ಇದು ಮಕ್ಕಳ ಚರ್ಮಕ್ಕೆ ಅಪಾಯ..
ಸ್ಕಿನ್ ಕಂಡೀಶನ್
ಡೈಪರ್ ಬಳಕೆಯು ಎಸ್ಜಿಮಾ ಅಥವಾ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗಿತ್ತದೆ..