ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಲ್ಲಿ ಸಚಿವರು, ಶಾಸಕರು ಕೆಲವು ವಿಚಾರಗಳನ್ನ ಚರ್ಚೆ ಆಗಿವೆ ಹಾಗೇ ಸಚಿವ ರಾಜಣ್ಣ ಕೂಡ ಹೇಳಿಕೆ ನೀಡಿದರು. ಆದೇ ವಿಚಾರ ರಾಜ್ಯದಲ್ಲಿ ಮುಂದಿನ ಸಿಎಂ ಬದಲಾವಣೆಯಲ್ಲಿ ಆರೋಪ ಪ್ರತಿ ಆರೋಪಗಳು ಕೇಳಿ ಬರುತ್ತಿದೆ. 5 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಎಂದು ಸಚಿವ ಎಂ ಬಿ ಪಾಟೀಲ್ ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ.
ಇದೇ ಕಾರಣಕ್ಕೆ ಸಿಎಂ ಸ್ಥಾನ ಬದಲಾವಣೆ ವಿಚಾರ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಹೊಸಪೇಟೆಯಲ್ಲಿ ಸಚಿವ ಎಂ.ಬಿ ಪಾಟೀಲ ಹೇಳಿಕೆ ಕೊಟ್ಟಿದ್ದಾರೆ.
ಸಚಿವ ಜಾರಕಿಹೊಳಿ ಮನೆಯಲ್ಲಿ ಸಿಎಂಗೆ ಔತಣ ಕೂಟ ವಿಚಾರ ಡಿ.ಕೆ. ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ರು, ಹಾಗಾಗಿ ಔತಣ ಕೂಟದಲ್ಲಿ ಭಾಗಿಯಾಗಿರಲಿಲ್ಲ ಸಚಿವರು, ಶಾಸಕರು ಕೂಡಿ ಊಟ ಮಾಡಿದ್ರೆ ಏನು ತಪ್ಪಿಲ್ಲ.ಒಮ್ಮೊಮ್ಮೆ ನಾನು ಸಹ ಬಸವರಾಜ ಬೊಮ್ಮಾಯಿ ಅವರೊಡನೆ ಕೂಡಿ ಊಟ ಮಾಡ್ತೀವೆ, ಅದರಲ್ಲಿ ತಪ್ಪೇನು-?
ಸಂಕ್ರಮಣ ಹಬ್ಬದ ಬಳಿಕ ಆಪರೇಶನ್ ಆಗುತ್ತೆ ಎನ್ನುವ ವಿಚಾರಈಗಾಗಲೇ ಜೆಡಿಎಸ್ ಶಾಸಕರು ನಮ್ಮ ಜೊತೆ ಇದ್ದಾರೆ.ಹಾಗೇ ಬಿಜೆಪಿಯವ್ರು ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ.ನಮ್ಮ ಪಕ್ಷಕ್ಕೆ ಬರೋಕೆ ತುದಿಗಾಲಮೇಲೆ ನಿಂತಿದ್ದಾರೆ.
ರಾಜಕೀಯ ಬೆಳವಣಿಗೆ ಏನಾದ್ರು ಆದ್ರೆ, ಅವರೆಲ್ಲರನ್ನ ಪಕ್ಷಕ್ಕೆ ಕರೆತರುತ್ತೇವೆ.ಯಾರ್ಯಾರು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವುದು ನಿಮಗೂ ತಿಳಿದಿರುವ ವಿಚಾರ.ಆಪರೇಶನ್ ಹಸ್ತದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ ಸಚಿವ ಎಂ.ಬಿ ಪಾಟೀಲ.