ನನ್ನ ಐದು ವರ್ಷಗಳ ಅವಧಿಯಲ್ಲಿ ವರ್ಷಕ್ಕೆ 3ಲಕ್ಷ ಮನೆಯಂತೆ ಐದು ವರ್ಷದಲ್ಲಿ 15ಲಕ್ಷ ಆಶ್ರಯ ಮನೆಗಳನ್ನು ಬಡವರಿಗೆ ನೀಡಿದ್ದೆ, ಆದರೆ ಬಿಜೆಪಿಯವರು ಕಳೆದ ಮೂರೂವರೆ ವರ್ಷಗಳಿಂದ ಒಂದು ಊರಿಗೆ ಮೂರು ಮನೆ ನೀಡಿಲ್ಲ. ಇವರ ಮನೆ ಹಾಳಾಗೋಗ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರವನ್ನ ಶಪಿಸಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ನಮ್ಮ ಕಾಂಗ್ರೆಸ್ ಪಕ್ಷವನ್ನುಮತ್ತೆ ಅಧಿಕಾರಕ್ಕೆ ತಂದರೆ ರಾಜ್ಯ ಎಲ್ಲಾ ಬಡವರಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯನ್ನು ಜಾರಿಗೆ ತರುತ್ತೇವೆ. ಕೆಆರ್‌ಪೇಟೆಯಲ್ಲಿ ನಾವು ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರನ್ನು ಗೆಲ್ಲಿಸಿದರೆ ನನಗೆ ಶಕ್ತಿ ಬರುತ್ತದೆ. ಆಗ ನಾನು ನಿಮ್ಮ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಬೇರೆ ಪಕ್ಷಗಳ ಸುಳ್ಳು ಭರವಸೆಗಳನ್ನು ನಂಬಬಾರದು ನಮ್ಮ ಕಾಂಗ್ರೆಸ್ ಪಕ್ಷದ ಐದು ವರ್ಷದ ಸಾಧನೆ ನೋಡಿ ಮತ ನೀಡಿ ಆಶೀರ್ವಾದ ಮಾಡಬೇಕು. ನಾನು ಹಾಸ್ಟೆಲ್ ಸಿಗದ ಮಕ್ಕಳಿಗೆ ಮಾಸಿಕ 10ಸಾವಿರ ನೀಡುವ ವಿದ್ಯಾಸಿರಿ ಯೋಜನೆ ಜಾರಿಗೆ ತಂದಿದ್ದೆ, ಬಡವರು ಮತ್ತು ಕೂಲಿಕಾರ್ಮಿಕರಿಗೆ ಊಟಕ್ಕೆ ಅನುಕೂಲವಾಗಲೆಂದು ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ನಿಲ್ಲಿಸುವ ಮೂಲಕ ಬಡವರಿಗೆ ಆಸರೆಯಾಗಿದ್ದೆ ಆದರೆ ಈ ಬಿಜೆಪಿಯರು ಎರಡೂ ಯೋಜನೆಯನ್ನು ನಿಲ್ಲಿಸುವ ಮೂಲಕ ಬಡವರ ವಿರೋಧಿ ಆಡಳಿತ ನಡೆಸುತ್ತಿದ್ದಾರೆ ಇಂತಹ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದ್ದಾರೆ.
1988 ರಲ್ಲಿ ಮೊದಲ ಭಾರಿಗೆ ನಾನು ಸಚಿವನಾಗಿದ್ದ ವೇಳೆ 500ನೇ ಕನಕ ಜಯಂತಿ ಯನ್ನು ವರ್ಷವಿಡೀ ಆಚರಣೆ ಮಾಡಲಾಗಿತ್ತು. ನಂತರ 1992ರಲ್ಲಿ ಕನಕ ಗುರುಪೀಠ ಆರಂಭಿಸಲಾಯಿತು. ಇದರಿಂದ ಕುರುಬ ಸಮಾಜವು ಶಿಕ್ಷಣ, ಆರೋಗ್ಯ, ಆರ್ಥಿಕ ಶಕ್ತಿ, ರಾಜಕೀಯ ಶಕ್ತಿ ಆರಂಭಿಸಲು ಸಾಧ್ಯವಾಯಿತು. ಶೋಷಿತ ವರ್ಗದ ಜನ ಶಿಕ್ಷಣ ಪಡೆಯಬೇಕು. ಸಂಘಟಿತಾಗಬೇಕು. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದಿದ್ದಾರೆ.












