ಇದೇ ಡಿಸೆಂಬರ್ 13ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಚಳಿ ಮಧ್ಯೆಯೂ ಸಿಎಂ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ವಾಕ್ಸಮರ ಸದನದ ಕಾವು ಹೆಚ್ಚಿಸಲಿದೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಕತ್ತಿ ಝಳಪಿಸಲು ಸಿದ್ದರಾಮಯ್ಯ ತಯಾರಿ ನಡೆಸುತ್ತಿದ್ರೆ, ಸಿದ್ದು ಕತ್ತಿಗೆ ಗುರಾಣಿ ಹಿಡಿಯಲು ಸಿಎಂ ಬೊಮ್ಮಾಯಿ ಸನ್ನದ್ಧರಾಗಿದ್ದಾರೆ.
ಬಿಡಿಎ ಕಚೇರಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಮೇಲೆ ಮೇಲೆ ಎಸಿಬಿ ರೇಡ್, ಬಿಟ್ ಕಾಯಿನ್ ಚಕ್ರದ ಸುಳಿ, ಗುತ್ತಿಗೆದಾರರು ಮಾಡಿರೋ 40 ಪರ್ಸೆಂಟ್ ಆರೋಪ. ಹೀಗೆ ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು ರಾಜ್ಯ ಸರ್ಕಾರದ ಕೊರಳು ಸುತ್ತಿಕೊಂಡಿವೆ. ಇಂಥ ಸಂದರ್ಭದಲ್ಲೇ ಚಳಿಗಾಲದ ಅಧಿವೇಶನ ಎದುರಾಗಿದೆ. ಡಿಸಿಂಬರ್ 13ರಿಂದ ಅಧಿವೇಶನ ಆರಂಭವಾಗಲಿದೆ. ಭ್ರಷ್ಟಾಚಾರದ ಅಸ್ತ್ರಗಳನ್ನೇ ಬಳಸಿಕೊಂಡು ಸರ್ಕಾರವನ್ನು ಬಗ್ಗು ಬಡಿಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಶಸ್ತ್ರಾಭ್ಯಾಸ ನಡೆಸುತ್ತಿದ್ದು, ಸಿದ್ದರಾಮಯ್ಯ ವರ್ಸಸ್ ಬೊಮ್ಮಾಯಿ ಸಮರಕ್ಕೆ ಸದನದ ರಂಗಸಜ್ಜಿಕೆ ಸಿದ್ಧವಾಗ್ತಿದೆ.
ಸಮರಕ್ಕೆ ‘ಸಿದ್ಧ’ರಾಮಯ್ಯ
ಅಸ್ತ್ರ 1
ಸರ್ಕಾರದ ವಿರುದ್ಧ ಗುತ್ತಿಗೆದಾರರ 40% ಗೌರ್ಮೆಂಟ್ ಆರೋಪ
ಕಮಿಷನ್ ಆಪಾದನೆ ಆಧಾರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ
2018ರ ಚುನಾವಣೆ ವೇಳೆ ಸಿದ್ದು ಸರ್ಕಾರವನ್ನು ಟೀಕಿಸಿದ್ದ ಮೋದಿ
ಸಿದ್ದರಾಮಯ್ಯ ಸರ್ಕಾರ 10% ಗೌರ್ಮೆಂಟ್ ಎಂದಿದ್ದ ಪ್ರಧಾನಿ
ರಾಜಕೀಯ ರಿವೆಂಜ್ ತೆಗೆದುಕೊಳ್ಳಲು ಸಜ್ಜಾದ ಸಿದ್ದರಾಮಯ್ಯ
ಅಸ್ತ್ರ 2
ಬಿಟ್ ಕಾಯಿನ್ ಪ್ರಕರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದ ಆರೋಪ
ಪ್ರಕರಣ ನಡೆದಾಗ ಗೃಹ ಸಚಿವರಾಗಿದ್ದ ಇಂದಿನ ಸಿಎಂ ಬೊಮ್ಮಾಯಿ
ಬೊಮ್ಮಾಯಿ ವಿರುದ್ಧವೇ ನೇರ ವಾಗ್ದಾಳಿಗೆ ಸಜ್ಜಾದ ಸಿದ್ದರಾಮಯ್ಯ
ಅಸ್ತ್ರ 3
ಬಿಡಿಎ ಮೇಲೆ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ರೇಡ್
ಎಸಿಬಿ ವರದಿಯಲ್ಲಿ ಬಿಡಿಎಯಿಂದ ಸರ್ಕಾರಕ್ಕೆ ನಷ್ಟದ ಉಲ್ಲೇಖ
ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂಪಾಯಿ ನಷ್ಟವೆಂದು ವರದಿ
ದಾಖಲೆಗಳ ಸಹಿತ ಸರ್ಕಾರದ ವಿರುದ್ಧ ಹರಿಹಾಯಲು ವಿಪಕ್ಷ ಸಜ್ಜು
ಸರ್ಕಾರವನ್ನು ಹಣಿಯಲು ಸಿದ್ದರಾಮಯ್ಯ ಸಿದ್ಧವಾಗಿದ್ರೆ, ಸಿದ್ದು ಅಸ್ತ್ರಗಳಿಗೆ ಕೌಂಟರ್ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿ ತಂತ್ರಗಳನ್ನು ಹೆಣೆದಿದ್ದಾರೆ.
ಪ್ರತಿತಂತ್ರ-1
ಬಿಟ್ಕಾಯಿನ್ ವಿಚಾರ ಪ್ರಸ್ತಾಪಿಸಿದ್ರೆ ದಾಖಲೆಗಳನ್ನ ಕೊಡಿ ಅಂತ ಕೇಳುವುದು
ಪ್ರತಿತಂತ್ರ-2
ನಿಮ್ಮ ಪಕ್ಷದ ನಾಯಕರ ಮಕ್ಕಳ ಹೆಸರೇ ತಳುಕು ಹಾಕಿಕೊಂಡಿದೆ ಅಂತ ಇಕ್ಕಟ್ಟಿಗೆ ಸಿಲುಕಿಸುವುದು
ಪ್ರತಿತಂತ್ರ-3
40% ಸರ್ಕಾರ ಅನ್ನೋ ಆರೋಪದ ಬಗ್ಗೆ ಪ್ರಸ್ತಾಪಿಸಿದರೆ ಅದಕ್ಕೂ ತಿರುಗೇಟು
ಪ್ರತಿತಂತ್ರ-4
ನಮ್ಮದು ಈಗ ಅಧಿಕಾರಕ್ಕೆ ಬಂದ ಸರ್ಕಾರ, ನೀವು 14 ತಿಂಗಳು ಕೈಜೋಡಿಸಿದ್ದು 40 % ಸರ್ಕಾರ
ಪ್ರತಿತಂತ್ರ-5
ಯಡಿಯೂರಪ್ಪರ ರಾಜ್ಯ ಪ್ರವಾಸ ಪ್ರಸ್ತಾಪಿಸಿದ್ರೆ ಅದಕ್ಕೂ ಸಿಎಂ ಬಳಿ ಸಿದ್ಧವಾಗಿದೆ ಪ್ರತ್ಯಸ್ತ್ರ
ಪ್ರತಿತಂತ್ರ-6
ಅದರ ಬಗ್ಗೆ ಈಗ ಚರ್ಚೆ ಯಾಕೆ? ನಾವೂ, ನಮ್ಮ ನಾಯಕರು ಜೊತೆಗಿದ್ದೇವೆ ಅಂತ ಬಿಂಬಿಸುವುದು
ಪ್ರತಿತಂತ್ರ-7
ಮಳೆ ಮತ್ತು ಮಳೆ ಹಾನಿ ವಿಚಾರಕ್ಕೆ ಪ್ರಕೃತಿ ವಿಕೋಪ ಅಂತ ಸಮರ್ಥಿಸಿಕೊಳ್ಳುವುದು
ಪ್ರತಿತಂತ್ರ-08
ಕೊರೊನಾ ವಿಚಾರ ಪ್ರಸ್ತಾಪಿಸಿದ್ರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲಸಗಳ ಮಾಹಿತಿ ನೀಡುವುದು
ಇನ್ನು ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ರಾಜ್ಯದಲ್ಲಿ ಮತ್ತೆ ಕೊರೊನಾ ಕಾರ್ಮೋಡ ಕವಿಯುತ್ತಿರೋ ಹಿನ್ನೆಲೆ ಸುವರ್ಣ ಸೌಧಕ್ಕೆ ಅಧಿವೇಶನದ ಭಾಗ್ಯ ಈ ಬಾರಿಯೂ ಮಿಸ್ ಆಗೋ ಸಾಧ್ಯತೆಯಿದೆ.
ಸದನ ಅಂದ್ರೇನೆ ಮಾತಿನ ಕದನ ಅನ್ನೋಷ್ಟರ ಮಟ್ಟಿಗೆ ಸರ್ಕಾರ ಹಾಗೂ ವಿಪಕ್ಷಗಳ ಮಧ್ಯೆ ಜಟಾಪಟಿ ನಡೆಯುತ್ತದೆ. ಅದರಲ್ಲೂ ಈ ಬಾರಿ ಭ್ರಷ್ಟಾಚಾರದ ಬ್ರಹ್ಮಾಸ್ತ್ರ ವಿಪಕ್ಷಗಳ ಕೈ ಸೇರಿದೆ. ಸಿದ್ದರಾಮಯ್ಯ ಬೀಸುವ ಚಾಟಿ ಏಟಿನಿಂದ ಸರ್ಕಾರವನ್ನು ರಕ್ಷಿಸಿಕೊಳ್ಳುವ ಅಗ್ನಿಪರೀಕ್ಷೆ ಸಿಎಂ ಬೊಮ್ಮಾಯಿಗೆ ಎದುರಾಗಲಿದೆ.