ಬೀದರ್: ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಮಾನ, ಮರ್ಯಾದೆ ನೀತಿಗೆಟ್ಟವರು ಸಿಎಂ ಬೆನ್ನಿಗೆ ನಿಂತಿದ್ದಾರೆ ಎಂದು ಬಿಜೆಪಿ ಶಾಸಕ ಶರಣು ಸಲಗಾರ್ ವಾಗ್ದಾಳಿ ನಡೆಸಿದರು.
ಹಗರಣ ಇದ್ದರೂ ರಾಜೀನಾಮೆಗೆ ಸಿಎಂ ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲೇ ಕಾಂಗ್ರೆಸ್ಗೆ ಸಿದ್ದರಾಮಯ್ಯ ಬೆನ್ನೆಲುಬು ಆಗಿದ್ದು, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಕಾಂಗ್ರೆಸ್ ಮುಳುಗುವ ಭೀತಿ ಇದೆ ಎಂದರು.
65 ಕೋಟಿ ರೂಪಾಯಿ ಕೊಟ್ಟರೆ ಮುಡಾ ಸೈಟ್ ವಾಪಸ್ ಕೊಡುತ್ತೀನಿ ಎಂದು ಸಿಎಂ ಹೇಳಿದ್ದರು. ಆದರೆ ಸಿಎಂ ಅವರ ಪತ್ನಿಯೇ ಸೈಟ್ಗಳನ್ನು ಮುಡಾಗೆ ವಾಪಸ್ ಕೊಟ್ಟಿದ್ದಾರೆ. ಜನರನ್ನು ಎಮೋಷನಲ್ ಬ್ಲ್ಯಾಕ್ಮೇಲ್ ಮಾಡಿ ಮುಡಾ ಸೈಟ್ ವಾಪಸ್ ಕೊಡುವ ಬಗ್ಗೆ ಪತ್ರ ಬರೆಯಲಾಗಿತ್ತು. ತನಿಖೆಯಿಂದ ತಪ್ಪಿಸಿಕೊಳ್ಳಲು ಪತ್ನಿ ಬಳಿ ಸಿಎಂ ಪತ್ರ ಬರೆಸಿದ್ದಾರೆ. ಬೇಕಿದ್ದರೆ ನನ್ನ ಪತ್ನಿಗೆ ಶಿಕ್ಷಿ ಕೊಡ ಎಂಬ ಧೋರಣೆ ಸಿಎಂ ಅವರದ್ದು ಎಂದು ಸಲಗಾರ್ ಟೀಕಿಸಿದರು.